ಮರ್ಕಂಜದಲ್ಲಿ ಎಪ್ರಿಲ್ 12 ರಿಂದ ಏಳು ದಿನಗಳ ಪರಿಹಾರಿಣಿ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ಆಯೋಜನೆಗೊಂಡಿದೆ
ಯುವಕ ಮಂಡಲ ( ರಿ.) ಮರ್ಕಂಜ ಆಶ್ರಯದಲ್ಲಿ ಎಪ್ರಿಲ್ 12 ರಿಂದ ಏಳು ದಿನಗಳ ಪರಿಹಾರಿಣಿ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ನಡೆಯಲಿದೆ.
ಶಿವಮೊಗ್ಗದ ಶ್ರೀ ಚಂದನ್. ಜಿ. ರವರು ಚಿಕಿತ್ಸೆ ನೀಡಲಿದ್ದಾರೆ.
ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು, ಕೈಕಾಲು ಸೆಳೆತ, ಮಲಬದ್ಧತೆ, ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್, ಪಕ್ಷವಾತ, ಕೊಲೆಸ್ಟ್ರಾಲ್, ದೇಹದ ಅತಿಭಾರ, ಸ್ತ್ರೀಯರ ಸಮಸ್ಯೆಗಳು, ಜೀರ್ಣ ಸಮಸ್ಯೆ, ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 814 7870 814 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಆಯೋಜಕರು ತಿಳಿಸಿದ್ದಾರೆ.