ಕೇಂದ್ರದಲ್ಲಿ ನರೇಂದ್ರ ಮೋದಿಯವರ ಆಡಳಿತವನ್ನು ಕಂಡು ಮೋದಿ ಅಲೆ ಎಲ್ಲೆಡೆ ಇದ್ದು ಈ ಬಾರಿಯು ಕೇಂದ್ರದಲ್ಲಿ 400 ಸ್ಥಾನಗಳನ್ನು ಪಡೆದು ಸರಕಾರ ರಚಿಸಲಿದೆ. ಅಲ್ಲದೇ ಸುಳ್ಯದಲ್ಲಿ ಅತೀ ಹೆಚ್ಚು ಲೀಡ್ ಬಿಜೆಪಿಗೆ ಸಿಗಲಿದೆ ಎಂದು ಚುನಾವಣಾ ಪ್ರಚಾರ ಕಾರ್ಯನಿರ್ವಹಣ ಸಮಿತಿ ಸಂಚಾಲಕರಾದ ಹರೀಶ್ ಕಂಜಿಪಿಲಿ ಹೇಳಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸುಳ್ಯದಲ್ಲಿ ಈ ಹಿಂದೆ ವಿಧಾನ ಸಭಾ ಚುನಾವಣೆಯಲ್ಲಿ 45 ಸಾವಿರ ಮತಗಳ ಲೀಡ್ ನೀಡಿದ್ದು ಈ ಚುನಾವಣೆಯಲ್ಲಿ 60 ಸಾವಿರಕ್ಕೂ ಅಧಿಕ ಲೀಡ್ ಪಡೆಯಲಿದೆ ಎಂದು ಹೇಳಿದರು. ಬಿಜೆಪಿಯು ಜನಪರ ಆಡಳಿತ ನೀಡಿದ್ದು ಹುಬ್ಬಳ್ಳಿಯಲ್ಲಿನ ಘಟನೆಯ ಕುರಿತಾಗಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಹೇಳಿಕೆಗಳು ಕಂಡಾಗ ಮೃತ ಯುವತಿಗೆ ಮಾಡಿದ ಅವಮಾನ ಎಂದು ಹೇಳಿದರು.
ಎ.21 ರಂದು ಸುಳ್ಯ ತಾಲೂಕಿನಾದ್ಯಾಂತ ಮಿಂಚಿನ ಪ್ರಚಾರ ೧೦ ಸಾವಿರ ಕಾರ್ಯಕರ್ತರ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು .
ಜಿಲ್ಲಾ ಉಪಾಧ್ಯಕ್ಷರಾದ ರಾಜೇಶ್ ರೈ ಕೆಡೆಂಜಿ ಮತನಾಡುತ್ತಾ ಇದೀಗ ಕಾಂಗ್ರೆಸ್ ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಹೊರಟಿದ್ದು ಬಿಲ್ಲವ ಎಂಬುವುದನ್ನು ಹಿಡಿಕೊಂಡು ತಿರುಗುತ್ತಿದೆ. ಆದರೆ ಬಿಜೆಪಿ ಅಧಿಕಾರ ಅವಧಿಯಲ್ಲಿ ನಾರಾಯಣ ಗುರು ನಿಗಮ ಸೇರಿದಂತೆ ನಾರಾಯಣ ಗುರುಗಳ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳು ಮತ್ತು ಪುತ್ಥಳಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು. ನೋಟ ಅಭಿಯಾನವು ಕು.ಸೌಜನ್ಯ ನ್ಯಾಯಕ್ಕಾಗಿ ಮಾಡದೇ ಇದೀಗ ಕೇವಲ ಬಿಜೆಪಿಯನ್ನೆ ಗುರಿಯಾಗಿಸಿ ಬಿಜೆಪಿ ಕಾರ್ಯಕರ್ತರಿಗೆ ಕರೆ ಮಾಡಿ ನೋಟ ಹಾಕುವಂತೆ ಹೇಳುತ್ತಿದ್ದಾರೆ. ಹಾಗಿದ್ದರೆ ತಿಮರೋಡಿರವರು ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು . ಸೌಜನ್ಯ ಪ್ರಕರಣ ನಡೆದ ಸಂದರ್ಭದಲ್ಲಿ ವಸಂತ ಬಂಗೇರರು ಶಾಸಕರಾಗಿದ್ದು ಅವರು ಒಂದು ವೇದಿಕೆಯಲ್ಲಿ ಸಾಕ್ಷಿಗಳು ಇವೆ ಹೇಳಿದರೆ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಯಾಕೆ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ನೀಡುತ್ತಿಲ್ಲ ಮತ್ತು ಭದ್ರತೆಯನ್ನು ಸರಕಾರದಿಂದ ಪಡೆಯುತ್ತಿಲ್ಲ. ಸಾಕ್ಷಿ ಒದಗಿಸದೇ ಸೌಜನ್ಯಳಿಗೆ ಅನ್ಯಾಯ ಮಾಡುತ್ತಿರುವುದು ಇವರಲ್ಲವೇ. ತಿಮರೋಡಿ ಅವರ ಮನೆಗೆ ತೆರಳಿ ಬಂಗೇರರ ಮನವೋಲಿಸಿ ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸಬಹುದಲ್ಲವೇ ಎಂದು ಹೇಳಿದರು. ಬಿರುವೆರ್ ಕುಡ್ಲದ ನಾಯಕರ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಾ ಈ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದಾರೆ.ಆದರೆ ಅದರ ನಾಯಕ ಸಂಘಟಕ ಸಮಾಜ ಸೇವಕರಾದ ಉದಯ ಕುಮಾರ್ ರವರನ್ನು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಆಹ್ವಾನಿಸಲು ಸಾಧ್ಯವಾಗಿಲ್ಲ. ಕಾರಣ ಎಂದರೆ ಭದ್ರತೆ ಮತ್ತು ಮೋದಿಯವರ ಸಮಯಗಳ ಬದಲಾವಣೆ ಆದ ಹಿನ್ನಲೆಯಲ್ಲಿ ಆಗಿದೆ. ಆದರೆ ಅವರನ್ನು ಹಿರಿಯರು ಈ ಹಿಂದಿನಿಂದಲೂ ಮಾತನಾಡಿಸುತ್ತಿದ್ದು ಈಗಲು ಅದೇ ರೀತಿಯಲ್ಲಿ ಅವರ ಜೊತೆಗೆ ಮಾತನಾಡುತ್ತೇವೆ ಎಂದರು. ಸತ್ಯಜಿತ್ ಸುರತ್ಕಲ್ ರವರು ಈ ಹಿಂದಿನಿಂದಲೂ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದು ಅವರಿಗೆ ಸಿಗದಿರುವ ಹಿನ್ನಲೆಯಲ್ಲಿ ಇದೀಗ ಹಿಂದುಗಳ ಮತಗಳನ್ನು ಒಡೆಯಲು ಬಿಲ್ಲವ ಅಸ್ತ್ರದೊಂದಿಗೆ ಹೋಗುತ್ತಿದ್ದಾರೆ ಇವರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಮಾತ್ರ ಮೀಟಿಂಗ್ ಮಾಡುತ್ತಿದ್ದಾರೆ. ಕೋಟರಿಗೂ ಬೆಂಬಲ ಎಂದು ಹೇಳಿದ ಇವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಂದೇ ಒಂದು ಸಭೆಗಳನ್ನು ಆಯೋಜಿಸಿಲ್ಲಾ. ಇದು ಇಬ್ಬಗೆಯ ನೀತಿಯೆಂದು ತಿಳಿಯುತ್ತಿಲ್ಲವೇ ಎಂದು ಹೇಳಿದರು. ಇದೀಗ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾಂಗ್ರೆಸ್ ಪಕ್ಷದ ಓರ್ವ ನಾಯಕನ ಪುತ್ರಿಯ ಹತ್ಯೆಗೈದಾಗ ಅದನ್ನು ಪ್ರೀತಿ ಎಂದು ಹೇಳಿ ಮೃತಪಟ್ಟ ಯುವತಿಗೆ ಅವಮಾನ ಮಾಡುವುದು ಸರಿಯಲ್ಲಾ ಕಾಂಗ್ರೆಸ್ ನಲ್ಲಿ ಇರುವ ಹಿಂದುಗಳು ಯೋಚಿಸಬೇಕಾದ ಸಂದರ್ಭ ಬಂದಿದೆ. ಅಲ್ಲದೇ ಮೃತ ಯುವತಿಯ ತಂದೆಯು ಕೇಂದ್ರ ಸಚಿವರಾದ ಜೋಷಿ ಬಳಿಯಲ್ಲಿ ನೀವೆ ನನ್ನ ಮಗಳಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದ್ದು ಕಂಡಾಗ ಕಾಂಗ್ರೆಸ್ ನೇತೃತ್ವದ ಸರಕಾರ ಯಾವ ರೀತಿಯಲ್ಲಿ ಇದೆ ಎಂಬುವುದು ತಿಳಿಯುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಹಿಂದುಗಳೇ ಒಮ್ಮೆ ಯೋಚಿಸಿ ಕಾಂಗ್ರೆಸ್ ಗೆ ಮತ ನೀಡಿದರೆ ಮುಂದೆ ಯಾವ ರೀತಿಯಲ್ಲಿ ಇಲ್ಲಿ ಅರಾಜಕತೆ ಸೃಷ್ಟಿಯಾಗಬಹುದು ಎಂಬುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್ ಎನ್ ಮನ್ಮಥ , ವೆಂಕಟ್ ದಂಬೆಕೋಡಿ , ವಿನಯ ಕುಮಾರ್ ಕಂದಡ್ಕ , ದಿನೇಶ್ ಮೆದು, ಸುಭೋದ್ ಶೆಟ್ಟಿ ಮೇನಾಲ ಉಪಸ್ಥಿತರಿದ್ದರು.