ಮಂಡೆಕೋಲು ಗ್ರಾ. ಪಂ. ಗ್ರಂಥಾಲಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಏ.15ರಂದು ನಡೆಯಿತು. ಕಾರ್ಯಕ್ರಮವನ್ನು ರಾಮಚಂದ್ರ ಪಲ್ಲತಡ್ಕ ರವರು ದೀಪಪ್ರಜ್ವಲನೆಯೊಂದಿಗೆ ಉದ್ಟಾಟಿಸಿದರು.
ಪಿಡಿಓ ರಮೇಶ್ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಅಮರಮಡ್ನೂರು ಶಾಲೆಯ ಮುಖ್ಯೋಪಾಧ್ಯಯಿನಿ ಶ್ರೀಮತಿ ರೂಪವಾಣಿ ಭಾಗವಹಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಕೆ.ಪಿ.ಎಸ್ ಬೆಳ್ಳಾರೆಯ ವಿದ್ಯಾರ್ಥಿ ಡಿಂಪಲ್ ಗ್ರಂಥಾಲಯ ಹಾಗೂ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ನೆರವೇರಿಸಿದರು. ತಶ್ವಿತ್ ಕನ್ಯಾನ ಧನ್ಯವಾದ ಸಮರ್ಪಣೆ ಮಾಡಿದರು. ಮೊದಲ ದಿನವೇ ಸುಮಾರು 32ಜನ ಮಕ್ಕಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದಾರೆ.