

ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ
ಶ್ರೀ ವಿಶ್ವನಾಥ ಅತ್ಯಾಡಿ ಮತ್ತು ಸಹೋದರರು ಲೇಖನಿ ಸಾಮಗ್ರಿ ಹಾಗೂ ಬರವಣಿಗೆ ಪುಸ್ತಕಗಳನ್ನು ಎಲ್ಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳೂ ಆಗಿರುವ ಇವರು ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆ ಉತ್ತಮವಾಗಬೇಕು ಎಂಬ ಸದುದ್ದೇಶದಿಂದ ಹಲವಾರು ವರ್ಷಗಳಿಂದ ಇಂತಹ ಕೊಡುಗೆಗಳನ್ನು ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಶಾಲೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಂದು ಕೊಡುಗೈ ದಾನಿಗಳಾಗಿ ಸಹಕರಿಸುತ್ತಿರುತ್ತಾರೆ. ಅಂತೆಯೇ 2024- 25ನೇ ಶೈಕ್ಷಣಿಕ ವರ್ಷದ 61 ಮಕ್ಕಳಿಗೆ ಬರವಣಿಗೆ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ನೀಡಿರುತ್ತಾರೆ. ವಿತರಣಾ ಸಂದರ್ಭದಲ್ಲಿ ವಿಶ್ವನಾಥ ಅತ್ಯಾಡಿ ಅವರ ಸಹೋದರರಾದ ನಿವೃತ್ತ ಸೈನಿಕರು, ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುಬ್ರಹ್ಮಣ್ಯ ಅತ್ಯಾಡಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಚಂದ್ರಶೇಖರ ಪಾರೆಪ್ಪಾಡಿ, ಶಿಕ್ಷಕರಾದ ಶ್ರೀಮತಿ ವನಜಾಕ್ಷಿ, ಶ್ರೀ ಮಹೇಶ್ ಕೆ ಕೆ, ಶ್ರೀಮತಿ ಸುಮನ, ಶ್ರೀಮತಿ ಮೋಕ್ಷ ಹಾಗೂ ಎಸ್ಡಿಎಂಸಿ ಸದಸ್ಯರಾದ ಶ್ರೀ ಶಶಿಧರ ಮರಕತ ಉಪಸ್ಥಿತರಿದ್ದರು.