ಸೌಜನ್ಯ ಪರ ನ್ಯಾಯಕ್ಕಾಗಿ ಹೋರಾಟ ಮಾಡಿದ್ದು ಯುವ ಮೋರ್ಚಾ ಮತ್ತು ಎಬಿವಿಪಿ – ಶ್ರೀಕಾಂತ್ ಮಾವಿನಕಟ್ಟೆ;
ಸುಳ್ಯ:ಹುಬ್ಬಳಿಯಲ್ಲಿ ಕಾಲೇಜು ಆವರಣದಲ್ಲಿ ನೇಹಾ ಎಂಬ ವಿದ್ಯಾರ್ಥಿನಿಯ ಹತ್ಯೆ ಜಿಹಾದಿ ಕೃತ್ಯವಾಗಿದ್ದು ಇದನ್ನು ಬಿಜೆಪಿ ಯುವ ಮೋರ್ಚಾ ಖಂಡಿಸುವುದಲ್ಲದೆ, ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಹೇಳಿದರು.
“ಹಾಡಹಗಲೇ ಈ ರೀತಿಯ ಕೊಲೆಗಳು ನಡೆಯುವುದು ನೋಡುವಾಗ ಭಯದ ವಾತಾವರಣದಲ್ಲಿ ಬದುಕುವುದು ಹೇಗೆ ಎಂಬ ಸ್ಥಿತಿ ಇದೆ. ಅಲ್ಲದೇ ಈ ಕೃತ್ಯವನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಣ್ಣ ವಿಷಯ ಎಂದು ಹೇಳುತ್ತಾರೆ ಅವರ ಈ ರೀತಿಯ ಹೇಳಿಕೆಯನ್ನೂ ಖಂಡಿಸುವುದಾಗಿ ಹೇಳಿದರು.
ಸೌಜನ್ಯ ಹತ್ಯೆಯ ಬಗ್ಗೆ ನೋವಿದೆ ಆ ಘಟನೆ ನಡೆದ ಸಂದರ್ಭ ಪ್ರತಿಭಟನೆ ನಡೆಸಿದ್ದು ಎ.ಬಿ.ವಿ.ಪಿ. ಮತ್ತು ಯುವ ಮೋರ್ಚಾ ಎಂದು ನೋಟಾ ಅಭಿಯಾನ ಕೈಗೊಂಡವರು ನೆನಪಿಸಿಕೊಳ್ಳಬೇಕು ಎಂದರು.
ಇದು ಚುನಾವಣಾ ಸಮಯ ಮುಂದೆ ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದು ಹೇಳಿದ ಅವರು, ನೋಟಾ ಅಭಿಯಾನ ಬಿಜೆಪಿ ಮತ ಬೇರ್ಪಡಿಸುವ ಷಡ್ಯಂತ್ರ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಅಡಿಕೆ ಎಲೆ ಹಳದಿ ರೋಗ ಈ ಭಾಗದ ದೊಡ್ಡ ಸಮಸ್ಯೆ. ಅದರ ಶಾಶ್ವತ ಪರಿಹಾರಕ್ಕೆ ನಮ್ಮ ಅಭ್ಯರ್ಥಿ ಬ್ರಿಜೇಶ್ ಚೌಟರು ಪ್ರಯತ್ನ ಪಡುತ್ತಾರೆ ಎಂದು ಅವರು ಹೇಳಿದರು.
ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಲತೀಶ್ ಗುಂಡ್ಯ ಮಾತನಾಡಿ, ಹುಬ್ಬಳ್ಳಿ ಘಟನೆ ಹಾಗೂ ಬೆಂಗಳೂರು ಘಟನೆಯನ್ನು ಖಂಡಿಸಿದರು.
ಯುವ ಮೋರ್ಚಾ ಪದಾಧಿಕಾರಿಗಳಾದ ಪ್ರದೀಪ್ ಕೊಲ್ಲರಮೂಲೆ, ಅಭಿಷೇಕ್ ತೊಡಿಕಾನ, ಸುನಿಲ್ ಕೇರ್ಪಳ, ಜಗದೀಶ್ ಜಯನಗರ, ರಾಜೇಶ್ ಕಿರಿಭಾಗ, ನಿಕೇಶ್ ಉಬರಡ್ಕ, ಕೌಶಲ್ ಸುಳ್ಯ, ನಿಖಿಲ್ ಐವರ್ನಾಡು ಮೊದಲಾದವರು ಇದ್ದರು.