Ad Widget

ಸುಳ್ಯ ಕುಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದೇವೆ – ಎಸ್ ಅಂಗಾರ



ಟೀಕೆ ಮಾಡುವುದು ಮಾತ್ರ ಕಾಂಗ್ರೆಸ್ ಕೆಲಸ- ಅಂಗಾರ

ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರವು ಹಿಂದೆ ಕುಗ್ರಾಮವಾಗಿತ್ತು ಇದೀಗ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ಮಾಜಿ ಸಚಿವರಾದ ಎಸ್ ಅಂಗಾರ ಹೇಳಿದರು.

ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಸುಳ್ಯ ವಿಧಾನ ಸಭಾ ಕ್ಷೇತ್ರವು ಈ ಹಿಂದೆ ಬಹಳಷ್ಟು ಕುಗ್ರಾಮವಾಗಿತ್ತು ಆದರೆ ಇದೀಗ ಬಹಳಷ್ಟು ಅಭಿವೃದ್ಧಿ ಗೊಂಡಿದೆ ಎಂದು ಹೇಳಿದರು . ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 73 ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸಿ ಅಭ ಕುಂಟಿತತವಾಗಬಾರದು ಎಂಬ ನೆಲೆಯಲ್ಲಿ ಬಿಎಸ್ ವೈ ನೇತೃತ್ವದಲ್ಲಿ ಸೇರಿಸಿ ಇದೀಗ ಅಭಿವೃದ್ಧಿ ಗೊಂಡಿದೆ ಅಲ್ಲದೇ 148 ಮುಳುಗು ಸೇತುವೆಗಳನ್ನು ಕೂಡ ನಿರ್ಮಿಸಲಾಗಿದ್ದು ಇದೀಗ ಮುಳುಗದೆ ಜನರಿಗೆ ಸಹಕಾರಿ ಆಗಿದೆ ಅಲ್ಲದೇ ಕುಡಿಯುವ ನೀರಿಗಾಗಿ ಬಹಳಷ್ಟು ಕಡೆಗಳಲ್ಲಿ ಡ್ಯಾಂಗಳ ನಿರ್ಮಾಣ ಮಾಡಿಕೊಡಲಾಗಿದೆ. ಅಲ್ಲದೇ  ಇದೀಗ ಪೈಪ್ ಲೈನ್ ಮತ್ತು ಟ್ಯಾಂಕ್ ಗಳ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು . ಸುಳ್ಯದ ಕುಡಿಯುವ ನೀರಿನ ಕಾಮಗಾರಿಯಲ್ಲಿ ಕಾಂಗ್ರೆಸ್ ಸಣ್ಣತನದ ರಾಜಕೀಯ ಸರಿಯಲ್ಲ ಸಣ್ಣತನ ಮಾಡಲು ಹೊದರೆ ಅದು ನಿಮಗೆ ಮುಳುವಾಗಲಿದೆ ಎಂದು ಅವರು ಹೇಳಿದರು. ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಈ ಹಿಂದಿನ ಲಿಡ್ ಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಕಾಣಲಿದ್ದಾರೆ ಎಂದು ಹೇಳಿದರು, ಅಲ್ಲದೇ ಹೊಸ ಬಂದರುಗಳ ನಿರ್ಮಾಣ ಮಾಡಬೇಕು ಎಂಬ ಯೋಜನೆ ಇತ್ತು ಅದೇ ರೀತಿಯಲ್ಲಿ ಹೊಸ ಬಂದರು ಮಾಡಲು ಎಲ್ಲಾ ಕ್ರಮ ಕೈಗೊಂಡಿದ್ದೆವೆ ಎಂದರು. ರಾಜ್ಯ ಸರಕಾರದ ಬೇಡಿಕೆಗಳು ಸಲ್ಲಿಸಿದಾಗ ಕೇಂದ್ರ ಸರಕಾರ ನೀಡುತ್ತಿದೆ ಎಂದು ಹೇಳಿದರು. ಅಲ್ಲದೇ ಕಾಂಗ್ರೆಸ್ ಬರೇ ಟೀಕೆ ಮಾಡುವುದರಲ್ಲೆ ಕಾಲ ಕಳೆಯುತ್ತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ , ಜಗನ್ನಾಥ ಜಯನಗರ , ಲತೀಶ್ ಗುಂಡ್ಯ , ಪ್ರದೀಪ್ ಕೊಲ್ಲರಮೂಲೆ , ಶ್ರೀಕಾಂತ್ ಮಾವಿನಕಟ್ಟೆ , ನಿಖಿಲ್ ಐವರ್ನಾಡು , ಸುನಿಲ್ ಕೇರ್ಪಳ್ಳ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading