ಗುತ್ತಿಗಾರು : ಮಾ.05 ಹಾಗೂ 06 ರಂದು ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ

. . . . . . . . .

ಗುತ್ತಿಗಾರಿನ ಮುತ್ತಪ್ಪನಗರದಲ್ಲಿರುವ ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ಮಾ.05 ಹಾಗೂ 06 ರಂದು ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ನಡೆಯಲಿದೆ.

. . . . . . .

ಮಾ.05 ರಂದು ಬೆಳಿಗ್ಗೆ 9:00 ಗಂಟೆಗೆ ಗಣಪತಿ ಹವನ, ಸಂಜೆ 4:00 ಗಂಟೆಗೆ ಶ್ರೀ ದೈವಕ್ಕೆ ಪೈಂಗುತ್ತಿ, ಸಂಜೆ 5:30 ರಿಂದ ಶ್ರೀ ಮುತ್ತಪ್ಪ ದೈವದ ನೇಮ, ಪ್ರಸಾದ ವಿತರಣೆ, ರಾತ್ರಿ 8:30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 9:00 ಗಂಟೆಯಿಂದ ಅನ್ನಸಂತರ್ಪಣೆ ನಡೆದು ಶ್ರೀ ಮುತ್ತಪ್ಪ ದೈವದ ಪೂರ್ವಜನ್ಮದ ಕಳಿಕ್ಕಾಪಾಟ್ ನಡೆದು ರಾತ್ರಿ 11:00 ರಿಂದ ಸಸಿಹಿತ್ಲು ಮೇಳದವರಿಂದ “ಕತೆಗಾರ್ತಿ ಕಲ್ಪನಾ” ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.06 ರಂದು ಬೆಳಿಗ್ಗೆ 6:00 ಗಂಟೆಯಿಂದ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮ, ಪ್ರಸಾದ ವಿತರಣೆ ಹಾಗೂ ಬೆಳಿಗ್ಗೆ 9:00 ಗಂಟೆಯಿಂದ ಪೈಂಗುತ್ತಿ ವೆಳ್ಳಾಟಂ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರರಾದ ವೆಂಕಟ್ ವಳಲಂಬೆ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading