ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ(ರಿ) ಸುಳ್ಯ ಇಲ್ಲಿ ಏ.೧೩ರಿಂದ ಸಂಸ್ಕಾರ ವಾಹಿಣಿ ಶಿಬಿರ ಪ್ರಾರಂಭವಾಗಿದ್ದು, ಇದರ ಎರಡನೆ ದಿನವಾದ ಇಂದು ವಿಷು ಹಬ್ಬದ ಆಚರಣೆಯನ್ನು ಮಾಡಲಾಯಿತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಎಸ್.ಬಿ. ಮೆಡಿಕಲ್ ಲ್ಯಾಬ್‌ನ ಮುಖ್ಯಸ್ಥರಾದ ಬಾಲಕೃಷ್ಣರವರು ದೀಪವನ್ನು ಪ್ರಜ್ವಲಿಸಿ, ಸೇರಿಗೆ ಅಕ್ಕಿ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಸಂಸ್ಕಾರ ಶಿಕ್ಷಣದ ಅರಿವು ಇದ್ದರೆ ಮಾತ್ರ ಪೀಳಿಗೆಯ ಅಭಿವೃದ್ಧಿ ಸಾಧ್ಯ ಮತ್ತು ಹಿರಿಯರು ನಡೆಸಿಕೊಂಡು ಬಂದ ವಿಷು ಆಚರಣೆಯ ಮಹತ್ವ ಹಾಗೂ ಅದರ ಹಿಂದಿನ ಪೌರಾಣಿಕ ಐತಿಹ್ಯವನ್ನು ತಿಳಿಸಿದರು.
ವೇದಿಕೆಯಲ್ಲಿ ಪುರೋಹಿತ ನಾಗರಾಜ್ ಭಟ್, ಶ್ರೀದೇವಿ ನಾಗರಾಜ್ ಭಟ್, ಸುಮಲತಾ ಶಾಂತಿನಗರ, ಜಯಶ್ರೀ ವಸಂತ್, ಪದ್ಮಿನಿ ಲೋಕೆಶ್, ವೀಣಾ ರೈ, ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ನಮಿತಾ ರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಬಿರಾರ್ಥಿ ಮಿಥಾಲಿ ಸ್ವಾಗತಿಸಿ, ಶಿಬಿರಾರ್ಥಿ ವಿಷ್ಣುಪ್ರಿಯ ವಂದಿಸಿದರು.
- Thursday
- November 21st, 2024