ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿ ಕಾರ್ಯಕರ್ತರ ವಿರೋಧದ ನಡುವೆ ಅಪ್ಪ ಮಕ್ಕಳಿಗಾಗಿ ಆಗಿದೆ – ಇಕ್ಬಾಲ್
ಸುಳ್ಯ: ಸುಳ್ಯ ಮುಸ್ಲಿಂ ಜೆಡಿಎಸ್ ಮುಖಂಡರು ಮತ್ತು ಸಮಾನ ಮನಸ್ಕ ಅಲ್ಪಸಂಖ್ಯಾತ ಮುಖಂಡರು ತಮ್ಮ ನಿರ್ಧಾರವನ್ನು ಇಕ್ಬಾಲ್ ಎಲಿಮಲೆ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸುಳ್ಯ ತಾಲೂಕಿನ ಜನತಾದಳ ಪಕ್ಷದಲ್ಲಿ ಪಕ್ಷದ ರಾಜ್ಯ ಸಮಿತಿ ಜಿಲ್ಲಾ ಸಮಿತಿ ತಾಲೂಕು ಸಮಿತಿಯ ಪದಾಧಿಕಾರಿಗಳಾಗಿ ಸುಮಾರು 40 ವರುಷಗಳಿಂದ ಪಕ್ಷದಲ್ಲಿ ಜಾತ್ಯಾತೀತ ತಮ್ಮ ಸಿದ್ಧಾಂತ ಸಾಮಾಜಿಕ ನ್ಯಾಯದ ನಿಲುವಿಗೆ ಬದ್ಧರಾಗಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುತ್ತೇವೆ. ಪ್ರಕೃತ ಪಕ್ಷದ ರಾಜಕೀಯ ತೀರ್ಮಾನವಾದ ಏನ್ ಡಿ ಏ ಒಕ್ಕೂಟದೊಂದಿಗೆ ಚುನಾವಣಾ ಮೈತ್ರಿಯನ್ನು ಮಾಡಿಕೊಂಡಿರುವುದನ್ನು ಒಪ್ಪಿಕೊಳ್ಳಲು ಅಸಾಧ್ಯವಾಗಿರುವುದರಿಂದ ಜನತಾದಳ ಜಾತ್ಯಾತೀತ ಪಕ್ಷದಲ್ಲಿ ತೊಡಗಿಸಿಕೊಳ್ಳಲು ನಮಗೆ ಅಸಾಧ್ಯವಾಗಿರುತ್ತದೆ ಅಲ್ಲದೇ ಈ ನಿಟ್ಟಿನಲ್ಲಿ ಸಮಾನಾ ಮನಸ್ಕರಾದ ನಾವೆಲ್ಲರೂ ಒಟ್ಟಾಗಿ ಜನತಾದಳ ಪಕ್ಷದ ಪ್ರಾಥಮಿಕ ಸದಸ್ಯತಕ್ಕೆ ಈ ದಿನ ರಾಜೀನಾಮೆ ಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯಧ್ಯಕ್ಷರಿಗೆ ಸಲ್ಲಿಸಿರುತ್ತೇವೆ. ಈಗಾಗಲೇ ನಮ್ಮನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾದ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಆದ ಡಿ. ಕೆ. ಶಿವಕುಮಾರ್ ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಆಹ್ವಾನವನ್ನು ನೀಡಿರುತ್ತಾರೆ. ಈ ಬಗ್ಗೆ ನಾವೆಲ್ಲರೂ ಈ ದಿನಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮತ್ತು ಉಪಮುಖ್ಯಮಂತ್ರಿಗಳಾದ ನೇತೃತ್ವದ ರಾಜ್ಯ ಸರ್ಕಾರವು ಆಡಳಿತಕ್ಕೆ ಬಂದ ನಂತರ ಸರಕಾರದ ಜನಪರ ಕಾರ್ಯಕ್ರಮಗಳೊಂದಿಗೆ ಹಾಗೂ ರಾಜ್ಯದ ಜನತೆ ಸಾಮಾಜಿಕ ನ್ಯಾಯ ಶಾಂತಿ ಸೌಹಾರ್ದತೆ ಸಾಮರಸ್ಯದ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗಿದ್ದು ಈ ನೆಲೆಯಲ್ಲಿ ಜಿಲ್ಲೆ ಮತ್ತು ಬ್ಲಾಕ್ ನಾಯಕರ ಜೊತೆಗೆ ಮಾತುಕತೆ ಮುಗಿದಿದ್ದು ಮಂಗಳೂರಿನಲ್ಲಿ ಪಕ್ಷ ಸೇರ್ಪಡೆ ನಡೆಯಲಿದೆ ಎಂದು ಹೇಳಿದರು.
ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಮಾತನಾಡುತ್ತಾ ನಾವು ಎಂದಿಗು ಜನಪರವಾದ ಕೆಲಸಗಳಿಗೆ ಒತ್ತು ನೀಡಿ ವಿರೋಧ ಪಕ್ಷವಾಗಿಯೇ ಇದ್ದೆವು ಅಲ್ಲದೇ ಸಾಮಾಜಿಕ ನ್ಯಾಯದ ನಿಲುವಿನ ಪರವಾಗಿ ಕಾಂಗ್ರೆಸ್ ಸೇರ್ಪಡೆ ಗೊಳ್ಳುತ್ತಿದ್ದೆವೆ ಎಂದು ಹೇಳಿದರು. ಪತ್ರಿಕಾಗೋಷ್ಠಿ ಜೆಡಿಎಸ್ ನಾಯಕರಾದ ಕೆ ಉಮ್ಮರ್ ಫಾರುಕ್ ಕಳಂಜ , ಎನ್ ಇಸ್ಮಾಯಿಲ್ ಕಳಂಜ , ಪಿ ಎಸ್ ಇಸ್ಮಾಯಿಲ್ , ಎ ಬಿ ಮೊಯಿದ್ದಿನ್ , ಇಬ್ರಾಹಿಂ ಕೊಳಂಬೆ , ರಫೀಕ್ ಐವತ್ತೊಕ್ಲು , ಖಾದರ್ ಮೊಟ್ಟಂಗಾರ್ , ಪಿ ಎ ಉಮ್ಮರ್ ಹಾಜಿ ಗೂನಡ್ಕ , ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.