
ಸುಬ್ರಹ್ಮಣ್ಯ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದ ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಬ್ರಹ್ಮಣ್ಯದ ದೇವರಗದ್ದೆಯ ದಿಶಾ ಉಪರ್ಣ ಅವರ ಮನೆಗೆ ಮಂಗಳವಾರ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿದರು.ಶೈಕ್ಷಣಿಕ ಸಾಧಕಿಯನ್ನು ಶಾಲು ಹೊದಿಸಿ, ಹಾರ ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಅಲ್ಲದೆ ವಿದ್ಯಾರ್ಥಿನಿಯ ಸಾಧನೆಯನ್ನು ಕೊಂಡಾಡಿದ ಶಾಸಕರು, ಇದು ಸುಬ್ರಹ್ಮಣ್ಯ ಸೇರಿದಂತೆ ತಾಲೂಕಿಗೆ ಹೆಮ್ಮೆಯ ಸಂಗತಿ.ಇನ್ನಷ್ಟು ಸಾಧನೆ ಮಾಡಿ ಭವಿಷ್ಯದಲ್ಲಿ ಶ್ರೇಷ್ಠತೆ ಸಂಪಾದಿಸಬೇಕು ಎಂದು ಸ್ಪೂರ್ತಿ ತುಂಬಿದರು.
ಸಾಧಕಿಗೆ ಗೌರವ:
ದೇವರಗದ್ದೆಯ ದಿಶಾಳ ನಿವಾಸಕ್ಕೆ ಆಗಮಿಸಿದ ಶಾಸಕರನ್ನು ಆರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿ ಹಾಗೂ ದಿಶಾಳ ತಂದೆ ಷಣ್ಮುಖ ಉಪರ್ಣ ಹಾಗೂ ತಾಯಿ ರೂಪಾ.ಎಸ್.ಉಪರ್ಣ ಆತ್ಮೀಯವಾಗಿ ಸ್ವಾಗತಿಸಿದರು.ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ಸಾಧಕಿಯನ್ನು ಸನ್ಮಾನಿಸಿದರು.
ಈ ಸಂದರ್ಭ ಮಾಜಿ ಜಿ.ಪಂ.ಅಧ್ಯಕ್ಷ ವೆಂಕಟ್ ದಂಬೆಕೋಡಿ, ಸುಳ್ಯ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ದಿಶಾಳ ತಂದೆ ಷಣ್ಮುಖ ಉಪರ್ಣ, ತಾಯಿ ರೂಪಾ.ಎಸ್.ಉಪರ್ಣ, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್.ಎಲ್, ಸದಸ್ಯೆ ಭಾರತಿ ದಿನೇಶ್, ಸುಬ್ರಹ್ಮಣ್ಯ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಪ್ರಮುಖರಾದ ಚಿದಾನಂದ ಕಂದಡ್ಕ, ಪ್ರಸಾದ್ ಕಾಟೂರ್, ಶೇಖರ್ ಸುಬ್ರಹ್ಮಣ್ಯ, ರಾಮಚಂದ್ರ ದೇವರಗದ್ದೆ ಉಪಸ್ಥಿತರಿದ್ದರು.