
ಸಾಮಾಜಿಕ ಜಾಲತಾಣದಲ್ಲಿ ರಕ್ತದಾನದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕೊಟ್ಟ ವ್ಯಕ್ತಿಯ ಮನಸ್ಥಿತಿ ಸರಿಯಿಲ್ಲ, ಮಾನಸಿಕ ಅಸ್ವಸ್ಥನಂತೆ ಬರೆದಿದ್ದಾರೆ. ನಮ್ಮ ಸಂಘಟನೆಯ ಮುಖಾಂತರ ಪ್ರತಿ ತಿಂಗಳು ಕಡಿಮೆ ಪಕ್ಷ ಯಾವುದೇ ಪಲಾಪೇಕ್ಷೆ ಇಲ್ಲದೆ ಸೇವಾ ರೂಪದಲ್ಲಿ 120 ಯೂನಿಟ್ ಕ್ಕಿಂತಲೂ ಹೆಚ್ಚು ರಕ್ತದಾನ ಸುಳ್ಯದಲ್ಲಿ ನಡೆಯುತ್ತಿದೆ ಅಲ್ಲದೆ ಈ ವ್ಯಕ್ತಿ ಹಿಂದೆಯೂ ಕೂಡ ಭಜನೆಯ ಬಗ್ಗೆ ಕೂಡ ಅವಹೇಳನವಾಗಿ ಬರೆದಿದ್ದು ಇದನ್ನು ವಿಶ್ವ ಹಿಂದೂ ಪರಿಷತ್ ಭಜರಂಗ ದಳ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಆ ವ್ಯಕ್ತಿಗೆ ಸರಿಯಾದ ಶಿಕ್ಷೆ ಆಗಲೇಬೇಕು ಎಂದು ಸುಳ್ಯ ಪ್ರಖಂಡದ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ ಪೈಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
