ಸುಳ್ಯದಲ್ಲಿ ಪೋಲಿಸ್ ಮತ್ತು ಕಂದಾಯ ಇಲಾಖೆಯು ಹದ್ದಿನ ಕಣ್ಣಿಟ್ಟು ಭೂಮಿಯನ್ನು ಬಗೆದು ಕಳವು ಗೈಯುವ ಕಳ್ಳರ ವಿರುದ್ದ ಸಮರ ಸಾರುತ್ತಿದೆ. ಇತ್ತ ಗಣಿ ಇಲಾಖೆ ಮಾತ್ರ ಗಾಢ ನಿದ್ದೆಯಲ್ಲಿದೆ.
ಸುಳ್ಯ , ಕಡಬ ಹಾಗೂ ಕೊಡಗು ಜಿಲ್ಲೆಯ ಸಂಪಾಜೆ , ಪೆರಾಜೆ ಭಾಗಗಳಿಂದ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದು ಪೋಲಿಸ್ ಮತ್ತು ಕಂದಾಯ ಇಲಾಖೆಯ ಕಣ್ಣಿಗೆ ಮಣ್ಣೆರೆಚಿ ಟಿಪ್ಪರ್ ಲಾರಿಗಳಲ್ಲಿ ಸಾಗಾಟ ನಡೆಯುತ್ತಿದೆ. ಲಾರಿ ಜತೆಗೆ ಸ್ಕಾಡ್ ರೀತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಹೋಗುತ್ತಾ ದೂರವಾಣಿ ಮೂಲಕ ತಿಳಿಸುತ್ತಾ ಪೋಲೀಸರ ಕಣ್ಣು ತಪ್ಪಿಸಿ ಸಾಗಾಟ ಮಾಡುತ್ತಾರೆ. ಇತ್ತ ಗಣಿ ಇಲಾಖೆಗೆ ಸಾರ್ವಜನಿಕರು ಹಲವಾರು ಬಾರಿ ಕರೆ ಮಾಡಿದರು ಕರೆ ಸ್ವೀಕರಿಸದೇ ಅಕ್ರಮ ಮರಳು ಸಾಗಾಟದಾರರ ಪರವಾಗಿ ನಿಂತಂತೆ ಕಾಣಿಸುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಗಣಿ ಇಲಾಖೆಯ ದೂರವಾಣಿ ಸಂಖ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಅಮರ ಸುದ್ದಿ
ಇತ್ತ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಅಮರ ಸುಳ್ಯ ಸುದ್ದಿ ಕಛೇರಿಯಿಂದ ಮುಂಜಾನೆಯಿಂದ ಸಂಜೆಯ ತನಕ ಪ್ರಯತ್ನಿಸಿದರು ಕರೆ ಸ್ವೀಕರಿಸದ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ರಾತ್ರಿ ಸಂಚರಿಸುವ ಲಾರಿಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಜನತೆ ಹೇಳುತ್ತಿದ್ದಾರೆ . ಇತ್ತ ಮರ್ಕಂಜದಲ್ಲಿಯು ಗಣಿಗಾರಿಕೆ ನಡೆಸಲು ಪರವಾಣಿಗೆ ದೊರೆಯುತ್ತಿದ್ದಂತೆ ಗ್ರಾಮಸ್ಥರು ಸರಕಾರದ ವಿರುದ್ದ ತಿರುಗಿ ಬಿದ್ದಿದ್ದು ಮುಂದಿನ ದಿನಗಳಲ್ಲಿ ಅಕ್ರಮ ಮರಳು ಗಣಿ ನಡೆಸುವವರ ವಿರುದ್ದ ಜನತೆ ಪ್ರತಿಭಟಿಸುವ ದಿನಗಳು ದೂರವಿಲ್ಲ .
ಮರಳು ಕಾಟಿಂಗ್ ಮಾಡುತ್ತಿರುವ ಅಕ್ರಮ ಗಣಿ ಮಾಲಿಕರು
ಕೃತಕವಾಗಿ ಮರಳು ಅಭಾವ ಸೃಷ್ಟಿಸಿ, ಬೇಡಿಕೆ ಬರುವಂತೆ ಮಾಡಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯರಿಗೆ ಮಣ್ಣು ಮಿಶ್ರಿತ ಮರಳನ್ನು ಹಾಕುತ್ತಿದ್ದು ಉಳಿದವುಗಳನ್ನು ನೆರೆಯ ಕೇರಳ ಮತ್ತು ಕೊಡಗು ಜಿಲ್ಲೆಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇತ್ತ ಈ ಹಿಂದೆ ಗಣಿ ಮಾಫಿಯಾವಾಗಿ ಬಳ್ಳಾರಿ ಗುರುತಿಸಿಕೊಂಡು ಬಳ್ಳಾರಿ ರಿಪಬ್ಲಿಕ್ ಎಂದೇ ಬಿಂಬಿತವಾಗಿದ್ದವು ಅಲ್ಲದೇ ರಾಜಕೀಯ ವ್ಯಕ್ತಿಗಳ ಹಿಂದುಗಡೆಯಿಂದ ಹೋಗುವ ಸಂದರ್ಭದಲ್ಲಿ ಸುಳ್ಯದಲ್ಲಿ ಅಕ್ರಮ ಮರಳುಗಣಿಗಾರಿಕೆ ಮಾಡುವವರು ಜೊತು ಬೀಳುವುದು ಸರ್ವೆ ಸಾಮಾನ್ಯವಾಗಿ ಕಾಣಸಿಗುತ್ತದೆ ಇವರಿಗೆ ರಾಜಕೀಯ ವ್ಯಕ್ತಿಗಳ ಸಹಾಯ ಇದೆಯೋ ಎಂಬ ಅನುಮಾನ ಸೃಷ್ಟಿಯಾಗಿದ್ದು ಇತ್ತ ಇದೇ ಮಾದರಿಯಲ್ಲಿ ಇದೀಗ ಕೆಂಪು ಕಲ್ಲು ಮತ್ತು ಮರಳು ಅಕ್ರಮ ಗಣಿಗಾರಿಕೆ ನಡೆಯಿತ್ತಿದ್ದು ಇನ್ನೊಂದು ಬಳ್ಳಾರಿಯಾಗದಿರಲಿ. ಇನ್ನಾದರು ಗಣಿ ಇಲಾಖೆ ಎಚ್ಚೆತ್ತು ಸುಳ್ಯ ಮತ್ತು ಕೊಡಗು ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ ಅಕ್ರಮ ಗಣಿಗಳ ಕುರಿತು ಕ್ರಮಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.