ಒಂದು ಲಕ್ಷ ನೀಡುವ ಆಮಿಷ ಒಡ್ಡಿ ಬಳಿಕ ಬಿಪಿಎಲ್ ಪಟ್ಟಿಯಿಂದ ಬಡಜನರನ್ನು ಹೊರ ಹಾಕುವ ಹುನ್ನಾರ, ಮತದಾರರೆ ಎಚ್ಚರವಾಗಿರಿ- ವಿನಯ ಕುಮಾರ್ ಕಂದಡ್ಕ.
ಸುಳ್ಯ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಇಲ್ಲಿಯ ತನಕ ಯಾವುದೇ ರೀತಿಯ ಭ್ರಷ್ಟಾಚಾರ ಮಾಡದೇ ಸ್ವಚ್ಛವಾಗಿ ಆಡಳಿತ Preferably ಬಂದಿದ್ದು ರಾಜ್ಯದಲ್ಲಿ ಇದೀಗ ಸರಕಾರ ಬಿಟ್ಟಿ ಭಾಗ್ಯಗಳಿಂದ ದಿವಾಳಿಯಾಗುವಲ್ಲಿಗೆ ಸಾಗುತ್ತಿದೆ ಎಂದು ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ ಹೇಳಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವಿಕಸಿತ ಭಾರತ ನಿರ್ಮಾಣಕ್ಕಾಗಿ ಈ ಭಾರಿಯ ಚುನಾವಣೆ ನಡೆಯಲಿದೆ. ಅಲ್ಲದೇ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ಬಿಟ್ಟಿ ಬಾಗ್ಯಗಳಿಂದಾಗಿ ಇದೀಗ ಸರಕಾರಿ ನೌಕರರಿಗೆ ವೇತನ ಪಾವತಿಸಲು ಅಸಾಧ್ಯವಾಗಿರುವಲ್ಲಿಗೆ ತಲುಪಿರುವುದು ಕಾಣಬಹುದಾಗಿದೆ. ಅಲ್ಲದೇ ಈ ಹಿಂದಿನ ಬಿಜೆಪಿ ಸರಕಾರ ವೈಧ್ಯಕೀಯ ಕ್ಷೇತ್ರದಲ್ಲಿ ಅತೀ ಹೆಚ್ಚು ಹಣವನ್ನು ನೀಡಿ ಮಾತ್ರೆಗಳು ಮತ್ತು ಇತರೆ ಔಷದಿಗಳು ಸಿಗುಂತೆ ಮಾಡಿದ್ದೆವು ಆದರೆ ಇಂದು ಇವುಗಳು ಯಾವುದು ಸಾಮಾನ್ಯ ಜನರಿಗೆ ಸಿಗದೇ ಒಂದು ವಾರ ಕಳೆದು ಬನ್ನಿ ಎಂದು ಹೇಳುವಲ್ಲಿಯರೆಗೆ ತಲುಪಿದೆ ಎಂದು ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದರು. ನರೇಂದ್ರ ಮೋದಿ ನೇತೃತ್ವದ ಸರಕಾರವು ಪ್ರತಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ೫ ಕೆಜಿ ಅಕ್ಕಿಗಳನ್ನು ನೀಡುತ್ತಿದೆ ರಾಜ್ಯ ಸರಕಾರ ಹೇಳಿದ ೧೦ ಕೆಜಿ ಅಕ್ಕಿ ಎಲ್ಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು . ಜಿಲ್ಲೆಯು ಬಿಜೆಪಿ ಅಧಿಕಾರದಲ್ಲಿದ್ದರೆ ಕೊಲೆ ಪಾತಕಿಗಳು ಮತ್ತು ಸಮಾಜದ್ರೋಹ ಕೆಲಸ ಮಾಡುವವರಿಗೆ ಕಾನೂನಿನ ಭಯವನ್ನು ಮತ್ತು ತಪ್ಪು ಮಾಡಿದವರನ್ನು ರಕ್ಷಣೆ ಮಾಡುವ ಕೆಲಸಗಳನ್ನು ಮಾಡುತ್ತಿರಲಿಲ್ಲಾ ಹಾಗಾಗಿ ಸಮಾಜ ದ್ರೋಹಿಗಳಿಗೆ ಭಯವಿತ್ತು, ಇದೀಗ ಕಾಂಗ್ರೆಸ್ ಸರಕಾರ ಬಂದ ಬಳಿಕ ಅವರಿಗೆ ಕಾನೂನಿನ ಮೇಲೆ ಯಾವುದೇ ತರಹದ ಭಯದ ವಾತಾವರಣ ಕಾಣಸಿಗುವುದಿಲ್ಲಾ ಅವರಿಗೆ ಬೆಂಬಲವನ್ನು ಕಾಂಗ್ರೆಸ್ ನೀಡುತ್ತಿದೆ ಎಂದು ಹುಬ್ಬಳ್ಳಿ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸುತ್ತಾ ಹೇಳಿದರು.
ಎ.21ರಂದು ಕ್ಷೇತ್ರಾದ್ಯಂತ ಬಿಜೆಪಿ ಮಹಾ ಸಂಪರ್ಕ ಅಭಿಯಾನ – ವಳಲಂಬೆ.
ಲೋಕಸಭಾ ಚುನಾವಣೆಗೆ ಬಿಜೆಪಿ ಸುಳ್ಯ ಕ್ಷೇತ್ರದಲ್ಲಿ 233 ಬೂತ್ ಗಳಲ್ಲಿ 2 ಸುತ್ತಿನ ಮನೆ ಮನೆ ಭೇಟಿ ನಡೆಸಿ ಮತದಾರರನ್ನು ತಲುಪುವ ಕೆಲಸ ಪಕ್ಷದ ಕಡೆಯಿಂದ ಆಗಿದೆ. ಎ.21ರಂದು ಕ್ಷೇತ್ರಾದ್ಯಂತ ಮಹಾ ಸಂಪರ್ಕ ಅಭಿಯಾನ ನಡೆಸುವ ಮೂಲಕ ಮೂರನೇ ಸಲವೂ ಮತದಾರರನ್ನು ಭೇಟಿಯಾಗಿ ಕೇಂದ್ರ ಸರಕಾರದ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಿವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.
ಸೌಜನ್ಯ ಪ್ರಕರಣ ನಮಗೂ ನೋವಿದೆ : ಬಿಜೆಪಿ ಮತ ಬೇರ್ಪಡಿಸಲು ನೋಟಾ ಅಭಿಯಾನ ಹಮ್ಮಿಕೊಂಡ ಸಂಘಟಕರು – ಬಿಜೆಪಿ ಮಂಡಲ ಸುಳ್ಯ.
ಸೌಜನ್ಯ ಹತ್ಯೆಗೆ ನ್ಯಾಯ ಸಿಕ್ಕಿಲ್ಲ ಎನ್ನುವುದು ನಮಗು ನೋವಿದೆ ಅಲ್ಲದೇ ಈ ಹೋರಾಟದಲ್ಲಿ ನಮ್ಮ ಕಾರ್ಯಕರ್ತರು ಭಾಗವಹಿಸಿದ್ದಾರೆ ಅವರ ಕುಟುಂಬದ ಜತೆ ನಾವು ಎಂದಿಗೂ ಇದ್ದೆವೆ ಅಲ್ಲದೆ ಇದಕ್ಕೆ ನೋಟಾ ಅಭಿಯಾನ ಸೂಕ್ತ ಪರಿಹಾರ ಅಲ್ಲ ಇದು ಬಿಜೆಪಿ ಮತವನ್ನು ಬೇರ್ಪಡಿಸುವ ನಿಟ್ಟಿನಲ್ಲಿ ಅಭಿಯಾನ ನಡೆಯುತ್ತಿರುವುದು ನಮಗೆ ಗೊತ್ತಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಬಿಜೆಪಿ ನಾಯಕರು ಉತ್ತರಿಸಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಮತನಾಡುತ್ತಾ ಪ್ರವೀಣ್ ಪೂಜಾರಿ ಹತ್ಯೆಯನ್ನು ಮಾಡಿದ ಎಸ್ ಡಿ ಪಿ ಐ ಜೊತೆಗೆ ನಿಂತಿರುವ ಕಾಂಗ್ರೆಸ್ ಇದೀಗ ಜಾತಿ ಜಾತಿ ಎಂದು ಹೇಳುತ್ತಿದ್ದು ಜಾತಿಗಳ ಮಧ್ಯೆ ವಿಷ ಬೀಜವನ್ನು ಬಿತ್ತುತ್ತಿದೆ ಹಾಗಿದ್ದರೆ ಎಸ್ ಡಿ ಪಿ ಐ ಜೊತೆ ಯಾವ ಕಾರಣಕ್ಕೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಪದ್ಮರಾಜ್ ಉತ್ತರಿಸಬೇಕು ಎಂದು ಆಗ್ರಹಿಸಿದರು. ಇದೀಗ ಕಾಂಗ್ರೆಸ್ ಮನೆ ಮನೆಗೆ ತೆರಳಿ ಆಧಾರ್ ನಂಬರ್ ಪಡೆದು ನಿಮಗೆ ಮತ ಚಲಾವಣೆ ಮಾಡಿದ ಬಳಿಕ ೧ ಲಕ್ಷ ರೂಪಾಯಿಗಳ ಸಂಭಂದಿಸಿದ ಮೆಸೆಜ್ ಗಳು ಬರಲಿದೆ ಎಂದು ಸುಳ್ಳು ಹಬ್ಬಿಸುತ್ತಿದ್ದು ಇದು ಆಮಿಷ ಒಡ್ಡುವ ಕಾರ್ಯವಾಗಿದೆ ಇದನ್ನು ಮುಂದುವರೆಸಿದರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು. ಅಲ್ಲದೇ ಒಂದು ಲಕ್ಷವನ್ನು ಗೃಹಿಣಿಯರಿಗೆ ನೀಡುವುದಾಗಿ ಹೇಳಿದ್ದರು ಆದರೆ ಇದರ ಪ್ರಕಾರ ಒಂದು ಲಕ್ಷ ನೀಡಿದ ಬಳಿಕ ಅವರನ್ನು ಬಿಪಿಎಲ್ ಪಟ್ಟಿಯಿಂದ ಹೊರ ಹಾಕುವ ಉದ್ದೇಶದ ಮೂಲಕ ಮತ್ತೆ ಯಾವುದೇ ಸೌಲಭ್ಯಗಳು ದೊರೆಯದಂತೆ ಮಾಡುವ ಹುನ್ನಾರ ಮತ್ತು ಜನತೆಗೆ ಮಾಡುವ ದ್ರೋಹ ವಾ್ಲವೇ ಎಂದು ಪ್ರಶ್ನಿಸಿದರು. ಚುನಾವಣಾ ಬಾಂಡ್ ಪಾರದರ್ಶಕವಾಗಿ ಮಾಡಿದ್ದು ಇದರ ಮೂಲಕ ರಾಜಕೀಯ ಪಕ್ಷಗಳ ಖಾತೆಗಳ ಕುರಿತಾಗಿ ಮಾಹಿತಿ ಲಭ್ಯವಿದೆ ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುಭೋದ್ ಶೆಟ್ಟಿ ,ರವೀಂದ್ರ ಪುಳಿತೊಟ್ಟು ಶಿವಪ್ರಸಾದ್ ನಡುತೋಟ
ಅಪ್ಪಯ್ಯ ಮಣಿಯಾಣಿ , ಹೇಮಂತ್ , ಎ ಟಿ ಕುಸುಮಾಧರ , ಸುದರ್ಶನ ಪಾತಿಕಲ್ಲು , ಪ್ರದೀಪ್ ರೈ , ಚಂದ್ರಜಿತ್ , ಪ್ರದೀಪ್ ಕೊಲ್ಲರಮೂಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.