
ಗುತ್ತಿಗಾರು ಸಮೀಪ ರಸ್ತೆ ಬದಿ ನಿಲ್ಲಿಸಿದ್ದ (KA21K9114) ಬೈಕನ್ನು ಕಳ್ಳತನ ನಡೆಸಿರುವ ಬಗ್ಗೆ ಸುಬ್ರಮಣ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುಬ್ರಮಣ್ಯ ಠಾಣಾಧಿಕಾರಿ ಕಾರ್ತಿಕ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಹಾಸನ ಮೂಲದ ಆರೋಪಿಗಳಾದ ಚಂದನ್ ಹಾಗೂ ವರದಾರಜ್ ಎಂಬುವವರಿಂದ ಕದ್ದಿರುವ ಬೈಕನ್ನು ಮಡಿಕೇರಿಯಲ್ಲಿ ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಯಿತು. ಪ್ರಕರಣ ಭೇದಿಸಿದ ಸುಬ್ರಹ್ಮಣ್ಯ ಪೊಲೀಸರು ಆರೋಪಿಗಳನ್ನು ಮಂಗಳೂರು ಜೈಲ್ಲಿಗಟ್ಟಿದ್ದಾರೆ.
