Ad Widget

ಅಜ್ಜಾವರ ಅಪಘಾತ ಪ್ರಕರಣ ಗಂಭೀರ ಗಾಯಗೊಂಡ ಮಹಿಳೆಯನ್ನು ಮಂಗಳೂರಿಗೆ ವರ್ಗಾವಣೆ

ಸುಳ್ಯ: ಅಜ್ಜಾವರ ಗ್ರಾಮದ ಮಾರ್ಗ ಎಂಬಲ್ಲಿ ಗಂಭೀರ ಗಾಯಗೊಂಡ ಮಹಿಳೆಯನ್ನು ಇದೀಗ ಮಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಕೆವಿಜಿ ಆಸ್ಪತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಸೇರಿದಂತೆ ಪ್ರಮುಖರು ಮತ್ತು ಮೃತಪಟ್ಟ ವಿನಾಯಕ ಮೂರ್ತಿರವರ ಅಪಾರ ಬಂಧು ಮಿತ್ರರು ಆಸ್ಪತ್ರೆ ಬಳಿಯಲ್ಲಿ ನೆರೆದಿದ್ದು ಅಪಘಾತ ಸಂಭವಿಸಿದ ವಿಚಾರ...

ಅಜ್ಜಾವರ ಬೈಕ್ ಜೀಪು ಅಪಘಾತ ಪ್ರಕರಣ ಬೈಕ್ ಸವಾರರಲ್ಲಿ  ಗಂಭೀರ ಗಾಯಗೊಂಡ ಓರ್ವ ವ್ಯಕ್ತಿ ಮೃತ್ಯು

ಅಜ್ಜಾವರ ಗ್ರಾಮದ ಮಾರ್ಗ ಎಂಬಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಬೈಕ್ ಮೇಲೆ ಜೀಪು ಮಗುಚಿ ಬಿದ್ದು ಅಜ್ಜಾವರ ಮೂಲದ ದಂಪತಿಗಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿನಾಯಕ ಮೂರ್ತಿ ಎಂಬುವವರು ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು ಇವರ ಪತ್ನಿಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಮೃತಪಟ್ಟ ವ್ಯಕ್ತಿಯ ಮೃತದೇಹ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ...
Ad Widget

ಅಜ್ಜಾವರ: ಬೈಕ್ ಮೇಲೆ ಮಗುಚಿ ಬಿದ್ದ ಜೀಪು; ಬೈಕ್ ಸವಾರ ಗಂಭೀರ ಗಾಯ!

ಅಜ್ಜಾವರ ಗ್ರಾಮದ ಮಾರ್ಗ ಎಂಬಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಬೈಕ್ ಮೇಲೆ ಜೀಪು ಮಗುಚಿ ಬಿದ್ದು ಅಜ್ಜಾವರ ಮೂಲದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಇದೀಗ ವರದಿಯಾಗಿದ್ದು ಗಂಭೀರ ಗಾಯಗೊಂಡವರ ಮಾಹಿತಿ ಇನ್ನಷ್ಟೆ ಬರಬೇಕಾಗಿದ್ದು  ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿರುವುದಾಗಿ ತಿಳಿದುಬಂದಿದೆ.

ಪಂಜ ; ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ   ಮತಯಾಚನೆ

ಲೋಕಸಭಾ ಚುನಾವಣೆ ಪ್ರಯುಕ್ತ ಪಂಜದಲ್ಲಿ   ಏ.24 ರಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಮತಯಾಚನೆ ನಡೆಸಿದರು.ಡಾ.ರಾಮಯ್ಯ ಭಟ್, ಲಿಗೋಧರ ಆಚಾರ್ಯ, ಚಂದ್ರಶೇಖರ ಶಾಸ್ತ್ರಿ, ಮೋನಪ್ಪ ಗೌಡ ಬೊಳ್ಳಾಜೆ, ನಾರಾಯಣ ಕೃಷ್ಣನಗರ, ಶ್ರೀಮತಿ ಪೂರ್ಣಿಮಾ ದೇರಾಜೆ, ಮೋನಪ್ಪ ಕೆಬ್ಲಾಡಿ, ಶರತ್ ಕುದ್ವ, ಲೋಕೇಶ್ ಬರೆಮೇಲು, ಚಿನ್ನಪ್ಪ ಚೊಟ್ಟೆಮಜಲು,ವಾಚಣ್ಣ ಕೆರೆಮೂಲೆ ,...

ದೇಶದ ಹಿತಕ್ಕಾಗಿ ಮತದಾನ ಮಾಡಿರಿ…

ದೇಶದ ಹಿತಕ್ಕಾಗಿ ಮತದಾನ ಮಾಡಿರಿ, ಯೋಚಿಸಿ-ಆಲೋಚಿಸಿ ಮತವನ್ನು ನೀಡಿರಿ…“ನನ್ನೊಬ್ಬನ ಓಟಿನಿಂದ ಏನಾಗುತ್ತದೆ…?” ಅನ್ನದಿರಿ, ಪ್ರತಿಯೊಂದು ಮತವೂ ಕೂಡ ಮುಖ್ಯವಿಲ್ಲಿ ತಿಳಿಯಿರಿ, ಮತದಾನಕ್ಕೆ ಹೋಗಲು ಆಲಸ್ಯ ಮಾಡದಿರಿ…ಐದು ವಷಕ್ಕೊಮ್ಮೆ ನಮಗೆ ಸಿಗುವ ಅಧಿಕಾರ ಮರೆಯದಿರಿ, ಮರೆಯದೇ ಪ್ರತಿಯೊಬ್ಬರೂ ಮತದಾನ ಮಾಡಿರಿ…ನೋಟಿನಾಸೆಗಾಗಿ ನಿಮ್ಮ ಮತವನ್ನು ಮಾರದಿರಿ, ಯಾವುದೇ ಆಮಿಷಕ್ಕೆ ಬೀಳದೇ ಮತದಾನ ಮಾಡಿರಿ…ಜನಸೇವಕನಾಗಿ ದುಡಿಯೋ ಜನನಾಯಕನ ಆರಿಸಿರಿ, ಮತದಾನ...

ಕ್ಯಾ.ಬ್ರಿಜೇಶ್ ಚೌಟ ಪರ ಸುಳ್ಯ ನಗರದಲ್ಲಿ ಬಿಜೆಪಿ ರೋಡ್ ಶೋ ಮತಯಾಚನೆ

ಲೋಕಸಭಾ ಚುನಾವಣೆಯ ಪ್ರಯುಕ್ತ ಕೊನೆಯ ದಿನವಾದ ಇಂದು ನಗರ‌ ಬಿಜೆಪಿ ವತಿಯಿಂದ ಸುಳ್ಯದಲ್ಲಿ ಬೃಹತ್ ರೋಡ್ ಶೋ‌ ಮೂಲಕ ಬಿಜೆಪಿ‌ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಮತಯಾಚನೆ ನಡೆಯಿತು. ಸುಳ್ಯ ಜ್ಯೋತಿ ಸರ್ಕಲ್ ನಿಂದ ಆರಂಭಗೊಂಡು ಗಾಂಧಿನಗರದ ಪೆಟ್ರೋಲ್ ಪಂಪು ಬಳಿ ತನಕ ರೋಡ್ ಶೋ ಸಾಗಿತು. ಈ ಸಂದರ್ಭದಲ್ಲಿ ಅಂಗಡಿಗಳಿಗೆ ಮನವಿ ಪತ್ರ ನೀಡುತ್ತಾ...

ಗುತ್ತಿಗಾರಿನಲ್ಲಿ ಶ್ರೀ ದೇವಿ ಕಲರ್ ವರ್ಲ್ಡ್ ಶುಭಾರಂಭ

ಗುತ್ತಿಗಾರಿನ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಏ.24 ರಂದು ಶ್ರೀ ದೇವಿ ಕಲರ್ ವರ್ಲ್ಡ್ ಶುಭಾರಂಭಗೊಂಡಿತು.ಗುತ್ತಿಗಾರು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ದೀಪ ಬೆಳಗಿಸಿ ಅಂಗಡಿ ಉದ್ಘಾಟಿಸಿದರು. ಈ ಸಂದರ್ಭ ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಹೊಸೋಳಿಕೆ, ವಕೀಲರಾದ ಹರೀಶ್...

ಮನೆಯಂಗಳದ ಬಾವಿಮಣ್ಣು ಕುಸಿತ-  ಅಪಾಯಕಾರಿ ಸ್ಥಿತಿಯಲ್ಲಿ ಮನೆ ; ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಭೇಟಿ

ಬಾವಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿಹೋಗಿತ್ತು. ನಿನ್ನೆ ಬೆಳಗ್ಗೆ ಇದ್ದಕ್ಕಿದ್ದಂತೆ ಬಾವಿಯಲ್ಲಿ ನೀರು ತುಂಬುತ್ತಿದ್ದು ರಿಂಗ್ ಅಳವಡಿಸಿದವರೆಗೂ ನೀರು ತುಂಬಿ ಒಳ ಭಾಗದಲ್ಲಿ ಮಣ್ಣು ಕುಸಿತವಾದ ಘಟನೆ ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ನಿವಾಸಿ ಆನಂದ ಎಂಬವರ ಮನೆಯಂಗಳದಲ್ಲಿ ನಡೆದಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿರುವ ದೃಶ್ಯ.ಮನೆಯ ಅಂಗಳದಲ್ಲಿ ಬಾವಿ ಇರುವುದರಿಂದ...

ಎಂಡಿಎಂ ಮಾತ್ರೆ ಸಾಗಾಟ ಸುಳ್ಯ ಮೂಲದ ಈರ್ವರು ಮಾದಕ ವಸ್ತು ಸಹಿತ ಕೇರಳ ಪೋಲಿಸ್ ವಶಕ್ಕೆ

ಎಂಡಿಎಂಎಯನ್ನು ಕಳ್ಳ ಸಾಗಟಕ್ಕೆ ಯತ್ನಿಸಿದ ಇಬ್ಬರು  ಸುಳ್ಯ ಮೂಲದ ಯುವಕರನ್ನು ಕೇರಳದಲ್ಲಿ ಬಂಧಿಸಲಾಗಿದೆ.ಯುವಕರು 100.22 ಗ್ರಾಂ ಎಂಡಿಎಂಎಯೊಂದಿಗೆ ಅಬಕಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.  ಆರೋಪಿಗಳು ಬೆಂಗಳೂರಿನಿಂದ 1.5 ಲಕ್ಷ ರೂ.ಗೆ ಖರೀದಿಸಿದ್ದ ಎಂಡಿಎಂಎಯನ್ನು ಮಲಪ್ಪುರಂಗೆ ತಲುಪಿಸುವ ಗುರಿಯನ್ನು ಹೊಂದಿದ್ದರು. ಮಾನಂತವಾಡಿ ಅಬಕಾರಿ ವೃತ್ತ ನಿರೀಕ್ಷಕ ಎ ಪ್ರಜಿತ್ ನೇತೃತ್ವದ ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಿವಾಸಿಗಳಾದ...

ಸುಬ್ರಹ್ಮಣ್ಯ; ದೇವಸ್ಥಾನಕ್ಕೆ ಆಗಮಿಸಿದ ಯಾತ್ರಾರ್ಥಿ ಬಸ್ ನಿಂದ ಬಿದ್ದು ಸಾವು! – ದೂರು ದಾಖಲು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ  ಯಾತ್ರಾರ್ಥಿಯೊಬ್ಬರು ಏ.22 ರಂದು ಬಸ್ ನಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೆಎ 19 ಎಫ್ 3149 ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತೆರಳುತ್ತಿದ್ದಾಗ, ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ತಲುಪುವಾಗ, ಬಸ್ಸಿನ ಚಾಲಕನು ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಬಸ್ಸಿನ ನಿರ್ವಾಹಕರು ಬಸ್ಸಿನ...
Loading posts...

All posts loaded

No more posts

error: Content is protected !!