ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯದ ಹಲವರು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಬೃಂದಾ ಸುರೇಶ್ ರಾಜ್ಯದಲ್ಲಿ 10 ರ‍್ಯಾಂಕ್ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸಂಜನಾ ರಾವ್ 591 ಅಂಕ ಪಡೆದು ರಾಜ್ಯದಲ್ಲಿ 7 ನೇ ರ‍್ಯಾಂಕ್ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಅನುಷ್ಯ 587 ಅಂಕ ಪಡೆದು ರಾಜ್ಯದಲ್ಲಿ 10 ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.
ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ.ಸುರೇಶ್ ಹಾಗೂ ದಾಕ್ಷಾಯಿಣಿ ದಂಪತಿಗಳ ಪುತ್ರಿ ಬೃಂದಾ ಸುರೇಶ್. ಮೂಲತಃ ಇವರು ಮೈಸೂರು ಕೊಳ್ಳೆಗಾಲದ ಸತ್ಯಗಾಲ ಗ್ರಾಮದವರು. ಹಾಗೂ ಪ್ರಥಮ್ ಶೇಖರ್ 588 ಅಂಕ ಪಡೆದು ರಾಜ್ಯಕ್ಕೆ 11ನೇ ರ್ಯಾಂಕ್ ಪಡೆದು ವಿಜ್ಞಾನ ವಿಭಾಗದಲ್ಲಿ ದಾಖಲೆ ನಿರ್ಮಿಸಿರುತ್ತಾರೆ.
ಇದೇ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸುಳ್ಯ ಚೆನ್ನಕೇಶವ ದೇವಸ್ಥಾನದ ಸಮೀಪದ ನಿವಾಸಿ ಹೇಮಪ್ರಕಾಶ್ – ವಂದನಾ ದಂಪತಿಗಳ ಪುತ್ರಿ ಸಂಜನಾ ರಾವ್ ಎಚ್ 591 ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದು ವಾಣಿಜ್ಯ ವಿಭಾಗದಲ್ಲಿ ದಾಖಲೆ ನಿರ್ಮಿಸಿರುತ್ತಾರೆ.
ಶಾರದಾ ಮಹಿಳಾ ಪದಬಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜಾಲ್ಸೂರು ಗ್ರಾಮದ ಕುಕ್ಕುಂದೂರು ಅರುಲ್ ರಾಜ್ ಮತ್ತು ಭಾನುಮತಿ ದಂಪತಿಗಳ ಪುತ್ರಿ ಅನುಷ್ಯ 587 ಅಂಕ ಪಡೆದು ರಾಜ್ಯದಲ್ಲಿ 10ನೇ ರ‍್ಯಾಂಕ್ ಪಡೆದಿದ್ದಾರೆ.