ತುರ್ತು ಸಂದರ್ಭದಲ್ಲಿ ಅಮೂಲ್ಯ ಜೀವ ಉಳಿಸಬೇಕಾದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ 108 ಆಂಬ್ಯುಲೆನ್ಸ್ ಟೈಯರ್ ಯಾವ ಸಂದರ್ಭದಲ್ಲಿ ‘ಪಂಕ್ಚರ್’ ಆಗುತ್ತದೆ ಎಂಬುದು ಸ್ವತಃ ಡ್ರೈವರ್‌ಗೂ ಗೊತ್ತಿಲ್ಲ! ಇದಕ್ಕೆ ಕಾರಣ ಟೈಯರ್ ಸಂಪೂರ್ಣ ಸವೆದು ಹೋಗಿರುವುದು. ಹಲವು ತಿಂಗಳಿಂದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ 108 ಆಂಬ್ಯುಲೆನ್ಸ್ ಟೈಯರ್‌ಗಳು ಸಂಪೂರ್ಣ ಸವೆದುಹೋಗಿರುವ ಹಿನ್ನೆಲೆಯಲ್ಲಿ ಈ 108 abulance ಸೇವೆಗೆ ಲಭ್ಯವಿಲ್ಲದಂತಾಗುವ ಸಂದರ್ಭ,
ಆದರೆ ಟೈಯರ್ ಬದಲಿಸಲು ಕ್ರಮ ವಹಿಸಬೇಕಾದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ, ಹೀಗಾಗಿ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಬೇಕಾದ ರೋಗಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಹಾಗು 108 ಆಂಬ್ಯುಲೆನ್ಸ್ ಟೈಯರ್‌ಗಳ ಬದಲಾವಣೆ ಮಾಡದ ಹಿನ್ನೆಲೆಯಲ್ಲಿ ತುರ್ತು ಸೇವೆ ನೀಡಬೇಕಾದ ವಾಹನ ನಿಂತಲ್ಲೇ ಸ್ಥಗಿತಗೊಳ್ಳುವ ಸ್ಥಿತಿ ನಿರ್ಮಾಣಗೊಳ್ಳುವ ಸಂದರ್ಭದಲ್ಲಿ ಯುವ ಉದ್ಯಮಿ ವಿಷ್ಣು ಗ್ರೂಪ್ಸ್ ಇದರ ಮಾಲಕರು ಹಾಗೂ ತುಳುನಾಡ ರಕ್ಷಣಾ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಪ್ರಶಾಂತ್ ರೈ ಮರುವಂಜ ಹಾಗು ಶ್ರೀಮತಿ ಪ್ರವೀಣ ಪ್ರಶಾಂತ್ ಮರುವಂಜ ಜಿಲ್ಲಾ ಮಹಿಳಾ ಕಾಂಗ್ರೆಸ್ ಇದರ ಉಪಾಧ್ಯಕ್ಷರಾದ ಇವರ ಗಮನಕ್ಕೆ ಬಂದಾಗ ತಕ್ಷಣ ಕಾರ್ಯಪ್ರಾವುಕ್ತರಾದ ಇವರು ತುರ್ತು ಸಂದರ್ಭದಲ್ಲಿ ಬಡ ರೋಗಿಗಳ ಜೀವ ಉಳಿಸುವ ಮಾನವೀಯತೆ ದೃಷ್ಟಿಯಿಂದ ಹಾಗು ಬಡರೋಗಿಗಳ ಜೀವಕ್ಕೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೇವೆ ಗೆ ಬೇಕಾದ ಒಂದು ಟೈಯರ್ ನ್ನು ದಾನವಾಗಿ ನೀಡಿ ಊರವರ ಪ್ರೀತಿ ಮೆಚ್ಚುಗೆ ಗಳಿಸಿದ್ದಾರೆ. ಇದೀಗ 108 ಸೇವೆಗೆ ಲಭ್ಯ ಇದ್ದು ಟೈಯರ್ ನೀಡಿದ್ದಂತ ಶ್ರೀಯುತ ಪ್ರಶಾಂತ್ ರೈ ಮರುವಂಜ ದಂಪತಿಗಳಿಗೆ ಈ ಸಂದರ್ಭದಲ್ಲಿ ಬೆಳ್ಳಾರೆ 108 ಸಿಬ್ಬಂದಿಗಳು ದನ್ಯವಾದ ಸಲ್ಲಿಸಿದ್ದಾರೆ.
- Thursday
- November 21st, 2024