Ad Widget

ಸುಳ್ಯ ಸಿಎ ಬ್ಯಾಂಕ್ ಮುಂಭಾಗ ಮಲಗಿದ್ದ ಅಪರಿಚಿತ ವ್ಯಕ್ತಿ ಸಾವು , ಮೃತದೇಹ ಆಸ್ಪತ್ರೆಗೆ ರವಾನೆ.

ಸುಳ್ಯ ಸಿ ಎ ಬ್ಯಾಂಕ್ ಮುಂಭಾಗ ಮಲಗಿದ್ದ ಅಪರಿಚಿತ ವ್ಯಕ್ತಿ ಒಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಮೃತ ದೇಹವನ್ನು ಪ್ರಗತಿ ಅಂಬ್ಯುಲೆನ್ಸ್‌ನಲ್ಲಿ ಅಚ್ಚು ಪ್ರಗತಿಯವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಮೃತಪಟ್ಟ ವ್ಯಕ್ತಿಯ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದ್ದು ಇದೀಗ ಪೋಲೀಸ್ ಇಲಾಖೆಯು ವ್ಯಕ್ತಿಯ ಮಾಹಿತಿ ಕಲೆಹಾಕಲು ಪ್ರಾರಂಭಿಸಿರುವುದಾಗಿ ತಿಳಿದುಬಂದಿದೆ.

ಮರ್ಕಂಜ: ಗಣಿಗಾರಿಕೆ ವಿರುದ್ಧ ಮತ್ತೆ ಸಿಡಿದೆದ್ದ ಗ್ರಾಮಸ್ಥರು, ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ!

ತಾಲೂಕು ಕಛೇರಿ ಮುಂಭಾಗ ಸೇರಿದ ಗ್ರಾಮಸ್ಥರು, ತಹಶೀಲ್ದಾರರಿಗೆ ಮನವಿ ಸಲ್ಲಿಕೆ ಮರ್ಕಂಜ : ಅಳವುಪಾರೆಯ ಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಯದಿದ್ದಲ್ಲಿ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದೀಗ ತಾಲೂಕು ಕಛೇರಿ ಮುಂಭಾಗ  ಗ್ರಾಮಸ್ಥರು ಸೇರಿದ್ದಾರೆ. ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಸ. ನಂಬ್ರ ೧೭೩/೧ಬಿ೨ಎಪಿಂ ರ ಸರಕಾರಿ...
Ad Widget

ಮಂಗಳೂರಿನಲ್ಲಿ ರೈಲಿನಡಿಗೆ ಬಿದ್ದು ಆಚಳ್ಳಿ ಯುವಕ ಮೃತ್ಯು!

ಮಂಗಳೂರಿನಲ್ಲಿ ರೈಲಿನಡಿಗೆ ಬಿದ್ದು ಗುತ್ತಿಗಾರು ಗ್ರಾಮದ ಆಚಳ್ಳಿ  ಯುವಕನೋರ್ವ ಮೃತಪಟ್ಟ ಘಟನೆ  ಎ. 07 ರಂದು ನಡೆದಿದೆ.ಗುತ್ತಿಗಾರು ಗ್ರಾಮದ ಆಚಳ್ಳಿ ಹಂದಿಪಾರೆ ನಿವಾಸಿ ಸುಪ್ರೀತ್ ನಾಯ್ಕ ರವರು ಮೃತಪಟ್ಟ ದುರ್ದೈವಿ. ತನ್ನ ತಾಯಿ ಹಾಗೂ ಅಕ್ಕನೊಂದಿಗೆ ಮಂಗಳೂರಿನಲ್ಲಿ ನೆಲೆಸಿರುವ ಈತ ಎ.6 ರಂದು ರಾತ್ರಿ ವೇಳೆ ಮನೆಯಿಂದ ಹೋಟೆಲ್ ಗೆಂದು ಬಂದಿದ್ದ, ಸ್ವಲ್ಪ ಹೊತ್ತಿನ ಬಳಿಕ...

ಐವರ್ನಾಡು :  ಕಾಂಗ್ರೆಸ್ ಗ್ರಾಮ ಸಮಿತಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಮಂಗಳೂರು ಲೋಕಸಭಾ ಚುನಾವಣೆ, ಬ್ಲಾಕ್ ಕಾಂಗ್ರೆಸ್ ಸುಳ್ಯ ಇದರ  ಐವರ್ನಾಡು  ಗ್ರಾಮ ಸಮಿತಿಯ ಪೂರ್ವಭಾವಿ ಸಭೆ ಇಂದು ಐವರ್ನಾಡಿನ ಎನ್.ಎಂ.ಬಾಲಕೃಷ್ಣ ಗೌಡ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ ಜಯರಾಂ , ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿಗಳಾದ ಶ್ರೀ ಎಂ. ವೆಂಕಪ್ಪ ಗೌಡ, ದ.ಕ ಜಿಲ್ಲಾ...

ಜೋಡುಪಾಲ : ಖಾಸಗಿ ಬಸ್ಸು ಪಲ್ಟಿ

ಬೆಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಗೌರಿಶಂಕರ್ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಇಂದು ಬೆಳಿಗ್ಗೆ ಜೋಡುಪಾಲ ಬಳಿ ನಡೆದಿದೆ. ಹಲವು ಸಣ್ಣ ಪುಟ್ಟ ಜನರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ

ಪರಿವಾರಕಾನ ಹೋಟೆಲ್ ಉಡುಪಿ ಗಾರ್ಡನ್ ಮುಂಬಾಗಲ್ಲಿ ಗುಡ್ಡಕ್ಕೆ ಬೆಂಕಿ , ಆಗ್ನಿಶಾಮಕ ದಳ ಆಗಮನ.

ಸುಳ್ಯ ಪರಿವಾರಕಾನದ ಬಳಿಯಲ್ಲಿ ರಿಕ್ಷಾ ಗ್ಯಾರೆಜ್ ಹಿಂಬಾಗದಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಇದೀಗ ವರದಿಯಾಗಿದೆ . ಸ್ಥಳಕ್ಕೆ ಅಗ್ನಿ ಶಾಮಕದಳ ಆಗಮಿಸಿದ್ದು ಅಗ್ನಿಶಾಮಕ ದಳದವರ ಜೊತೆಗೆ ಪ್ರಗತಿ ಆಂಬುಲೆನ್ಸ್ ಚಾಲಕ ಅಚ್ಚು ಬೆಂಕಿ ನಂದಿಸಲು ಸಹಕರಿಸುತ್ತಿದ್ದಾರೆ ಎಂದು ಸ್ಥಳೀಯರಿಂದ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 146.01 ಕೋಟಿ ರೂ – ಆದಾಯದಲ್ಲಿ ರಾಜ್ಯಕ್ಕೆ ನಂಬರ್ ವನ್

ಸುಬ್ರಹ್ಮಣ್ಯ: ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂ ಆದಾಯ ಗಳಿಸಿದೆ. 2023 ಎಪ್ರೀಲ್‌ನಿಂದ 2024 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ನಂಬರ್ ದೇವಳವಾಗಿ...

ಪಂಜ : ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗೌರವ ಸಲಹೆಗಾರರಾಗಿ ನೇಮಕಗೊಂಡವರಿಗೆ ಗೌರವಾರ್ಪಣೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಗೌರವ ಸಲಹೆಗಾರರಾಗಿ ನೇಮಕಗೊಂಡ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ ಹಾಗೂ ಪರಮೇಶ್ವರ ಬಿಳಿಮಲೆ ಯವರಿಗೆ ಶ್ರೀ ದೇಗುಲದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ‌ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂ‌ರ್, ಪ್ರಧಾನ ಅರ್ಚಕರಾದ ರಾಮಚಂದ್ರ ಬಟ್, ವ್ಯವಸ್ಥಾಪನಾ ಸಮಿತಿ...

ಪಂಜ : ಫೂಟ್ ಫಲ್ಸ್ ಥೆರಪಿ ಶಿಬಿರ ಉದ್ಘಾಟನೆ

ಪಂಜದ ಸಂತ ರೀತಾ ಚರ್ಚ್, ಲಯನ್ಸ್ ಕ್ಲಬ್ ಪಂಜ ಹಾಗೂ ಜೆಸಿಐ ಪಂಜ ಪಂಚಶ್ರೀ ಘಟಕ ಮತ್ತು ಕಂಪಾನಿಯೋನೆಮ್ಮದಿ ವೆಲ್‌ನೆಸ್‌ ಸೆಂಟರ್ ಪುತ್ತೂರು ಇದರ ಆಶ್ರಯದಲ್ಲಿಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ ಪಂಜ ಸಂತ ರೀತಾ ಚರ್ಚ್ ಹಾಲ್‌ನಲ್ಲಿ ಎ.7ರಂದು ನಡೆಯಿತು. ಪಂಜ ಶ್ರೀ ಪರಿವಾರಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್‌ ಕಾನತ್ತೂರು ಶಿಬಿರವನ್ನು...

ಕಾಂತಮಂಗಲ : ಖಾಸಗಿಯವರ ಜಾಗದಲ್ಲಿ ಕಾಣಿಸಿಕೊಂಡ ಬೆಂಕಿ – ಸಂಭಾವ್ಯ ಅಪಾಯ ತಪ್ಪಿಸಿದ ಅಗ್ನಿಶಾಮಕದಳ

ಕಾಂತಮಂಗಲದಲ್ಲಿರುವ ಬಾಡಿಗೆ ಮನೆಗಳಿರುವ ಸಂಕೀರ್ಣದ ಹಿಂಬದಿ ಜಾಗದಲ್ಲಿದ್ದು ಕಸ ಹಾಗೂ ಒಣಗಿದ ಹುಲ್ಲುಗಳಿಗೆ ಬೆಂಕಿ ತಗುಲಿದ ಘಟನೆ ಇಂದು ಸಂಜೆ ನಡೆದಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.
Loading posts...

All posts loaded

No more posts

error: Content is protected !!