Ad Widget

ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ದ್ವಿತೀಯ ಪಿ.ಯು ಶೇ.100 ಫಲಿತಾಂಶ

ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿನ ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ 11ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 7 ಹುಡುಗರು ಮತ್ತು 4 ಹುಡುಗಿಯರು ಪರೀಕ್ಷೆ ಬರೆದಿರುತ್ತಾರೆ. ಕಲಾ ವಿಭಾಗದಲ್ಲಿ 7 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 6ಹುಡುಗರು ಮತ್ತು 1 ಹುಡುಗಿಯರು ಪರೀಕ್ಷೆ ಬರೆದು ಎಲ್ಲರೂ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 9 ಮಂದಿ ಪ್ರಥಮ ಶ್ರೇಣಿಯಲ್ಲಿ,2ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ.
ಕಲಾ ವಿಭಾಗದಲ್ಲಿ 1ಒಬ್ಬರು ಡಿಸ್ಟಿಂಕ್ಷನ್ ನಲ್ಲಿ, 3 ಮಂದಿ ಪ್ರಥಮ ಶ್ರೇಣಿಯಲ್ಲಿ1ಒಬ್ಬರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಬಳ್ಪ ಬೋಗಯನಕೆರೆ ಪ್ರಸನ್ನ ಮತ್ತು ಶ್ರೀಮತಿ ಜಲಜಾಕ್ಷಿ ದಂಪತಿಗಳ ಪುತ್ರಿ.

. . . . . . .

ವಿನೀತ 540 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ, ದೇವಚ್ಚಳ್ಳ ಗ್ರಾಮದ ದೇವ ಕುಕ್ಕಾಡಿ ಮತ್ತು ಶ್ರೀಮತಿ ತಂಗಮ್ಮ ದಂಪತಿಗಳ ಪುತ್ರ ಚಂದ್ರಶೇಖರ 468 ಪ್ರಥಮ ಶ್ರೇಣಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕೃಷ್ಣನಗರ ಕೇಶವ ಆಚಾರ್ಯ ಮತ್ತು ಶ್ರೀಮತಿ ಮಂಜುಳಾ ದಂಪತಿಗಳ ಪುತ್ರ ಚರಣ್ 502, ಪಂಜದ ಕರಿಮಜಲು ಬಾಲಕೃಷ್ಣ ಗೌಡ ಮತ್ತು ಶ್ರೀಮತಿ ವನಿತಾ ದಂಪತಿಗಳ ಪುತ್ರ ಕೌಶಿಕ್ 485 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

Related Posts

error: Content is protected !!