- Thursday
- November 21st, 2024
ದ.ಕ ಸಂಪಾಜೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ, ಇಂದು ಸಂಜೆ ಸುರಿದ ಗಾಳಿ -ಮಳೆಗೆ ಮನೆ ಮೇಲೆ ಮರ ಬಿದ್ದು ಹಾಗೂ, ಕರೆಂಟ್ ಕಂಬಗಳಿಗೆ ಹಾನಿಯಾದ ಘಟನೆ ಮೇ 8 ರಂದು ಸಂಜೆ ವರದಿಯಾಗಿದೆ. ಅಲ್ಲದೆ ದೊಡ್ಡಡ್ಕ ರಾಮಚಂದ್ರ ಮತ್ತು ಗೂನಡ್ಕ ಬೈಲೆ ಟೈಲರ್ ಅಬೀರ ನಾಗೇಶ್ ಅವರ ಮನೆಗೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ...
ತಾಲೂಕಿನ ಎಲ್ಲಾ ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2) ರ ಅಡಿ ಪಹಣಿಗಳಿಗೆ ಆಧಾರ್ (ಸೀಡಿಂಗ್ ) ಜೋಡಣೆ ಮಾಡಲು ಅವಕಾಶ ನೀಡಲಾಗಿದ್ದು ತಾಲೂಕಿನ ಎಲ್ಲಾ ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಇಲಾಖೆಯ ವೆಬ್ ಸೈಟ್ (ಜಾಲತಾಣ) ದಲ್ಲಿ ಲಾಗಿನ್...
ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರ ಮುಡಿಪು ಇವರ ಆಶ್ರಯದಲ್ಲಿ ಮಂದಾರ ಕಿಡ್ಸ್ ಪ್ರಿ ಸ್ಕೂಲ್, ಮಂದಾರ ಭರತನಾಟ್ಯ ಸಂಗೀತ ಶಾಲೆ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರವು ಸುಳ್ಯದ ಕೆ ಎಸ್ ಆರ್ ಟಿ ಸಿ ಡಿಪೋ ಹತ್ತಿರದ ಬೃಂದಾವನದಲ್ಲಿ ದಿನಾಂಕ ೦೮-೦೫-೨೦೨೪ ರಂದು ಉದ್ಘಾಟನೆಗೊಂಡಿತು.ಸೈಂಟ್ ಬ್ರಿಜಿಡ್ಸ್ ಚರ್ಚಿನ ಧರ್ಮ ಗುರುಗಳಾದ ರೇ.ಫಾ....
ಸುಳ್ಯ: ಗೂನಡ್ಕದಲ್ಲಿ ಅಪ್ರಾಪ್ತೆ ಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ . ಆತ್ಮಹತ್ಯೆ ಮಾಡಿಕೊಂಡ ಯುವತಿಯು ಅಪ್ರಾಪ್ತೆಯಾಗಿದ್ದಾರೆ ಆತ್ಮಹತ್ಯೆ ಗೈದ ಅಪ್ರಾಪ್ತೆಯನ್ನು ದೊಡ್ಡಡ್ಕದ ರಶ್ಮಿಕ ಎಂದು ಗುರುತಿಸಲಾಗಿದ್ದು ಸದ್ಯ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ತೆರಳಿರುವುದಾಗಿ ತಿಳಿದುಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಇತ್ತೀಚೆಗೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಕೊನೆಯುಸಿರೆಳೆದಿದ್ದು, ಮೇ 9ರಂದು ಮುಂಜಾನೆ ಪಾರ್ಥಿವ...
1967ರಲ್ಲಿ ನಡೆದ ಅಖಿಲ ಭಾರತ ಜನಸಂಘದ ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ, ಸಮಾವೇಶ ಯಶಸ್ವಿಗೊಳಿಸಿದ ಮಹಾ ನಾಯಕ - ನಾ ಸೀತರಾಮ್. ಸುಳ್ಯದ ಸಾಮಾಜಿಕ – ಧಾರ್ಮಿಕ ಹಾಗೂ ರಾಜಕೀಯ ಮುಖಂಡರುಗಳಿಂದ ನುಡಿನಮನ ಸಲ್ಲಿಕೆ ಸುಳ್ಯದ ಹಿರಿಯ ಬಿಜೆಪಿ ಮುಖಂಡ, ಹಿರಿಯ ಉದ್ಯಮಿ ದಿ. ಕೆ. ಉಪೇಂದ್ರ ಕಾಮತ್ ಅವರಿಗೆ ಸಾರ್ವಜನಿಕ...
ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ 2023-24ನೇ ಎಸ್‌ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವು ಮೇ 9ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆಗಳು ಹಾಗೂ ಮೌಲ್ಯಮಾಪನ ಮಂಡಳಿ ಅಧ್ಯಕ್ಷೆ ಎನ್.ಮಂಜುಶ್ರೀ ತಿಳಿಸಿದ್ದಾರೆ. ನಾಳೆ 10.30 ಕ್ಕೆ ವೆಬ್‌ಸೈಟ್ ಮೂಲಕವು ಫಲಿತಾಂಶವನ್ನು ವೀಕ್ಷಿಸಬಹುದು.
ಲೋಕಾಯುಕ್ತದ ವತಿಯಿಂದ ಜನ ಸಂಪರ್ಕ ಸಭೆಯು ಮೇ. 07 ರಂದು ಸುಳ್ಯ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆಯಿತು.ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ. ಕುಮಾರ್, ಲೋಕಾಯುಕ್ತ ಇನ್ ಸ್ಪೆಕ್ಟರ್ ಗಳಾದ ಅಮಾನುಲ್ಲಾ ಖಾನ್, ಸುರೇಶ್ ಬಾಬು ಸಹಿತ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿದರು.ಸುಳ್ಯ ತಹಶೀಲ್ದಾರ್ ಜಿ. ಮಂಜುನಾಥ್, ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಪರಮೇಶ್,...
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳಿಂದ ಕುಮಾರಧಾರ ಸ್ನಾನ ಘಟ್ಟ ಸ್ವಚ್ಚತೆ ಕಾರ್ಯ ಮೇ. 7 ರಂದು ಕೈಗೊಂಡರು. ಭಕ್ತಾಧಿಗಳು ನದಿಯಲ್ಲಿ ಬಿಟ್ಟು ಹೋಗಿರುವ, ರಾಶಿ ರಾಶಿ ಬಟ್ಟೆ ಸಂಗ್ರಹಿಸಲಾಯಿತು. ಬಳಿಕ ಅದನ್ನು ವಿಲೇವಾರಿ ಮಾಡಲಾಯಿತು. ದೇವಾಲಯದ ಹೆಚ್ಚಿನ ಎಲ್ಲಾ ಸಿಬ್ಬಂದಿ ಈ ಒಂದು ಕೆಲಸದಲ್ಲಿ ಪಾಲ್ಗೊಂಡರು.
Loading posts...
All posts loaded
No more posts