ಬದುಕಿನ ಬವಣೆಯಲಿ ನೊಂದು ಬೆಂದವರಿಗೆ ನೋವಾಗುವುದು ಸಹಜ, ನೋವಿನಲ್ಲೇ ನಲಿವು ಅಡಗಿರುವುದು ತಿಳಿ ಮನುಜ…
ಕಷ್ಟ-ನೋವುಗಳು ಹೇಳಿ ಕೇಳಿ ಬರುವುದಿಲ್ಲ ಅದು ಸಹಜ, ಕಷ್ಟ-ನಷ್ಟಗಳಿಗೆ ಕರುಣೆ ಎಂಬುವುದು ಇಲ್ಲ, ನಿನ್ನ ಕಣ್ಣೀರಿಗೆ ಕರಗುವವರು ಇಲ್ಲಿ ಯಾರೂ ಇಲ್ಲ…
ಇಲ್ಲಿ ಎಲ್ಲರೂ ನಿನ್ನವರು ಎಂದು ನೀ ಅಂದುಕೊಂಡಿರುವೆಯಲ್ಲಾ, ನಿನ್ನ ಕಷ್ಟದ ಸಂದರ್ಭದಲ್ಲಿ ಅವರಲ್ಲಿ ಕೆಲವರೆಷ್ಟು ದೂರ ನಿಂತಿದ್ದರೆಂದು ನೀ ಗಮನಿಸಿದೆಯಲ್ಲಾ…
ನಿನ್ನ ಮನಸ್ಸಿನ ನೋವುಗಳನ್ನು ಮನದಲ್ಲೇ ಬಚ್ಚಿಟ್ಟು ಸಾಗುತಿರು, ಆ ನೋವುಗಳೇ ನಿನ್ನ ಬದುಕಿನ ಸಾಧನೆಗೆ ಕಾವು ಕೊಡುತ್ತವೆ ಮರೆಯದಿರು…
ಕಷ್ಟದಲ್ಲಿ ಕಂಗೆಟ್ಟ ನಿನ್ನ ಬದುಕಿಗೆ, ನೋವಿನಲ್ಲಿ ಮಿಂದೆದ್ದ ನಿನ್ನ ಮನಸ್ಸಿಗೆ ಸಾಧನೆಯ ಹಾದಿ ಕಂಡೇ ಕಾಣುವುದು ಹುಡುಕುತ್ತಾ ಸಾಗುತಿರು…
✍️ಉಲ್ಲಾಸ್ ಕಜ್ಜೋಡಿ
- Tuesday
- December 3rd, 2024