ಸುಳ್ಯ ತಾಲೂಕು ದಂಡಾಧಿಕಾರಿಗಳಾದ ಜಿ ಮಂಜುನಾಥ್ ರವರಿಗೆ ಸಂಪಾಜೆ ಮೂಲದ ವ್ಯಕ್ತಿಯೋರ್ವರು ದೂರವಾಣಿ ಮೂಲಕ ಅವಾಚ್ಯಾ ಶಬ್ದಗಳಿಂದ ನಿಂದನೆ ಮಾಡಿ ಪೋಲಿಸ್ ಇಲಾಖೆಗೆ ದೂರು ನೀಡಿದ ಪ್ರಕರಣ ಠಾಣೆಯಲ್ಲೆ ಇತ್ಯರ್ಥವಾದ ಘಟನೆ ವರದಿಯಾಗಿದೆ.
ಸಂಪಾಜೆ ಮೂಲದ ಧೀರಜ್ ಎಂಬುವ ವ್ಯಕ್ತಿಯವರು ತಮ್ಮ ಜಮೀನಿನ ಕುರಿತಾದ ವಿಚಾರದಲ್ಲಿ ದೂರವಾಣಿ ಕರೆ ಮಾಡಿದ್ದು, ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು ಚುನಾವಣಾ ಕರ್ತವ್ಯದ ಹಿನ್ನಲೆಯಲ್ಲಿ ಸಭೆಯಲ್ಲಿ ಭಾಗವಹಿದಿದ್ದರು. ತಾವು ಸಭೆಯಲ್ಲಿರುವುದಾಗಿ ದೂರವಾಣಿ ಕರೆದಾರರಿಗೆ ತಿಳಿಸಿದ್ದರು. ನಿರಂತರವಾಗಿ ಹಲವಾರು ಭಾರಿ ಕರೆ ಮಾಡತೊಡಗಿದರು. ಅವರ ನಿರಂತರ ಕರೆ ಹಿನ್ನಲೆಯಲ್ಲಿ ದೂರವಾಣಿ ಸ್ವೀಕರಿಸುತ್ತಿದ್ದಂತೆ ವ್ಯಕ್ತಿಯು ನಿಂದಿಸಲು ಪ್ರಾರಂಭಿಸಿದರೆನ್ನಲಾಗಿದೆ. ಇದು ಅವರಿಗೆ ಮನಸ್ಸಿಗೆ ಘಾಸಿ ಆದ ಹಿನ್ನಲೆಯಲ್ಲಿ ಪೋಲಿಸ್ ಇಲಾಖೆಗೆ ದೂರು ಸಲ್ಲಿಸಿದರು. ವಿಷಯ ತಿಳಿದ ದೀರಜ್ ಕುಟುಂಬಸ್ಥರು ಸುಳ್ಯ ಠಾಣೆಗೆ ಆಗಮಿಸಿ ತಾಲೂಕು ದಂಡಾಧಿಕಾರಿಗಳಲ್ಲಿ ಕ್ಷಮೆಯಾಚನೆ ನಡೆಸಿದರು. ಮನೆಯವರು ಬರುವುದು ಬೇಡ ಕರೆ ಮಾಡಿದ ವ್ಯಕ್ತಿಯೇ ಬರಬೇಕು ಎಂದು ತಾಲೂಕು ದಂಢಾಧಿಕಾರಿಗಳು ಸೂಚಿಸಿದ ಮೇರೆಗೆ ಸುಳ್ಯ ಪೋಲಿಸ್ ಠಾಣಾಧಿಕಾರಿಗಳು ಧೀರಜ್ ರನ್ನು ಠಾಣೆಗೆ ಕರೆಸಿದ್ದರು. ಈ ಸಂದರ್ಭದಲ್ಲಿ ಈರ್ವರು ಅಧಿಕಾರಿಗಳು ನಿಂದಿಸಿದ ವ್ಯಕ್ತಿ ಮತ್ತು ಕುಟುಂಬಸ್ಥರ ಕೋರಿಕೆ ಮೇರೆಗೆ ಪ್ರಕರಣ ದಾಖಲಿಸದೇ ಶಾಂತಿಯುತವಾಗಿ ಇತ್ಯರ್ಥ ಪಡಿಸಿರುವುದಾಗಿ ತಿಳಿದು ಬಂದಿದೆ.
ತಾಲೂಕು ದಂಢಾಧಿಕಾರಿಗಳು ಈ ವಿಚಾರಕ್ಕೆ ಸಂಭವಿಸಿದಂತೆ ಮಾತನಾಡಿ ನನಗೆ ಯಾವುದೇ ಕರೆಗಳು ಬಂದಾಗ ಕರೆ ಸ್ವೀಕರಿಸದೇ ಇರುವ ಪಕ್ಷದಲ್ಲಿ ಮತ್ತೆ ಆ ನಂಬರ್ ಗಳಿಗೆ ಕಾಲ್ ಮಾಡುತ್ತೆನೆ. ಅಲ್ಲದೇ ಇಲ್ಲಿ ಎಲ್ಲಾ ರೀತಿಯಲ್ಲಿ ಪಾರದರ್ಶಕ ಆಡಳಿವನ್ನು ನಡೆಸುತ್ತಿದ್ದು ಇಂತಹ ಘಟನೆಗಳು ಆದಾಗ ಬಹಳ ನೋವಾಗುತ್ತದೆ. ಈ ಪ್ರಕರಣದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಕುಟುಂಬಸ್ಥರು ಮತ್ತು ಆರೋಪಿತರ ಕ್ಷಮಾಪಣೆ ಹಿನ್ನೆಲೆಯಲ್ಲಿ ಬಾಂಡ್ ಮೂಲಕ ಮುಚ್ಚಳಿಕೆ ಬರೆಸಿ ಇನ್ನು ಇಂತಹ ಯಾವುದೇ ರೀತಿಯ ತಪ್ಪುಗಳನ್ನು ಮಾಡುವುದಿಲ್ಲ ಎಂದು ಬರೆದು ಕೊಟ್ಟ ಬಳಿಕ ಪ್ರಕರಣವನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಹೇಳಿದರು . ಅಲ್ಲದೇ ಸಾರ್ವಜನಿಕರ ಕರೆಗಳು ಬಂದಾಗ ನಾವು ಸ್ವೀಕರಿಸುತ್ತೆವೆ ಹಾಗೆ ಅಂದ ಮಾತ್ರಕ್ಕೆ ಈ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಘಟನೆಯ ಮೂಲಕ ಮತ್ತೊಮ್ಮೆ ಸುಳ್ಯದ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಪ್ರಕರಣ ಸುಖಾಂತ್ಯಗೊಳಿಸಿ ಎಲ್ಲರ ಮೆಚ್ಚುಗೆಗೆ ಠಾಣಾಧಿಕಾರಿ ಈರಯ್ಯ ಮತ್ತು ತಾಲೂಕು ದಂಡಾಧಿಕಾರಿ ಜಿ ಮಂಜುನಾಥ್ ಪಾತ್ರರಾಗಿದ್ದಾರೆ.