- Tuesday
- December 3rd, 2024
ಸುಳ್ಯ: ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬಂದಿದ್ದು ಶುಕ್ರವಾರ ಬ್ರಹ್ಮಕಲಶೋತ್ಸವದ ಆರಂಭದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಮುಂದಿನ ಸರ್ವ ಕಾರ್ಯಗಳಿಗೆ ಯಾವುದೇ ವಿಘ್ನಗಳು ಬಾಧಿಸದಂತೆ ಕಾರ್ಯಕ್ರಮದ ಯಶಸ್ಸಿಗಾಗಿ ದೇವತಾ ಪ್ರಾರ್ಥನೆ...
ಐವರ್ನಾಡು ಗ್ರಾಮ ಬಾಂಜಿಕೋಡಿ ವಾರ್ಡ್ ಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅರ್ ಪೂಜಾರಿ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದರು.
ಸುಳ್ಯ ತಾಲೂಕಿನಾದ್ಯಂತ ಇಂದು ನಡೆದ ಲೋಕಸಭಾ ಸಭಾ ಚುನಾವಣೆ ಶಾಂತಿಯುತವಾಗಿ ನಡೆಯಿತು. ಸುಳ್ಯದಲ್ಲಿ ಶೇ. 83 ಮತದಾನವಾಗಿದೆ. ಮಹಿಳೆಯರು 87565 ಹಾಗೂ 85789 ಪುರುಷರು ಮತ ಚಲಾವಣೆ ಮಾಡಿದ್ದಾರೆ. ತಾಲೂಕಿನಲ್ಲಿ ಒಟ್ಟು 208853 ಮತದಾರರಿದ್ದು, 173354 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 83 ಫಲಿತಾಂಶ ಪ್ರಕಟವಾಗಿದೆ. ಮಹಿಳಾ ಮತದಾರರೇ ಹೆಚ್ಚು ಮತದಾನ ಮಾಡಿದ್ದಾರೆ.
ಸುಳ್ಯ ನಗರದ ದುಗ್ಗಲಡ್ಕ ಮತ್ತು ಕೊಯಿಕುಳಿ ಬೂತ್ ಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ವೀಕ್ಷಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ ಭೇಟಿ ನೀಡಿ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಬಾಳುಗೋಡು ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಶೈಲೇಶ್ ಕಟ್ಟೆಮನೆ, ಪಿ.ಸಿ ಜಯರಾಮ, ಚೇತನ್ ಕಜೆಗದ್ದೆ, ರಾಧಾಕೃಷ್ಣ ಕಟ್ಟೆಮನೆ ಮತ್ತಿತರರು ಉಪಸ್ಥಿತರಿದ್ದರು.
ಮಾವಿನಕಟ್ಟೆ 159 ನೇ ಬೂತ್ ನಲ್ಲಿ ನವ ವಧು ಪತಿಯೊಂದಿಗೆ ಆಗಮಿಸಿ ಮತದಾನ ಮಾಡಿದರು. ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಕೃಷ್ಣಪ್ಪ ಗೌಡರ ಪುತ್ರಿ ರಶ್ಮಿಯ ವಿವಾಹ ಇಂದು ವಳಲಂಬೆ ದೇವಸ್ಥಾನದಲ್ಲಿ ನಡೆದಿದ್ದು ನವ ವಧು ತನ್ನ ಪತಿ ಚೇತನ್ ಕುಮಾರ್ ಜತೆ ಮತದಾನ ಕೇಂದ್ರಕ್ಕೆ ಆಗಮಿಸಿ ತನ್ನ ಹಕ್ಕು ಚಲಾಯಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ...
ಅಜ್ಜಾವರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ರವಿರಾಜ್ ಕರ್ಲಪ್ಪಾಡಿ, ಯತೀಶ್ ಪಡ್ಡಂಬೈಲು, ಮನ್ಮಥ ಅಡ್ಪಂಗಾಯ, ರಮೇಶ್ ಮೇದಿನಡ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುಳ್ಯ : ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ದಕಜಿಪ ಅಜ್ಜಾವರ ಶಾಲೆಯಲ್ಲಿ ಕರ್ತವ್ಯ ನಿರತ ಬಿ ಎಲ್ ಒ ಶಿವಣ್ಣರನ್ನು ಸುಡು ಬಿಸಿನಲ್ಲಿ ಯಾವುದೇ ವ್ಯವಸ್ಥೆಗಳಿಲ್ಲದೆ ಕುಳ್ಳಿರಿಸಿದ ಘಟನೆ ಬಿಎಲ್ ಒ ಗಳ ನಡುವೆ ಚರ್ಚೆಯಾಗುತ್ತಿದ್ದಂತೆ ಎಚ್ಚೆತ್ತ 197 ಬೂತ್ ಅಜ್ಜಾವರ,100 ಮೀಟರ್ ದೂರ ಹೊರಗಡೆ BLO ನಿಲ್ಲಿಸಿದ ಚುನಾವಣಾ ಅಧಿಕಾರಿ ಗಳು ತಾಲೂಕು ಪಂಚಾಯತ್...
ಸುಳ್ಯ ಅಜ್ಜಾವರ ಗ್ರಾಮದ ಬಸವನಪಾದೆ ಎಂಬಲ್ಲಿ ಮನೋಹರ್ ಮತ್ತು ತಮ್ಮ ಪತ್ನಿ ಸಹಿತ ಮನೆಗೆ ತೆರಳುವ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಕಾಲಿಗೆ ಗಂಭೀರ ಗಾಯಗಳಾಗಿದೆ. ಈ ಹಿಂದಿನಿಂದಲೂ ರಸ್ತೆ ಕಾಮಗಾರಿ ಪೂರ್ಣ ಗೊಳಿಸಲು ಆಗ್ರಹಿಸುತಿದ್ದರೂ ಇಲಾಖೆಗಳು ಮಾತ್ರ ಯಾವುದೇ ರೀತಿಯಲ್ಲಿ ಕ್ರಮ ಜರುಗಿಸದೇ ಅಪಾಯಗಳು ಆಹ್ವಾನಿಸುತ್ತಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವರಕೊಲ್ಲಿ ಎಂಬಲ್ಲಿ ಕಾರು ಹಾಗೂ ದ್ವಿಚಕ್ರ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಿರುವ ಸಂದರ್ಭ ಎದುರಿನಿಂದ ಬಂದ ಬೈಕ್ ಕಾರಿಗೆ ಢಿಕ್ಕಿಯಾಗಿದೆ ಎಂದು ಕಾರಿನಲ್ಲಿದ್ದ ದೀಕ್ಷಿತ್ ಮಂಗಳೂರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಮಡಿಕೇರಿ ಮೂಲದ ಬೈಕ್ ಸವಾರ ಮಂಜುನಾಥ್ ಎಂಬುವವರು ಮೃತಪಟ್ಟ...
Loading posts...
All posts loaded
No more posts