
ಪೆರುವಾಜೆ ಗ್ರಾಮದ ಪೆರುವಾಜೆ-ಮಠತ್ತಡ್ಕದಲ್ಲಿ ಹಾದು ಹೋಗುವ ವಿದ್ಯುತ್ ಲೈನಿಗೆ ತಾಗಿಕೊಂಡಿರುವ ಮರಗಳನ್ನು ಶೌರ್ಯ ವಿಪತ್ತು ತಂಡದಿಂದ ಜೂ.09ರಂದು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಸದಸ್ಯರುಗಳಾದ ರಮೇಶ್ ಮಠತ್ತಡ್ಕ, ಶೇಷಪ್ಪ ಮಠತ್ತಡ್ಕ, ಸುಂದರ ನಾಯ್ಕ್, ನಾರಾಯಣ ಮಠತ್ತಡ್ಕ, ರಾಜೇಶ್ ಮಠತ್ತಡ್ಕ, ಪುರುಷೋತ್ತಮ್ ನಾಯ್ಕ್ , ವೆಂಕಪ್ಪ ನಾಯ್ಕ, ಸೀತಾರಾಮ ಆಚಾರ್ಯ,ಯಶವಂತ್, ರಾಜೇಶ್ ಸಾರಕರೆ, ಲೈನ್ ಮಾನ್ ವಸಂತ ಹಾಗೂ ಜೆ ಇ ಪ್ರಸಾದ್ ಉಪಸ್ಥಿತರಿದ್ದರು. ಉಪಹಾರದ ವ್ಯವಸ್ಥೆಯನ್ನು ಫ್ರೆಂಡ್ಸ್ ಕ್ಯಾಟರಿಂಗ್ಸ್ ಮಾಲಕರಾದ ಪ್ರೀತಮ್ ರೈ ಮಾಡಿದ್ದರು.