ಮಂಡೆಕೋಲು: ಮಹಾವಿಷ್ಣು ಮೂರ್ತಿ ಅಷ್ಟಬಂದ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಅಂಗವಾಗಿ ನಿರಂತರವಾಗಿ ನಾಲ್ಕು ದಿನಗಳ ಕಾಲ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮವು ಸಂಪನ್ನವಾಯಿತು .
ಸಂಪನ್ನ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಥಿಗಳಾಗಿ ಆಗಮಿಸಿದ ನಾ ಸೀತರಾಮ ಮಾತನಾಡುತ್ತಾ ಮಂಡೆಕೋಲು ಗ್ರಾಮವೇ ಇಡೀ ರಾಷ್ಟ್ರೀಯತೆಯನ್ನು ಗಟ್ಟಿಯಾಗಿ ನೆಲೆಯೂರಿದ್ದು ಇಲ್ಲಿ ನಾವು ಭೋದನೆ ಭಾಷಣ ಮಾಡಬೇಕಾದ ಅನಿವಾರ್ಯತೆ ಮತ್ತು ಅಗ್ಯತೆ ಇಲ್ಲಾ ಅಲ್ಲದೇ ಮಂಡೆಕೋಲು ಗ್ರಾಮವು ರಾಷ್ಟದಲ್ಲಿ ಕೆಲವೊಂದು ಉನ್ನತ ಸ್ಥಾನಮಾನಗಳಲ್ಲಿ ಇಲ್ಲಿನ ಜನರಿದ್ದು ಅಲ್ಲದೇ ದೇಶದ ಗಡಿಯಲ್ಲಿ ಕಾಯುವ ವೀರ ಯೋಧರನ್ನು ಮತ್ತು ದೇಶಕ್ಕೆ ಹೆಮ್ಮೆಯಾದ ಕೆಲವು ರೋಚಕ ಕದನ ಕನಕ್ಕೆ ಇಳಿದು ಪಾಪಗಳನ್ನು ಹೆಡೆಮುರಿ ಕಟ್ಟಿದವರಲ್ಲಿ ನಮ್ಮ ಈ ಮಂಡೆಕೋಲಿನ ಯೋಧರು ಒಬ್ಬರು ಎನ್ನುವುದು ನಮ್ಮ ಸೌಭಾಗ್ಯ ಎಂದು ಹೇಳಿದರು. ಈ ಹಿಂದಿನಿಂದಲೂ ಹಿಂದು ಧರ್ಮವು ಗಟ್ಟಿ ಚರ್ಮದ ರೀತಿಯಲ್ಲಿ ಇದ್ದು ಎಷ್ಟೆ ತೊಂದರೆಗಳು ಆದಾಗಲು ಎಚ್ಚರವಹಿಸದೇ ಜಾಗೃತರಾಗದೇ ಇರುವುದು ಕಾಣಿಸುತ್ತದೆ ಎಂದು ಹೇಳಿದರು .
ಮುರಳಿಕೃಷ್ಣ ಹಂಸಂತಡ್ಕ ಮತನಾಡುತ್ತಾ ಕಾಫೀರರು ಎಂದು ಹಿಂದುಗಳನ್ನು ಜರಿಯುತ್ತಿದ್ದ ರಾಷ್ಟ್ರ , ನಮ್ಮ ಪವಿತ್ರವಾದ ಸತ್ಯನಾರಾಯಣ ಪೂಜೆಯ ಗಂಟೆ ನಾದ ಕೇಳಿಸಿದೆ ಎಂದು ಜೈಲಿಗಟ್ಟಿದ ದೇಶದಲ್ಲಿ ಇದೀಗ ಸುಮಾರು ಇಪ್ಪತೈದು ಎಕರೆ ಭೂಮಿಯಲ್ಲಿ ಹಿಂದು ದೇವಾಲಯ ಪ್ರತಿಷ್ಟಾಪನೆ ಆಗಿದ್ದು ಇದೀಗ ಮೆಟ್ಟಿಲುಗಳಂತೆ ವಿಶ್ವಕ್ಕೆ ಭೋದನೆ ಮಾಡುವ ರೀತಿಯಲ್ಲಿ ಹಿಂದು ಸಂಸ್ಕೃತಿ ಬೆಳೆದಿದೆ ಅಲ್ಲದೇ ನಮ್ಮ ಭಜನೆಯನ್ನು ಓರ್ವ ಸರಕಾರಿ ನೌಕರ ಹೀಯಾಳಿಸಿ ಬರೆದಾಗ ಪ್ರತಿಭಟಿಸಿದ ನಮ್ಮನ್ನೆ ಕೆಲವರು ಬಾಂಬ್ ಹಾಕಲು ಬಂದರು ಎಂದು ದೂರು ದಾಖಲಿಸಿದ್ದು ಕಂಡಿದ್ದೆವೆ ಆದರೆ ಭಜನೆಯಿಂದ ಏಕಾಗ್ರತೆ ಮತ್ತು ಸಂಸ್ಕೃತಿಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು ಈ ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಜೇಶ್ ಶೆಟ್ಟಿ ಮೇನಾಲ , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು . ಸಭಾ ಕಾರ್ಯಕ್ರಮದ ಬಳಿಕ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ಎಂಬ ತುಳು ನಾಟಕ ವೇದಿಕೆಯಲ್ಲಿ ನಡೆಯಲಿದೆ.