

“ಕನ್ನಡ ಮಾಧ್ಯಮ ಎಂಬ ಅಳುಕು ಬಿಟ್ಟು ಬಿಡಿ, P-Q-R-S -T ಸೂತ್ರವನ್ನು ಪಾಲಿಸಿ, ಓದುವಿಕೆಯಲ್ಲಿ ಕಠಿಣ ಶ್ರಮ ಅಗತ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಉತ್ತಮ ಸಂಸ್ಕಾರಗಳನ್ನೂ ರೂಢಿಸಿಕೊಳ್ಳಿ” ಹೀಗೆಂದು ಡಾ| ರಾಧಿಕಾ.ಡಿ, ಬಾಳಿಲ ವಿದ್ಯಾಬೋಧಿನೀ
ಹಿರಿಯ ವಿದ್ಯಾರ್ಥಿ ಹಾಗೂ ಅರಿವಳಿಕೆ ಮತ್ತು ನೋವು ನಿವಾರಣಾ ತಜ್ಞೆ, ಮೈಸೂರು ಇವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ನಡೆದ SSLC 2024ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ (ರಿ.) ಬಾಳಿಲ ಇದರ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ವಹಿಸಿದ್ದರು. ಸಂಚಾಲಕರಾದ ಪಿ ಜಿ ಎಸ್ ಎನ್ ಪ್ರಸಾದ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶ್ರೀಮತಿ ಪಾವನ ಜೋಗಿಬೆಟ್ಟು , ಅಧ್ಯಕ್ಷರು ಗ್ರಾಮ ಪಂಚಾಯಿತಿ ಬಾಳಿಲ ಮತ್ತು ಶ್ರೀಮತಿ ತ್ರಿವೇಣಿ, ಸದಸ್ಯರು, ಗ್ರಾಮ ಪಂಚಾಯತ್ ಬಾಳಿಲ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭದ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ನಿರ್ಮಲ ಚಂದ್ರಶೇಖರ್ ಹಾಗೂ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ಉಪಸ್ಥಿತರಿದ್ದರು. ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಗಳಾದ ಪ್ರತೀಕಾ ಕೆ. ಎಂ ಮತ್ತು ಶಿವಕೃಷ್ಣ ಎನ್ ಇವರಿಗೆ ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಕೃತ ಭಾಷಾ ಶಿಕ್ಷಕರಾದ ವೆಂಕಟೇಶ್ ಕುಮಾರ್ ಯು ಪ್ರತಿಭಾನ್ವಿತರನ್ನು ಪರಿಚಯ ಮಾಡಿದರು. ಇದೇ ಸಂದರ್ಭದಲ್ಲಿ ವಿವಿಧ ದತ್ತಿನಿಧಿ ನಗದು ಬಹುಮಾನಗಳನ್ನು ವಿತರಿಸಲಾಯಿತು. ಇದನ್ನು ಸಹಶಿಕ್ಷಕಿ ಕವಿತಾ ಕೆ ಎನ್ ನಿರ್ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಯಶೋಧರ ಎನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಿತ ಶಿಕ್ಷಕರಾದ ಉದಯಕುಮಾರ್ ರೈ ಎಸ್ ವಂದಿಸಿದರು.
ಕ್ಷಮಾ ಮತ್ತು ಜಸ್ವಿತಾ (10ನೇ ತರಗತಿ )ಕಾರ್ಯಕ್ರಮ ನಿರೂಪಿಸಿದರು.