Ad Widget

ಬೆಳ್ಳಾರೆ ಪೇಟೆಯ ರಸ್ತೆಯುದ್ದಕ್ಕು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಮತಯಾಚನೆ

ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಂದು ಮುಂಜಾನೆಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮತಭೇಟೆಗೆ ಇಳಿದು ಸಂಜೆಯಾಗುತ್ತಿದ್ದಂತೆ ಬೆಳ್ಳಾರೆ ಪೇಟೆಗೆ ಆಗಮಿಸಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾಜಿ ಸಚಿವರಾದ ರಾಮನಾಥ ರೈ , ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ,...

ಬೈಕ್ ಕಳ್ಳತನ ಪ್ರಕರಣ ಪತ್ತೆಹಚ್ಚಿದ ಸುಬ್ರಹ್ಮಣ್ಯ ಪೊಲೀಸರು  – ಆರೋಪಿಗಳ ಬಂಧನ

ಗುತ್ತಿಗಾರು ಸಮೀಪ ರಸ್ತೆ ಬದಿ ನಿಲ್ಲಿಸಿದ್ದ (KA21K9114) ಬೈಕನ್ನು ಕಳ್ಳತನ ನಡೆಸಿರುವ ಬಗ್ಗೆ ಸುಬ್ರಮಣ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುಬ್ರಮಣ್ಯ ಠಾಣಾಧಿಕಾರಿ ಕಾರ್ತಿಕ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಹಾಸನ ಮೂಲದ ಆರೋಪಿಗಳಾದ ಚಂದನ್ ಹಾಗೂ ವರದಾರಜ್ ಎಂಬುವವರಿಂದ ಕದ್ದಿರುವ ಬೈಕನ್ನು ಮಡಿಕೇರಿಯಲ್ಲಿ ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಯಿತು. ಪ್ರಕರಣ ಭೇದಿಸಿದ ಸುಬ್ರಹ್ಮಣ್ಯ ಪೊಲೀಸರು ಆರೋಪಿಗಳನ್ನು...
Ad Widget

ಜೆಡಿಎಸ್ ಯುವ ಮುಖಂಡ ಪ್ರವೀಣ್ ಮುಂಡೋಡಿ ಕಾಂಗ್ರೆಸ್ ಸೇರ್ಪಡೆ

ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಜೆ.ಡಿ .ಎಸ್ ಮೈತ್ರಿ ಬೆನ್ನಲ್ಲೇ ಜೆಡಿಎಸ್ ನ ತಳಮಟ್ಟದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಭಿನ್ನಮತ ಭುಗಿಲೆದ್ದಿದ್ದು ಹಲವಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕೈ ಹಿಡಿಯುತ್ತಿದ್ದಾರೆ. ಸುಳ್ಯದ ಜೆಡಿಎಸ್ ಯುವ ಮುಖಂಡ ಪ್ರವೀಣ್ ಮುಂಡೋಡಿ ಇಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಮಿಥುನ್...

ಪಿ.ಯು.ಸಿ ಫಲಿತಾಂಶ : ಬೆಳ್ಳಾರೆಯ ಹರ್ಷಿತಾ.ಟಿ ಡಿಸ್ಟಿಂಕ್ಷನ್

ಈ ಸಲದ ಪಿ.ಯು.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬೆಳ್ಳಾರೆ ಮಾಸ್ತಿಕಟ್ಟೆಯ ಹರ್ಷಿತಾ.ಟಿ 545 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ. ಇವರು ಬೆಳ್ಳಾರೆ ಮಾಸ್ತಿಕಟ್ಟೆಯ ಸುಬ್ರಹ್ಮಣ್ಯೇಶ್ವರ ಗ್ಯಾರೇಜ್ ಮಾಲಕ ಶ್ರೀ ತಿರುಮಲೇಶ್ವರ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಬೇಬಿ.ಕೆ.ಸಿ...

ಮರ್ಕಂಜದಲ್ಲಿ ಪರಿಹಾರಿಣಿ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ

ಮರ್ಕಂಜದಲ್ಲಿ ಎಪ್ರಿಲ್ 12 ರಿಂದ ಏಳು ದಿನಗಳ ಪರಿಹಾರಿಣಿ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ಆಯೋಜನೆಗೊಂಡಿದೆ ಯುವಕ ಮಂಡಲ ( ರಿ.) ಮರ್ಕಂಜ ಆಶ್ರಯದಲ್ಲಿ ಎಪ್ರಿಲ್ 12 ರಿಂದ ಏಳು ದಿನಗಳ ಪರಿಹಾರಿಣಿ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ನಡೆಯಲಿದೆ. ಶಿವಮೊಗ್ಗದ ಶ್ರೀ ಚಂದನ್. ಜಿ. ರವರು ಚಿಕಿತ್ಸೆ ನೀಡಲಿದ್ದಾರೆ. ಮೊಣಕಾಲು ನೋವು,...

ಎ.17 : ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸುಳ್ಯ ವಿಧಾನಸಭಾ ಕ್ಷೇತ್ರ ಪ್ರವಾಸ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಎ.17 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರವಾಸ ಕೈಗೊಳ್ಳಲಿದ್ದಾರೆ.‌ ಎ.17 ರಂದು ಬೆಳಿಗ್ಗೆ 8 ಗಂಟೆಗೆ ಮಂಡೆಕೋಲು ಸಹಕಾರಿ ಸಂಘದ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ, ಬೆಳಿಗ್ಗೆ 10 ಗಂಟೆಗೆ ಕೆ.ವಿ.ಜಿ ಕ್ಯಾಂಪಸ್ ಭೇಟಿ, ಬೆಳಿಗ್ಗೆ 11 ಗಂಟೆಗೆ ಅರಂತೋಡು ಸಹಕಾರಿ ಸಂಘದ ಸಭಾಭವನದಲ್ಲಿ ಕಾರ್ಯಕರ್ತರ...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ

*ದೇವಳದಲ್ಲಿ ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ* ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ, ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ...

ಗಾಂಧಿನಗರ ಕೆಪಿಎಸ್: ಪಿಯುಸಿ ಕಲಾ ವಿಭಾಗ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. ೧೦೦, ವಾಣಿಜ್ಯ ವಿಭಾಗದಲ್ಲಿ ಶೇ. ೯೩

ಸುಳ್ಯ ಗಾಂಧಿನಗರದ ಕೆಪಿಎಸ್ ಪಿಯುಸಿ ವಿಭಾಗದ ಫಲಿತಾಂಶ ಪ್ರಕಟಗೊಂಡಿದ್ದು, ಕಲೆ ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡ ೧೦೦ ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ೯೩% ಲಭಿಸಿದೆ.ಕಲಾ ವಿಭಾಗದಲ್ಲಿ ರಾಜೇಶ ೫೬೭ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದರೆ , ಫಾತಿಮತ್ ಜಾಯಿದಾ ೫೬೦ ಅಂಕಗಳಿಸಿ ವಿಜ್ಞಾನ ವಿಭಾಗದಲ್ಲಿ ಪ್ರಥ ಸ್ಥಾನದಲ್ಲಿದ್ದರೆ. ಫಾತಿಮತ್ ತಂಬ್ರಿನ ೪೬೭ ಅಂಕಗಳಿಸಿ...

ಕನಕಮಜಲು: ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರು

ಕನಕಮಜಲಿನ ಆನೆಗುಂಡಿ ಚಡವಿನಲ್ಲಿ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕೆ ಜಾರಿ ಮರಕ್ಕೆ ಗುದ್ದಿ ನಿಂತ ಘಟನೆ ಏ.೧೧ರಂದು ಬೆಳಿಗ್ಗೆ ನಡೆದಿದೆ. ತಮಿಳ್ಳಾಡಿನ ಸೇಲಂ ನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರಲ್ಲಿ ಚಾಲಕ ಮಾತ್ರ ಇದ್ದು ಗಾಯಗಳಾಗಿಲ್ಲ. ಐವರ್ನಾಡಿನ ಜಬಳೆ ಸತೀಶ್ ರವರ ಕ್ರೇನ್ ಸ್ಥಳಕ್ಕೆ ಬಂದಿದ್ದು ಕಾರನ್ನು ಮೇಲಕ್ಕೆತ್ತುವ ಪ್ರಕ್ರಿಯೆಯಲ್ಲಿ ತೊಡಗಿದೆ...

ಸುಳ್ಯ: ರಾಜೇಶ್ ಪೆಟ್ರೋಲ್ ಪಂಪ್ ಮಾಲಕ ಜಯರಾಮ ಆಳ್ವ ನಿಧನ

ಸುಳ್ಯದ ಹಿರಿಯ ಉದ್ಯಮಿಯಾಗಿರುವ ಜಯರಾಮ ಆಳ್ವ ರು ರಾಜೇಶ್ ಬಾರ್ &ರೆಸ್ಟೋರೆಂಟ್ ಹಾಗೂ ರಾಜೇಶ್ ಪೆಟ್ರೋಲ್ ಪಂಪ್ ಮಾಲಕ, ಐವರ್ನಾಡು ಗ್ರಾಮದ ಕೃಷಿಕ, ಇವರು ಅಲ್ಪಕಾಲದ ಅಸೌಖ್ಯದಿಂದ ಏ.೧೦ರ ರಾತ್ರಿ ನಿಧನರಾಗಿದ್ದಾರೆ. ಇವರಿಗೆ ೮೩ವರ್ಷ ವಯಸ್ಸಾಗಿದ್ದು ಮೃತರು ಪತ್ನಿ ವೇದಾವತಿ ಆಳ್ವ, ಪುತ್ರರಾದ ದೇವರಾಜ್ ಆಳ್ವ ಮತ್ತು ಗಣೇಶ್ ಆಳ್ವ, ಸೊಸೆಯಂದಿರು ಮಮತ ದೇವರಾಜ್ ಆಳ್ವ,...
Loading posts...

All posts loaded

No more posts

error: Content is protected !!