2024- 25 ನೇ ಸಾಲಿನಲ್ಲಿ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇಕಡ 99 ಅಂಕಗಳಿಸಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಗಳಿಸಿದ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ದಿಶಾ .ಎಸ್ ಅವರಿಗೆ ಇಂದು ಶನಿವಾರ ಡಾl ರವಿ ಕಕ್ಕೆಪದವ್ ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಮಣ್ಯ ಘಟಕದ ವತಿಯಿಂದ ಗೌರಾರ್ಪಣೆ ಸನ್ಮಾನ ಮಾಡಲಾಯಿತು.
ಸುಬ್ರಹ್ಮಣ್ಯದ ಕಲಾವಿದ ಸಮಾಜಸೇವಕ ಯಜ್ಞೇಶ್ ಆಚಾರ್ ಅವರು ಕುಮಾರಿ ದಿಶಾಳನ್ನು ಸನ್ಮಾಸಿದರು. ಈ ಸಂದರ್ಭದಲ್ಲಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟಿನ ಸಂಸ್ಥಾಪಕ ಡಾl ರವಿಕಕ್ಕೆ ಪದವು, ಗೀತಾ ರವಿ ಕಕ್ಕೆ ಪದವು ,ಅರ್ಜುನ್ ,ಅಮೃತ ಲಕ್ಷ್ಮಿ, ಚಿನ್ಮಯ್, ಕಚೇರಿ ಸಿಬ್ಬಂದಿ ರಮ್ಯಾ, ಬಿಎಂಎಸ್ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನೇಶ್ ದೇವರ ಗದ್ದೆ, ಷಣ್ಮುಖ ಉಪಾರಣ ದಂಪತಿಗಳು, ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ರೋ ಗೋಪಾಲ್ ಎಣ್ಣೆ ಮಜಲ್ ಸನ್ಮಾನ ಪತ್ರ ವಾಚಿಸಿದರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಘಟಕದ ಸ್ಥಾಪಕ ಅಧ್ಯಕ್ಷ ಸೀನಿಯರ್. ವಿಶ್ವನಾಥ ನಡತೋಟ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ವಿಜಯಕುಮಾರ ಧನ್ಯವಾದ ಸಮರ್ಪಿಸಿದರು.