ಕಡಬ : ದಾಖಲೆ ಪತ್ರಕ್ಕಾಗಿ ಕಛೇರಿಗೆ ಬಂದು ವ್ಯಕ್ತಿಯನ್ನು ಸತಾಯಿಸಿದ ಪಟ್ಟಣ ಪಂಚಾಯತ್ ಮಹಿಳಾ ಸಿಬ್ಬಂದಿ – ಲಂಚಕ್ಕಾಗಿ ಎರಡು ದಿನ ಅಲೆದಾಡಿಸಿದ್ದಾರೆ ಎಂಬ ಆರೋಪ – ವಿಡಿಯೋ ವೈರಲ್ ಆದ ಬಳಿಕ ದಾಖಲೆ ಸರಿ ಮಾಡಿಕೊಟ್ಟ ಮುಖ್ಯಾಧಿಕಾರಿ

ಕಡಬ: ಬ್ಯಾಂಕ್ ಲೋನ್ ಪಡೆದು ಮನೆ ಕಟ್ಟುವ ಸಲುವಾಗಿ ಅಗತ್ಯ ದಾಖಲೆ ಪತ್ರಕ್ಕಾಗಿ ಬಂದ ವ್ಯಕ್ತಿಯ ಬಳಿ ಪಟ್ಟಣ ಪಂಚಾಯತ್ ಸಿಬ್ಬಂದಿ ಲಂಚದ ಆಸೆಗಾಗಿ  ಎರಡು ದಿನ ಅಲೆದಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ‌  ಎರಡು ದಿನದಲ್ಲಿ ಬರೋಬ್ಬರಿ  ಒಂಭತ್ತು ಬಾರಿ ವ್ಯಕ್ತಿಯೊಬ್ಬರನ್ನು  ಅಲೆದಾಡಿಸಿದ  ಪಟ್ಟಣ ಪಂಚಾಯತ್  ಮಹಿಳಾ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜೂ.5 ರಂದು ಸಂಜೆ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ನಡೆದಿದೆ. ಈ ಕುರಿತ ಮಾತಿನ ಚಕಮಕಿಯ ವೀಡಿಯೋ ವೈರಲ್ ಆಗಿದ್ದು ಬಳಿಕ ಎಚ್ಚೆತ್ತ ಅಧಿಕಾರಿಗಳು ರಾತ್ರಿಯೊಳಗೆ ಅವರಿಗೆ ಸಂಬಂಧಿಸಿದ ದಾಖಲೆ ಪತ್ರ ಮಾಡಿಸಿಕೊಟ್ಟ ಘಟನೆ ನಡೆದಿದೆ.

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗಿರೀಶ್ ಕೋಡಿಬೈಲು ಅವರು ಮನೆ ನಿರ್ಮಾಣಕ್ಕಾಗಿ ಸಾಲ ಪಡೆಯುವ ಸಲುವಾಗಿ ಬ್ಯಾಂಕ್ ಗೆ ಅಗತ್ಯ ದಾಖಲೆ ಪತ್ರ ಸಲ್ಲಿಸಬೇಕಾಗಿತ್ತು. ಪ.ಪಂ ನಿಂದ ನೀಡುವ ನಮೂನೆ 3 ದಾಖಲೆಯೊಂದರಲ್ಲಿ ಸಿಬ್ಬಂದಿಗಳು ಕಣ್ತಪ್ಪಿನಿಂದ  ರಸ್ತೆ ದಿಕ್ಕನ್ನು ತಪ್ಪಾಗಿ ನಮೂದಿಸಿದ್ದರು .  ಹೀಗಾಗಿ ಕೂಡಲೇ ಸರಿಪಡಿಸಿಕೊಂಡು ಬರುವಂತೆ ಬ್ಯಾಂಕ್ ನಲ್ಲಿ ಹೇಳಿದ್ದರು.

ಈ ಬಗ್ಗೆ ಪಟ್ಟಣ ಪಂಚಾಯತ್ ನಲ್ಲಿ ಜೂ.04 ರಂದು ಮುಂಜಾನೆ ಅವರು ಬಂದು ವಿಚಾರಿಸಿದ ವಿವಿಧ ಸಮಯ ನೀಡಿ ನಾಲ್ಕು ಬಾರಿ ಸತಾಯಿಸಿ ಮರುದಿನ ಬರುವಂತೆ  ಮಹಿಳಾ ಸಿಬ್ಬಂದಿ ( ಬಿಲ್ ಕಲೆಕ್ಟರ್) ಹೇಳಿದ್ದರು,  ಅಲ್ಲದೆ ತೆರಿಗೆಯನ್ನು ಪಾವತಿಸಲು ತಿಳಿಸಿದಂತೆ ಹಣ ಪಾವತಿಸಿದ್ದರು . ಮರುದಿನವೂ ಕಚೇರಿಗೆ ಹೋಗಿ ವಿಚಾರಿಸಿದಾಗ  ಮತ್ತೆ ಬೇರೆ ಬೇರೆ ಸಮಯ ನೀಡಿ ಐದು ಬಾರಿ ಅಲೆದಾಡಿಸಿ ಒಟಿಪಿ ಬಾರದೆ ಆಗುವುದಿಲ್ಲ ಎಂದು ಹೇಳಿ  ಜೂ.07 ರಂದು ಬರುವಂತೆ ಮಹಿಳಾ ಸಿಬ್ಬಂದಿ ಸೂಚಿಸಿದ್ದರು.

. . . . . . . . .



ದಾಖಲೆಗಾಗಿ ಬಂದ ವ್ಯಕ್ತಿ ಅಳುತ್ತಾ ಹೋದ್ರು:  ಬ್ಯಾಂಕ್ ಗೆ ನಿಗದಿತ ಸಮಯದಲ್ಲಿ ದಾಖಲೇ ಪತ್ರ ಸಲ್ಲಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಅಲೆದಾಟ ಮಾಡಿ ನೊಂದ ಗಿರೀಶ್ ಅವರು ದಿಕ್ಕು ತೋಚದೆ  ಅಳುತ್ತಾ ಭೀಮ್ ಆರ್ಮಿ ಸಂಘಟನೆಯ ಕಡಬ ತಾಲೂಕು  ಅಧ್ಯಕ್ಷ ರಾಘವ ಕಳಾರ ಗಮನಕ್ಕೆ ತಂದಿದ್ದರು.  ಜೂ.06 ರಂದು ಸಂಜೆ ಕಚೇರಿಗೆ ಹೋಗಿ ವಿಚಾರಿಸಿದಾಗ ಉಡಾಫೆಯಿಂದ ಮಾತನಾಡಿದನ್ನು ಗಮನಿಸಿ ರಾಘವ  ಅವರು ತೀವ್ರ ತರಾಟೆಗೆ ತೆಗೆದುಕೊಂಡರು.  ಈ ವೇಳೆ  ಹಣ ಕೊಟ್ಟರೆ ಒಂದೇ ದಿನದಲ್ಲಿ ದಾಖಲೆ ಪತ್ರ ನೀಡುವ ನೀವು ಬಡವರನ್ನು ಸತಾಯಿಸುತ್ತಿರುವುದಾಗಿ ಏರು ಧ್ವನಿಯಲ್ಲಿ ಮಾತನಾಡಿ ಇಂದೇ ಕೊಡುವಂತೆ ಪಟ್ಟು ಹಿಡಿದರು. ಈ ವೇಳೆ ಮರು ಜಿಪಿಎಸ್ ಮಾಡಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದು ಇದರಿಂದ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಹಣ ಬೇಕಿದ್ದರೆ ಹೇಳಲಿ ಒಳ್ಳೆಯ ಜಾಗದಲ್ಲಿ ತಂದು ಕೊಡುತ್ತೇನೆ ಎಂದು ಹೇಳಿದರು.

ಮನೆಗೆ ಹೋದ ಸಿಬ್ಬಂದಿಯನ್ನು ಮುಖ್ಯಾಧಿಕಾರಿಯ ಕಾರು ಕಳುಹಿಸಿ ಕಚೇರಿಗೆ ಕರೆ ತಂದ್ರು-
ಪಟ್ಟಣ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾರಣ ದಿಕ್ಕು ದೋಚದೆ ಇವತ್ತೆ ಮಾಡಿಕೊಡುವ ಭರವಸೆ ನೀಡಿದರು. ಇದರಿಂದ ಸಾಯಂಕಾಲ ಮನೆಗೆ ಹೋಗಿದ್ದ ಬಿಳಿನೆಲೆಯ ಮತ್ತೋರ್ವ ಮಹಿಳಾ ಸಿಬ್ಬಂದಿಯನ್ನು ಬರ ಹೇಳಿದ್ದರು.ಹೀಗಾಗಿ ತುರ್ತಾಗಿ ಮುಖ್ಯಾಧಿಕಾರಿಯ ಕಾರನ್ನು ಬಿಳಿನೆಲೆಗೆ ಕಳುಹಿಸಿ ಸಂಜೆ ಸುಮಾರು 7:15ರ ಹೊತ್ತಿಗೆ ಕಚೇರಿಗೆ ಸಿಬ್ಬಂದಿ ಆಗಮಿಸಿದರು.  ನಂತರ ಸರಿ ಸುಮಾರು 8:00ಯ ಹೊತ್ತಿಗೆ ತಿದ್ದುಪಡಿಗೊಂಡ ನಮೂನೆ 3 ದಾಖಲೆ ಪತ್ರವನ್ನು ಯಾವುದೇ ಒಟಿಪಿ ಇಲ್ಲದೆ, ಜಿಪಿಯಸ್ ಮಾಡದೆ ಸಿದ್ದಪಡಿಸಿ  ನೀಡಿದ್ದಾರೆಂದು ತಿಳಿದುಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading