- Thursday
- November 21st, 2024
ದೇಶದ ಹಿತಕ್ಕಾಗಿ ಮತದಾನ ಮಾಡಿರಿ, ಯೋಚಿಸಿ-ಆಲೋಚಿಸಿ ಮತವನ್ನು ನೀಡಿರಿ…“ನನ್ನೊಬ್ಬನ ಓಟಿನಿಂದ ಏನಾಗುತ್ತದೆ…?” ಅನ್ನದಿರಿ, ಪ್ರತಿಯೊಂದು ಮತವೂ ಕೂಡ ಮುಖ್ಯವಿಲ್ಲಿ ತಿಳಿಯಿರಿ, ಮತದಾನಕ್ಕೆ ಹೋಗಲು ಆಲಸ್ಯ ಮಾಡದಿರಿ…ಐದು ವಷಕ್ಕೊಮ್ಮೆ ನಮಗೆ ಸಿಗುವ ಅಧಿಕಾರ ಮರೆಯದಿರಿ, ಮರೆಯದೇ ಪ್ರತಿಯೊಬ್ಬರೂ ಮತದಾನ ಮಾಡಿರಿ…ನೋಟಿನಾಸೆಗಾಗಿ ನಿಮ್ಮ ಮತವನ್ನು ಮಾರದಿರಿ, ಯಾವುದೇ ಆಮಿಷಕ್ಕೆ ಬೀಳದೇ ಮತದಾನ ಮಾಡಿರಿ…ಜನಸೇವಕನಾಗಿ ದುಡಿಯೋ ಜನನಾಯಕನ ಆರಿಸಿರಿ, ಮತದಾನ...
ಲೋಕಸಭಾ ಚುನಾವಣೆಯ ಪ್ರಯುಕ್ತ ಕೊನೆಯ ದಿನವಾದ ಇಂದು ನಗರ ಬಿಜೆಪಿ ವತಿಯಿಂದ ಸುಳ್ಯದಲ್ಲಿ ಬೃಹತ್ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಮತಯಾಚನೆ ನಡೆಯಿತು. ಸುಳ್ಯ ಜ್ಯೋತಿ ಸರ್ಕಲ್ ನಿಂದ ಆರಂಭಗೊಂಡು ಗಾಂಧಿನಗರದ ಪೆಟ್ರೋಲ್ ಪಂಪು ಬಳಿ ತನಕ ರೋಡ್ ಶೋ ಸಾಗಿತು. ಈ ಸಂದರ್ಭದಲ್ಲಿ ಅಂಗಡಿಗಳಿಗೆ ಮನವಿ ಪತ್ರ ನೀಡುತ್ತಾ...
ಗುತ್ತಿಗಾರಿನ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಏ.24 ರಂದು ಶ್ರೀ ದೇವಿ ಕಲರ್ ವರ್ಲ್ಡ್ ಶುಭಾರಂಭಗೊಂಡಿತು.ಗುತ್ತಿಗಾರು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ದೀಪ ಬೆಳಗಿಸಿ ಅಂಗಡಿ ಉದ್ಘಾಟಿಸಿದರು. ಈ ಸಂದರ್ಭ ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಹೊಸೋಳಿಕೆ, ವಕೀಲರಾದ ಹರೀಶ್...
ಬಾವಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿಹೋಗಿತ್ತು. ನಿನ್ನೆ ಬೆಳಗ್ಗೆ ಇದ್ದಕ್ಕಿದ್ದಂತೆ ಬಾವಿಯಲ್ಲಿ ನೀರು ತುಂಬುತ್ತಿದ್ದು ರಿಂಗ್ ಅಳವಡಿಸಿದವರೆಗೂ ನೀರು ತುಂಬಿ ಒಳ ಭಾಗದಲ್ಲಿ ಮಣ್ಣು ಕುಸಿತವಾದ ಘಟನೆ ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ನಿವಾಸಿ ಆನಂದ ಎಂಬವರ ಮನೆಯಂಗಳದಲ್ಲಿ ನಡೆದಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿರುವ ದೃಶ್ಯ.ಮನೆಯ ಅಂಗಳದಲ್ಲಿ ಬಾವಿ ಇರುವುದರಿಂದ...
ಎಂಡಿಎಂಎಯನ್ನು ಕಳ್ಳ ಸಾಗಟಕ್ಕೆ ಯತ್ನಿಸಿದ ಇಬ್ಬರು ಸುಳ್ಯ ಮೂಲದ ಯುವಕರನ್ನು ಕೇರಳದಲ್ಲಿ ಬಂಧಿಸಲಾಗಿದೆ.ಯುವಕರು 100.22 ಗ್ರಾಂ ಎಂಡಿಎಂಎಯೊಂದಿಗೆ ಅಬಕಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ 1.5 ಲಕ್ಷ ರೂ.ಗೆ ಖರೀದಿಸಿದ್ದ ಎಂಡಿಎಂಎಯನ್ನು ಮಲಪ್ಪುರಂಗೆ ತಲುಪಿಸುವ ಗುರಿಯನ್ನು ಹೊಂದಿದ್ದರು. ಮಾನಂತವಾಡಿ ಅಬಕಾರಿ ವೃತ್ತ ನಿರೀಕ್ಷಕ ಎ ಪ್ರಜಿತ್ ನೇತೃತ್ವದ ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಿವಾಸಿಗಳಾದ...
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಯಾತ್ರಾರ್ಥಿಯೊಬ್ಬರು ಏ.22 ರಂದು ಬಸ್ ನಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೆಎ 19 ಎಫ್ 3149 ಕೆಎಸ್ಆರ್ಟಿಸಿ ಬಸ್ಸಿನಲ್ಲಿ ತೆರಳುತ್ತಿದ್ದಾಗ, ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ತಲುಪುವಾಗ, ಬಸ್ಸಿನ ಚಾಲಕನು ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಬಸ್ಸಿನ ನಿರ್ವಾಹಕರು ಬಸ್ಸಿನ...
ಸುಳ್ಯ: ಬಿಜೆಪಿ ಮಂಡಲ ಸಮಿತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಬಿಜೆಪಿ ಚೆಂಬು ಯಾರ ಕೈಗೆ ನೀಡಿಲ್ಲಾ ಕಾಂಗ್ರೆಸ್ ಕಾಲಿ ಚೆಂಬು ನೀಡಿದ್ದ ಮೋದಿ ನೇತೃತ್ವದ ಸರಕಾರ ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು. ಸುಳ್ಯದ ನಾಯಕರಿಗೆ ಕಟುವಾಗಿ ಟೀಕಿಸಿದ ನಾಯಕ. ಸುಳ್ಯದ ನಾಯಕ ಭರತ್ ಮುಂಡೋಡಿಯವರು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾಗಿ ಪಡೆದುಕೊಳ್ಳುತ್ತಿರುವುದನ್ನು ಬಹಿರಂಗ ಪಡಿಸಿ ಅಲ್ಲದೇ...
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರವಾಗಿ ಬಿಜೆಪಿ ಸುಳ್ಯ ನಗರ ವತಿಯಿಂದ ಮತಯಾಚನೆ ನಡೆಯಲಿದೆ. ಇಂದು ಅಪರಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯ ತನಕ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಲಿದ್ದಾರೆ. ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಯಾತ್ರೆಯು ಗಾಂಧಿನಗರ ಪೆಟ್ರೋಲ್ ಪಂಪ್ ನಲ್ಲಿ ಸಂಪನ್ನಗೊಳ್ಳಲಿದೆ.
ಗುತ್ತಿಗಾರಿನಲ್ಲಿ ಹಲವು ವರ್ಷ ವೈದ್ಯಕೀಯ ಸೇವೆ ನೀಡಿದ ಡಾ. ತಿರುಮಲೇಶ್ವರಯ್ಯ ಗಬ್ಲಡ್ಕ ಎ. 24ರಂದು ಸ್ವಗೃಹ ಗಬ್ಲಡ್ಕದಲ್ಲಿ ನಿಧನರಾದರು. ಅವರಿ 86 ವರ್ಷ ವಯಸ್ಸಾಗಿತ್ತು.ಅವರು ಗುತ್ತಿಗಾರಿನಲ್ಲಿ ಹಲವು ವರ್ಷಗಳಿಂದ ಆಯುರ್ವೇದ ಕ್ಲಿನಿಕ್ ಆರಂಭಿಸಿ ಸೇವೆ ನೀಡಿದ್ದರು.
Loading posts...
All posts loaded
No more posts