
ಸುಳ್ಯ:ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘ ರಿ ಸುಳ್ಯ ಇದರ ವಾರ್ಪಿಕ ಮಹಾಸಭೆ ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ದಿನಾಂಕ 16/06/24ರಂದು ನಡೆಯಲಿದ್ದು ವಾರ್ಷಿಕ ಮಹಾಸಭೆ ಮತ್ತು ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ದಿನಾಂಕ 02/06/24ರಂದು ಸಂಧ್ಯಾರಶ್ಮಿ ಸಭಾಭವನದಲ್ಲಿ ಬಿಡುಗಡೆ ಗೊಳಿಸಲಾಯಿತು. ಸಂಘವು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಪೂರ್ವಾಭಾವಿ ಸಭೆ ಹಾಗೂ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ದಿನಾಂಕ 02.06.2024ರಂದು ಸುಳ್ಯ ಕೇರ್ಪಳದಲ್ಲಿರುವ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆಯಿತು. ಸಂಘದ ಗೌರವ ಸಲಹೆಗಾರರಾದ ಶಂಕರ ಮಾಸ್ತರ್ ಪರಿವಾರಕಾನ ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು ಈ ಸಂಧರ್ಭದಲ್ಲಿ ಸಂಘದ ಗೌರವ ಸಲಹೆಗಾರರಾದ ವೆಂಕಟ್ರಮಣ ಬೇರ್ಪಡ್ಕ, ಸಂಘದ ಆಂತರಿಕ ಲೆಕ್ಕಪರಿಶೋಧಕರಾದ ಮಹಾಲಿಂಗನ್ ಬಾಜರ್ ತೊಟ್ಟಿ , ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಂಡ್ಕ , ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ , ವಿಜಯ ಎರ್ಮೆಟ್ಟಿ , ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಬೈಲುವಾರು ಸಮಿತಿ ಸದಸ್ಯರು ಮಹಿಳಾ ಸಮಿತಿಗಳ ಪದಾಧಿಕಾರಿಗಳು ಸಂಚಾಲಕರು,ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು, ಸಂಘದ ಜತೆ ಕಾರ್ಯದರ್ಶಿ ಸೌಮ್ಯಾ ಇರಂತಮಜಲು ಸ್ವಾಗತಿಸಿ ವಂದಿಸಿದರು.

ವಿಧ್ಯಾನಿಧಿ ಪ್ರಶಸ್ತಿಗೆ ಅರ್ಜಿ ಆಹ್ವಾನ.
ಪಾಟಾಳಿ ಗಾಣಿಗ ಸಮಾಜಕ್ಕೆ ಸೇರಿದ ಹತ್ತನೆ ತರಗತಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ದತ್ತಿ ನಿಧಿಗಳ ಮೂಲಕ ನೀಡುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ್ದು ವಿಧ್ಯಾರ್ಥಿಗಳು ಮತ್ತು ಪೋಷಕರು ಸಂಘದ ಪ್ರಧಾನ ಕಾರ್ಯದರ್ಶಿಯವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.