Ad Widget

ಮಧ್ಯ ವಯಸ್ಸಿನ ಮಕ್ಕಳು ದೇವಸ್ಥಾನಕ್ಕೆ ಬರುವುದು ಕಡಿಮೆಯಾಗುತ್ತಿದೆ. ಆ ಮಕ್ಕಳನ್ನು ಒತ್ತಾಯ ಪೂರ್ವಕವಾಗಿಯಾದರೂ ದೇವಸ್ಥಾನಕ್ಕೆ ಕರೆದುಕೊಂಡು ಬರಬೇಕು: ಎಡನೀರು ಶ್ರೀ

ಮಕ್ಕಳ ಮುಗ್ದತೆಯಲ್ಲಿಯೇ ಅವರಿಗೆ ಧರ್ಮ ಸಂಸ್ಕೃತಿಗಳನ್ನು ಕಲಿಸಿದಾಗ ಅದು ಮುಂದೆ ವರವಾಗಿ ಕಾಣಲು ಸಾಧ್ಯವಾಗಿದೆ – ಎಸ್ ಅಂಗಾರ.


ಮಂಡೆಕೋಲು ದೇವಸ್ಥಾನ ಬ್ರಹ್ಮಕಲಶ : ಧಾರ್ಮಿಕ ಸಭೆ
ಸಂಸ್ಕಾರ ಕಲಿಸುವ, ಜಾತಿ – ಪಕ್ಷ ಬೇದ ಮರೆತು ಎಲ್ಲರನ್ನೂ ಒಂದಾಗಿಸುವ ಶ್ರದ್ಧಾ ಕೇಂದ್ರ ದೇವಸ್ಥಾನ. ದೇವಸ್ಥಾನದ ಎಲ್ಲ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡಾಗ ಸಂಸ್ಕಾರ ಸಿಗುತ್ತದೆ ” ಎಂದು ಎಡನೀರು ಶಂಕರಾಚಾರ್ಯ ಪೀಠದ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.

ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಎ.30ರಂದು ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಆಶೀರ್ವಚನ ನೀಡಿದರು.

“ಮಧ್ಯ ವಯಸ್ಸಿನ ಮಕ್ಕಳು ದೇವಸ್ಥಾನಕ್ಕೆ ಬರುವುದು ಕಡಿಯಾಗುತ್ತಿದೆ. ಆ ಮಕ್ಕಳನ್ನು ಒತ್ತಾಯ ಪೂರ್ವಕವಾಗಿಯಾದರೂ ದೇವಸ್ಥಾನಕ್ಕೆ ಕರೆದುಕೊಂಡು ಬರಬೇಕು. ಆಗ ನಮ್ಮ ಸಂಸ್ಕಾರ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಂಚಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಧಾರ್ಮಿಕ ಉಪನ್ಯಾಸ ನೀಡಿದ ಕುಂಟಾರು ರವೀಶ ತಂತ್ರಿಯವರು, ದೇವರು ಬಿಂಬವಾದರೆ ನಾವು ಪ್ರತಿಬಿಂಬವಿದ್ದಂತೆ. ಊರಿನ ಶ್ರದ್ಧಾಕೇಂದ್ರದಲ್ಲಿ ಆಗಬೇಕಾದ ಕಾರ್ಯ ಚೆನ್ನಾಗಿ ನಡೆದರೆ ಊರಿಗೇ ಶ್ರೆಯಸ್ಸು ಆಗುತ್ತದೆ” ಎಂದು ಹೇಳಿದರು.

ಮಾಜಿ ಸಚಿವ ಎಸ್.ಅಂಗಾರ ಮಾತನಾಡಿ, ದೇವರು ಜಾತಿ – ಧರ್ಮವನ್ನು ನೋಡದೇ ಭಕ್ತಿ ಒಲಿಯುತ್ತಾನೆ” ಮಕ್ಕಳು ಮುಗ್ದತೆಯಲ್ಲಿಯೇ ದೇವತಾ ಕರ್ಯಗಳಲ್ಲಿ ಜೋಡಿಸಿಕೊಳ್ಳವ ಕೆಲಸ ಆಗಬೇಕು , ಅಲ್ಲದೇ ಮಕ್ಕಳ ಮುಗ್ದತೆಯಲ್ಲಿಯೇ ಅವರಿಗೆ ಧರ್ಮ ಸಂಸ್ಕೃತಿಗಳನ್ನು ಕಲಿಸಿದಾಗ ಅದು ಮುಂದೆ ವರವಾಗಿ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.

ಕುಂಟಾರು ವಾಸುದೇವ ತಂತ್ರಿಗಳು,
ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಅಧ್ಯಕ್ಷ ರಾಜೇಶ್ ಮೇನಾಲ, ಅಜ್ಜಾವರ ಮಹಿಷಾಮರ್ದಿನಿ ದೇವಸ್ಥಾನದ ಆಡಳಿತ‌ ಮೊಕ್ತೇಸರ ಭಾಸ್ಕರ್ ರಾವ್ ಬಯಂಬು, ಆರ್.ಎಸ್.ಎಸ್. ಕರ್ನಾಟಕ ದಕ್ಣಿ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ , ದೇರಣ್ಣ ಗೌಡ ಅಡ್ಡಂತಡ್ಕ ಭಾಗವಹಿಸಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ,‌ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್ ವೇದಿಕೆಯಲ್ಲಿ ಇದ್ದರು.ಬ್ರಹ್ಮಕಶೋತ್ಸವ ಸಮಿತಿ ಕಾರ್ಯದರ್ಶಿ ಜಯರಾಜ್ ಕುಕ್ಕೆಟ್ಟಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಅಚ್ಯುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!