ಹಳೆಯ ಸೇತುವೆಗಳ ಪುನರ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ- ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ : ಸುಳ್ಯ ತಾಲೂಕಿನಲ್ಲಿ ಭಾರಿ ಸಂಚಲನ ಮೂಡಿಸಿದ ಸೇತುವೆಗಳ ಪುನರ್ ನಿರ್ಮಾಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯರವರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು, ಇದೀಗ ಸರಕಾರವು ಶಾಸಕರ ಮನವಿಯನ್ನು ಪುರಸ್ಕರಿಸಿ ಸುಳ್ಯ ನಾಗಪಟ್ಟಣ ಸಂಪರ್ಕಿಸುವ ನಾಗಪಟ್ಟಣ ಸೇತುವೆ ದುರಸ್ತಿಗೆ 70 ಲಕ್ಷ ಹಾಗೆಯೇ ಗುತ್ತಿಗಾರ್, ಬಳ್ಳಕ್ಕ ಪಂಜ ಜಳಕದ ಹೊಳೆ ಸೇತುವೆ ದುರಸ್ತಿಗೆ 70 , ಪುಳಿಕುಕ್ಕು ಎಡಮಂಗಲ ರಸ್ತೆಯ ಮಲೇಂಗೇರಿ ಎಂಬಲ್ಲಿ ಕುಸಿದ ಮೋರಿಯ ಪುನರ್ ನಿರ್ಮಾಣಕ್ಕೆ 30 ಲಕ್ಷ ಅನುದಾನ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಈ ಕೆಲಸಗಳು ಆಗಲಿದೆ ಎಂದು ಎಂಜಿನಿಯರ್ ಗೋಪಾಲ್ ಕೆ., ಶಾಸಕಿ ಭಾಗೀರಥಿ ಮುರುಳ್ಯರ ಸಭೆಯಲ್ಲಿ ತಿಳಿಸಿದರು. ಈ ಸಂಧರ್ಭದಲ್ಲಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಎಸ್ ಎನ್ ಮನ್ಮಥ , ಪಕ್ಷದ ನಾಯಕರಾದ ಹರೀಶ್ ಕಂಜಿಪಿಲಿ , ಸುಬೋದ್ ಶೆಟ್ಟಿ ಮೇನಾಲ , ಸುನಿಲ್ ಕೇರ್ಪಳ್ಳ , ಬಾಲಕೃಷ್ಣ ಕೇಲಾಡಿ ಸಹಿತ ತಾಲೂಕಿನ ಎಲ್ಲಾ ವಿಭಾಗಗಳ ಎಂಜಿನಿಯರ್ ಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading