
ಮೊಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಮಸೀದಿಯ ಖತಿಬರಾದ ಅಶ್ರಫ್ ಮುಸ್ಲಿಯಾರ್ ರವರು ಕುತುಬಾ ನೆರವೇರಿಸಿ ಈದ್ ಸಂದೇಶವನ್ನು ನೀಡಿ ಮಾತನಾಡಿ ಹಬ್ಬ ಸಂಭ್ರಮದ ಹೆಸರಿನಲ್ಲಿ ಒಂದು ಕ್ಷಣ ಆಚರಿಸುವ ಅನಿಸ್ಲಾಮಿಕ ಕಾರ್ಯಕ್ರಮಗಳು ನಮ್ಮ ಶಾಶ್ವತ ಇಹ ಪರ ನಷ್ಟಕ್ಕೆ ಹೇತು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಇಸ್ಲಾಮಿನಲ್ಲಿ ಸಂಭ್ರಮಗಳ ಆಚರಣೆಗೂ ಒಂದು ಮಿತಿ ಇದೆ ಅವುಗಳು ಪಾಶ್ಚಾತ್ಯ ಆಚರಣೆಗಳೊಂದಿಗೆ ಸಮಿಕರಿಸುವುದನ್ನು ಇಸ್ಲಾಂ ಯಾವತ್ತು ಒಪ್ಪುವುದಿಲ್ಲ ಸಂಭ್ರಮದ ಆಚರಣೆಯಲ್ಲೂ ಸ್ರಷ್ಟಿಕರ್ತನಾದ ಅಲ್ಲಾಹನ ಸ್ಮರಣೆಯನ್ನು ಅಧಿಕಗೊಳಿಸಲು ಇಸ್ಲಾಂ ಕಲ್ಪಿಸುತ್ತದೆ ಹಬ್ಬಗಳ ಹೆಸರಿನಲ್ಲಿ ಒಂದು ಕ್ಷಣ ಕೈಗೊಳ್ಳುವ ಅನಿಸ್ಲಾಮಿಕ ಸಂಭ್ರಮಾಚರಣೆ ಮುಸಲ್ಮಾನೊಬ್ಬನ ಜೀವಮಾನವಿಡೀ ಸಂಪಾದಿಸಿದ ಸತ್ಕರ್ಮಗಳ ವಿನಾಶಕ್ಕೆ ಹೇತುವಾಗುವ ಸಾಧ್ಯತೆ ಇದೆ ಎಂದರು. ಈ ಸಂದರ್ಭದಲ್ಲಿ ಸುಮಾರು ಎಂಟು ವರ್ಷಗಳಿಂದ ಮಸೀದಿಯ ಖತಿಬರಾಗಿ ಸೇವೆಗೈದ ಆಶ್ರಫ್ ಮುಸ್ಲಿಯಾರ್ ರವರನ್ನು ಜಮಾಯತ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಸೀದಿಯ ಮುಹಲ್ಲಿಮ್ ರೌಫ್ ಆಜ್ಹರಿ
ಜಮಾಯತ್ ಅಧ್ಯಕ್ಷರಾದ ಮಹಮ್ಮದ್ ಆಲಿ ಪೆರಾಜೆ ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಬಿ ಎಂ., ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಖಾದರ್ ಅಕ್ಕರೆ, ಹನೀಫ್ ಹಾಜಿ ಕೆ ಎಂ., ಮಹಮ್ಮದ್ ಮುಸ್ಲಿಯಾರ್ ಎಲಿಮಲೆ, ಸಿದ್ದಿಕ್ ಹುದವಿ ಮಾಡನ್ನೂರ್ ಹಾಗೂ ಆಡಳಿತ ಸಮಿತಿಯ ಸದಸ್ಯರು ಮತ್ತು ಜಮಾಯತಿನ ಸರ್ವರೂ ಪಾಲ್ಗೊಂಡರು.