Ad Widget

ರಾತ್ರಿ ಸಂಚರಿಸುತ್ತಿದೆ ಟನ್ ಗಟ್ಟಲೇ ಅಕ್ರಮ ಮರಳು – ಗಾಢ ನಿದ್ರೆಗೆ ಜಾರಿದ ಗಣಿ ಇಲಾಖೆ – ಕರೆ ಮಾಡಿದರೂ ಸ್ವೀಕರಿಸದ ಗಣಿ ಅಧಿಕಾರಿಗಳು

ಸುಳ್ಯದಲ್ಲಿ ಪೋಲಿಸ್ ಮತ್ತು ಕಂದಾಯ ಇಲಾಖೆಯು ಹದ್ದಿನ ಕಣ್ಣಿಟ್ಟು ಭೂಮಿಯನ್ನು ಬಗೆದು ಕಳವು ಗೈಯುವ ಕಳ್ಳರ ವಿರುದ್ದ ಸಮರ ಸಾರುತ್ತಿದೆ. ಇತ್ತ ಗಣಿ ಇಲಾಖೆ ಮಾತ್ರ ಗಾಢ ನಿದ್ದೆಯಲ್ಲಿದೆ. ಸುಳ್ಯ , ಕಡಬ ಹಾಗೂ ಕೊಡಗು ಜಿಲ್ಲೆಯ ಸಂಪಾಜೆ , ಪೆರಾಜೆ ಭಾಗಗಳಿಂದ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದು ಪೋಲಿಸ್ ಮತ್ತು ಕಂದಾಯ ಇಲಾಖೆಯ ಕಣ್ಣಿಗೆ...

ನಾಳೆ (ಎ.10) ದ್ವಿತೀಯ ಪಿಯುಸಿ ಫಲಿತಾಂಶ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

ಎ.10 ರಂದು ಬೆಳಿಗ್ಗೆ 10:00 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿಯನ್ನು ನಡೆಸಲಿದೆ ನಂತರ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ಬೆಳಿಗ್ಗೆ 11:00 ಗಂಟೆಯ ನಂತರ ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Ad Widget

ಪಂಜ ದೇವಸ್ಥಾನಕ್ಕೆ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಬಾಲಕೃಷ್ಣ ಶಾಸ್ತ್ರಿ ಭೇಟಿ

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ದ ಹಿರಿಯ ನ್ಯಾಯವಾದಿ ಗಳಾದ ಬಾಲಕೃಷ್ಣ ಶಾಸ್ತ್ರಿ ಗುತ್ತಿಗಾರು ಇಂದು ಶ್ರೀ ಪರಿವಾರ ಪಂಚಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ದಾ. ದೇವಿ ಪ್ರಸಾದ್ ಕಾನತ್ತೂರು, ವ್ಯವಸ್ಥಾ ಪನ ಸಮಿತಿ ಸದಸ್ಯ ರಾದ ಕಾಯಂಬಾಡಿ ಸತ್ಯನಾರಾಯಣ ಭಟ್, ಸಂತೋಷ್ ಕುಮಾರ್ ರೈ...

ಗುತ್ತಿಗಾರಿನಲ್ಲಿ ನಾಳೆ ( ಎ.10) ರಾಮ್ ದೇವ್ ಸೂಪರ್ ಮಾರ್ಕೆಟ್ ಶುಭಾರಂಭ

ಗುತ್ತಿಗಾರಿನಲ್ಲಿ ಅನೇಕ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕನರಾಮ್ ಪಟೇಲ್ ಮತ್ತು ಸೋಹನ್ ಲಾಲ್ ಪಟೇಲ್ ಮಾಲೀಕತ್ವದ ರಾಮ್ ದೇವ್ ಗಾರ್ಮೆಂಟ್ಸ್ ಇದರ ಸಹಸಂಸ್ಥೆ ರಾಮ್ ದೇವ್ ಸೂಪರ್ ಮಾರ್ಕೆಟ್ ಏ. 10 ರಂದು ಗುತ್ತಿಗಾರಿನ ಶ್ರೀ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ. ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷವಾಗಿ ವಸ್ತುಗಳ ಖರೀದಿ ಮೇಲೆ 5% ರಿಂದ 20% ವರೆಗೆ...

ಮರ್ಕಂಜ ಗಣಿಗಾರಿಕೆ ನಿಲ್ಲಿಸುವಂತೆ ಊರವರ ಮನವಿಗೆ ಸ್ಪಂದಿಸಿದ ತಾಲೂಕು ಆಡಳಿತ – ಗಣಿಗಾರಿಕೆ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ !

ಕೆಲವು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಮರ್ಕಂಜದ ಅಳವುಪಾರೆ ಗಣಿಗಾರಿಕೆ ಕೆಲವು ದಿನದ ಹಿಂದೆ ಪುನರಾರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಊರವರು ಸೇರಿ ಸುಳ್ಯ ತಹಶೀಲ್ದಾರರಿಗೆ ಮನವಿ ನೀಡಿ ಗಣಿಗಾರಿಕೆ ನಿಲ್ಲಿಸುವಂತೆ ವಿನಂತಿಸಿದ್ದರು ಇಲ್ಲದಿದ್ದರೆ ಈ ಭಾರಿಯ ಲೋಕಸಭೆ ಚುನಾವಣೆ ಬಹಿಷ್ಕಾರಿಸುವ ಬಗ್ಗೆ ತಿಳಿಸಿದ್ದರು. ಇವರ ಮನವಿಗೆ ಸ್ಪಂಧಿಸಿದ ಸುಳ್ಯ ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ಜಿ...

ಬಿ.ಜೆ.ಪಿ ಮಹಿಳಾ ಮೋರ್ಚಾ ಸುಳ್ಯ ಮಂಡಲ ವತಿಯಿಂದ ನಾರಿಶಕ್ತಿ ಸಮಾವೇಶ

ಏ.8ರಂದು ಬಿ.ಜೆ.ಪಿ ಮಹಿಳಾ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ನಾರಿಶಕ್ತಿ ಸಮಾವೇಶ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ ದಯಾಳು ರೈತ ಸಭಾಭವನದಲ್ಲಿ ನಡೆಯಿತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ನೆರವೇರಿಸಿ ಶುಭಾ ಹಾರೈಸಿದರು. ಕಾರ್ಯಕ್ರಮದ ಸಭಾಂಗಣದಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡರು.

ಬ್ರಿಜೇಶ್ ಚೌಟರಿಂದ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪ ನಮನ

ಮಂಗಳೂರು ಬಾವುಟಗುಡ್ಡೆ ಬಳಿಯಿರುವ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ರವರು ಏ.09ರಂದು ಪುಷ್ಪ ನಮನ ಸಲ್ಲಿಸಿದರು. 1837 ರಲ್ಲಿ ಬ್ರಿಟಿಷರ ವಿರುದ್ಧ ಸಮರ ಸಾರಿದ ರಾಮಯ್ಯ ಗೌಡರ ಬಲಿದಾನ  ನಮಗೆಲ್ಲ ಆದರ್ಶವೆಂದು ಬ್ರಿಜೇಶ್ ಚೌಟ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ರಾದ ವೇದವ್ಯಾಸ ಕಾಮತ್, ಅಶ್ವಥ್ ನಾರಾಯಣ್ ಗೌಡ, ಯತೀಶ್...

ಜಿಲ್ಲಾ ಕಾಂಗ್ರೆಸ್ ನ ವಿವಿಧ ಸಮಿತಿಗೆ ಉಸ್ತುವಾರಿ ನೇಮಕ

ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಘಟಕದ ಉಸ್ತುವಾರಿಯಾಗಿ ಜಯಪ್ರಕಾಶ್ ರೈ ರವರನ್ನು ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯಾಗಿ ಕಿರಣ್ ಬುಡ್ಲೆಗುತ್ತು ರವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ರವರು ಆಯ್ಕೆ ಮಾಡಿರುತ್ತಾರೆ.

ಬೆಳ್ಳಾರೆಯಲ್ಲಿ ಸಾರ್ವಜನಿಕ ರುದ್ರಭೂಮಿ ನಿರ್ಮಿಸಲು ಜನರ ಆಗ್ರಹ – ಸರಕಾರದಿಂದ ಮಂಜೂರಾದ 30 ಲಕ್ಷ ಅನುದಾನಕ್ಕೆ ಅಡ್ಡಗಾಲು – ಲಕ್ಷಾಂತರ ಹಣ ದುರುಪಯೋಗ ಆಗಿದೆಯೇ?

ಸುಳ್ಯ ತಾಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪೇಟೆಗಳಲ್ಲಿ ಬೆಳ್ಳಾರೆಯೂ ಒಂದು. ಇಲ್ಲಿ ವ್ಯವಸ್ಥಿತ ರುದ್ರಭೂಮಿ ಮರೀಚಿಕೆಯಾಗಿಯೇ ಉಳಿದಿದ್ದು, ಆಡಳಿತ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಕಂದಾಯ ಇಲಾಖೆಯು ಸುಮಾರು 84 ಸೆಂಟ್ಸ್ ಜಾಗ ಮಂಜೂರು ಗೊಳಿಸಿದ್ದು ಇದರ ಅಭಿವೃದ್ಧಿಗಾಗಿ ಈಗಾಗಲೇ ಲಕ್ಷಾಂತರ ಹಣ ವ್ಯಯಿಸಲಾಗಿದೆ. ಲಕ್ಷಾಂತರ ಖರ್ಚು ಮಾಡಿ ಅವೈಜ್ಞಾನಿಕ ರೀತಿಯಲ್ಲಿ...

ಅಮರ ಸುಳ್ಯ ಸುದ್ದಿ ಯುಗಾದಿ ವಿಶೇಷಾಂಕ ಬಿಡುಗಡೆ , ಮಾಧ್ಯಮ ಕ್ಷೇತ್ರದಲ್ಲಿ ಜನಪರವಾಗಿ ಇನ್ನಷ್ಟು ಕಾಳಜಿ ಮತ್ತು ಎಚ್ಚರಿಸಬೇಕಾದ ನೈಜವರದಿಗಳು ಪ್ರಕಟವಾಗಲಿ – ಜಿ ಮಂಜುನಾಥ್.

ಸುಳ್ಯದ ಜನಪರ ಪತ್ರಿಕೆಯಾಗಿ ಕಳೆದ 13 ವರ್ಷಗಳಿಂದಕಾರ್ಯನಿರ್ವಹಿಸುತ್ತಿರುವ ಅಮರ ಸುಳ್ಯ ಸುದ್ದಿ ಪತ್ರಿಕೆಯ ಮೂರನೇ ಆವೃತ್ತಿಯ ಯುಗಾದಿ ವಿಶೇಷಾಂಕವನ್ನು ಸುಳ್ಯ ತಾಲೂಕು ದಂಢಾಧಿಕಾರಿಗಳಾದ ಜಿ ಮಂಜುನಾಥ್ ಲೋಕಾರ್ಪಣೆ ಗೊಳಿಸಿದರು . ಅಮರ ಸುದ್ದಿಯು ಪಕ್ಷ , ಜಾತಿ ಮತ ಭೇದವಿಲ್ಲದೆ ಸಮಾಜದ ಕೈ ಗನ್ನಡಿಯಾಗಿ ನಿರಂತರವಾಗಿ ಮೂಡಿ ಬರುತ್ತಿದ್ದು ಸುಳ್ಯ ತಾಲೂಕು ಕಛೇರಿಯಲ್ಲಿ ಲೋಕಾರ್ಪಣೆ ಕಾರ್ಯಕ್ರಮವನ್ನು...
Loading posts...

All posts loaded

No more posts

error: Content is protected !!