Ad Widget

ಎಸ್‌ಎಸ್‌ಪಿಯುನ ದುರ್ಗಾಲಕ್ಷ್ಮಿಗೆ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 10 ಅಂಕ –  593 ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್ ಎಸ್‌ಪಿಯು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದುರ್ಗಾಲಕ್ಷ್ಜಿ‌ ಜಿ.ಸಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 593 ಅಂಕ ಪಡೆದು ರಾಜ್ಯಕ್ಕೆ 5 ಸ್ಥಾನ ಪಡೆದಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ಈಕೆಗೆ 583 ಅಂಕ ಬಂದಿತ್ತು.ಕಡಿಮೆ ಅಂಕ ಕಂಡು ಹೌಹಾರಿದ ಪ್ರತಿಭಾವಂತ ವಿದ್ಯಾರ್ಥಿನಿಯು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದರು. ಮರು ಮೌಲ್ಯಮಾಪನದಲ್ಲಿ ವಿದ್ಯಾಲಕ್ಷಿö್ಮಗೆ ಬರೋಬ್ಬರಿ 10 ಹೆಚ್ಚುವರಿ ಅಂಕ ಬಂದಿತ್ತು. ಅರ್ಥಶಾಸ್ತçದಲ್ಲಿ 8 ಅಂಕ ಮತ್ತು ವ್ಯವಹಾರ ಅಧ್ಯಾಯನದಲ್ಲಿ 2 ಅಂಕ ಪಡೆಯುವ ಮೂಲಕ 10 ಅಂಕ ಅಧಿಕ ಪಡೆದರು.
ಮೌಲ್ಯಮಾಪಕರ ಎಡವಟ್ಟಿನಿಂದ ಗ್ರಾಮೀಣ ಪ್ರತಿಭೆಗೆ 10 ಅಂಕಗಳು ಖೋತಾ ಆಗಿತ್ತು.ಆದರೆ ಇದೀಗ ಮರು ಮೌಲ್ಯಮಾಪದ ಬಳಿಕ ದುರ್ಗಾಲಕ್ಷಿö್ಮ 593 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಪಡೆದು ವಿದ್ಯಾಸಂಸ್ಥೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಈಕೆಯು ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಾಯನ,ಅರ್ಥಶಾಸ್ತ್ರಗಳಲ್ಲಿ 100ಕ್ಕೆ 100 ಅಂಕ ಪಡೆದರೆ, ಸಂಸ್ಕೃತ, ಗಣಕ ವಿಜ್ಞಾನಗಳಲ್ಲಿ 99 ಹಾಗೂ ಇಂಗ್ಲೀಷ್‌ನಲ್ಲಿ 95 ಅಂಕ ಪಡೆದಿದ್ದಾರೆ. ಮೌಲ್ಯಮಾಪಕರ ಇಂತಹ ಎಡವಟ್ಟುಗಳಿಗೆ ಶಿಕ್ಷಣ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಬೇಕಿದೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!