
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಗ್ರಾಮ ಪಂಚಾಯತ್ ಗುತ್ತಿಗಾರು ಅನುಮತಿಯೊಂದಿಗೆ, ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ಚಾರ್ಮಾತ ಇವರ ಮೇಲುಸ್ತುವಾರಿಯೊಂದಿಗೆ ಮಾಡಲಾಯಿತು. ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ ಪಾರೆಪ್ಪಾಡಿ ಮೊದಲಿಗೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳೊಂದಿಗೆ ಎಸ್ ಡಿ ಎಂ ಸಿ ರಚನೆ , ಅಧ್ಯಕ್ಷರು, ಸದಸ್ಯರುಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿದರು. ಬಳಿಕ ಹಿಂದಿನ ಸಮಿತಿಯ ಅಧ್ಯಕ್ಷರು ಸದಸ್ಯರುಗಳ ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಮಿತಿಯನ್ನು ಬರ್ಕಾಸ್ತುಗೊಳಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿಯವರು ತಮ್ಮ 13 ವರ್ಷಗಳ ಸುದೀರ್ಘ ಅವಧಿಯ ಶಾಲೆ, ಸಮುದಾಯ, ಶಿಕ್ಷಕ, ವಿದ್ಯಾರ್ಥಿ, ಸಮಿತಿ ಸದಸ್ಯರುಗಳ ಅವಿನಾಭಾವ ಸಂಬಂಧದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಗೆ ಮನವರಿಕೆ ಮಾಡಿದರು. ಶ್ರೀಯುತ ವಿಜಯ್ ಕುಮಾರ್ ಚಾರ್ಮಾತ ಹಿಂದಿನ ಸಮಿತಿಯ ಕಾರ್ಯವೈಖರಿಯ ಬಗ್ಗೆ ಗುಣಗಾನಗೈದು ನೂತನ ಎಸ್ ಡಿ ಎಂ ಸಿ ರಚನೆ ಬಗ್ಗೆ ಕರೆ ನೀಡಿದರು. ಎಸ್ ಡಿ ಎಂ ಸಿ ಸದಸ್ಯರುಗಳ ಹೆಸರು ಸೂಚನೆ ಹಾಗೂ ಅನುಮೋದನೆಯೊಂದಿಗೆ ಕಾರ್ಯಾರಂಭ ನಡೆಯಿತು. 18 ಮಂದಿ ಪೋಷಕ ಸದಸ್ಯರುಗಳಾಗಿ ಶಿವರಾಮ ಉತ್ರoಬೆ, ಶೃತಿ ಮರಕತ , ರಮ್ಯಾ ಕಾಯರ ಮುಗೇರು, ಪುಷ್ಪ ಅಂಜೇರಿ,.ಶ್ಯಾಮಲ, ನಳಿನಾಕ್ಷಿ ಹಲ್ಗುಜಿ, ರೇವತಿ, ಸವಿತ, ಶಶಿಕುಮಾರ್ ಮರಕತ, ಹರಿಶ್ಚಂದ್ರ ಚಾರ್ಮಾತ , ಯುವರಾಜ ಅಂಬೆಕಲ್ಲು, ಪ್ರಶಾಂತ್ ನೆಲ್ಲಿಪುಣಿ, ಸತೀಶ್ ಕಲ್ಗುಜಿ, ವಿಜಯ್ ಕುಮಾರ್ ಚಾರ್ಮಾತ, ಸತೀಶ್ ಎರ್ಧಡ್ಕ ಮತ್ತು ಬಾಲಕೃಷ್ಣ ನಾಯ್ಕ್ ಆಯ್ಕೆಯಾದರು. ಪೋಷಕ ಸದಸ್ಯರ ಆಯ್ಕೆಯಾದ ನಂತರ 18 ಮಂದಿ ಸದಸ್ಯರುಗಳು ಪರಸ್ಪರ ಚರ್ಚಿಸಿ ಶಿವರಾಮ ಉತ್ರಂಬೆ ಅಧ್ಯಕ್ಷರಾಗಿಯೂ ಶ್ರೀಮತಿ ಶೃತಿ ಮರಕತ ಉಪಾಧ್ಯಕ್ಷರಾಗಿಯೂ ಆಯ್ಕೆಯಾದರು.


ಮುಂದೆ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಯಿತು. ನಂತರದಲ್ಲಿ ನೂತನ ಎಸ್ ಡಿ ಎಂ ಸಿ ಯ ಪ್ರಥಮ ಸಭೆಯಲ್ಲಿ ಶ್ರಮದಾನ, ಶಾಲಾ ಕೈತೋಟ ನಿರ್ವಹಣೆ, ಗೌರವ ಶಿಕ್ಷಕಿಯ ನೇಮಕಾತಿ, ಅಡುಗೆ ಸಿಬ್ಬಂದಿಗಳ ನೇಮಕಾತಿ, ಸಮಯ ಪಾಲನೆ, ಮುಂದಿನ ವರ್ಷದ 8ನೇ ತರಗತಿ ಆರಂಭಿಸುವ ಬಗ್ಗೆ, ಶೌಚಾಲಯ, ಶಾಲಾ ಕಟ್ಟಡ, ರಸ್ತೆ ದುರಸ್ತಿ, ಎಸ್ ಡಿ ಪಿ ಅಂಶಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ದಾಖಲಾತಿಯಂತೆ ಹಾಜರಾತಿ, ಮಕ್ಕಳಿಗೆ ಗುಣಾತ್ಮಕ ಹಾಗೂ ಪರಿಣಾಮಕಾರಿಯಾದ ಶಿಕ್ಷಣ ನೀಡುವುದು ನಿಮ್ಮೆಲ್ಲರ ಹೆಗ್ಗುರುತಾಗಿದೆ ಎಂಬ ನೆಲೆಗಟ್ಟಿನೊಂದಿಗೆ ಸರ್ವರು ಸಹಭಾಗಿತ್ವ ವಹಿಸಿದರು. ಕೊನೆಗೆ ಶ್ರೀಮತಿ ವನಜಾಕ್ಷಿ ಶಾಲಾ ಹಿರಿಯ ಶಿಕ್ಷಕಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಈ ದಿನ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಯಿತು.