
ಬೈಕು ಹಾಗೂ ಕಾರು ನಡುವೆ ಭೀಕರ ಅಪಘಾತ ನಡೆದು ಹಿಂಬದಿ ಬೈಕ್ ಸವಾರ ಮೃತಪಟ್ಟ ಘಟನೆ ಕಲ್ಲುಗುಂಡಿ ಸಮೀಪದ ದೊಡ್ಡಡ್ಕದಲ್ಲಿ ಕಳೆದ ರಾತ್ರಿ ನಡೆದಿದೆ.
ಮತಹಾಕಲು ಬೆಂಗಳೂರಿನಿಂದ ಅರಂತೋಡಿಗೆ ಬರುತ್ತಿದ್ದ ಯುವಕ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಬೈಕ್ ರೈಡ್ ಮಾಡುತ್ತಿದ್ದ ಯುವಕ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ.
