Ad Widget

ಮರ್ಕಂಜ: ಗಣಿಗಾರಿಕೆ ವಿರುದ್ಧ ಮತ್ತೆ ಸಿಡಿದೆದ್ದ ಗ್ರಾಮಸ್ಥರು, ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ!

ತಾಲೂಕು ಕಛೇರಿ ಮುಂಭಾಗ ಸೇರಿದ ಗ್ರಾಮಸ್ಥರು, ತಹಶೀಲ್ದಾರರಿಗೆ ಮನವಿ ಸಲ್ಲಿಕೆ

. . . . . . .

ಮರ್ಕಂಜ : ಅಳವುಪಾರೆಯ ಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಯದಿದ್ದಲ್ಲಿ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದೀಗ ತಾಲೂಕು ಕಛೇರಿ ಮುಂಭಾಗ  ಗ್ರಾಮಸ್ಥರು ಸೇರಿದ್ದಾರೆ.



ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಸ. ನಂಬ್ರ ೧೭೩/೧ಬಿ೨ಎಪಿಂ ರ ಸರಕಾರಿ ಸ್ಥಳದಲ್ಲಿ ತಮ್ಮಪ್ಪ ಗೌಡ ಪೂಂಬಾಡಿಯವರು ಕೈಯಿಂದ ಒಡೆದು ಕಲ್ಲು ಒಡೆಯುವ ಗಣಿಗಾರಿಕೆ ಮಾಡುವ ಪರವಾನಿಗೆಯನ್ನು ಪಡೆದುಕೊಂಡು  ಆದರೆ ಸದಿ ತಮ್ಮಪ್ಪ ಗೌಡರವರು ಮೂರನೇಯ ವ್ಯಕ್ತಿಗಳಿಗೆ ಗಣಿಗಾರಿಕೆ ಮಾಡಲು ಅನುಮತಿಯನ್ನು ನೀಡಿರುತ್ತಾರೆ. ಪ್ರಸ್ತುತ ಗಣಿಗಾರಿಕೆ ಮಾಡುತ್ತಿರುವ ಅಜೀಜ್ ಕಾವು, ಡೆಲ್ಮಾ ಎಂಟರ್‌ಪ್ರೆಸೆಸ್ ಮತ್ತು ಸಿದ್ಧ ಗೌಡ ಮೈಸೂರು ಎನ್ನುವವರು ಕಾನೂನುಬಾಹಿರವಾಗಿ ತೋಟೆಗಳನ್ನು ಬಳಸಿ ಕಲ್ಲುಗಳನ್ನು ಒಡೆಯುತ್ತಿರುವುದರಿಂದ ಪರಿಸರದಲ್ಲಿರುವ ಮನೆಗಳಿಗೆ ಹಾನಿಯಾಗಿದ್ದು ಮನೆಗಳ ಗೋಡೆಗಳು ಒಡೆದಿರುತ್ತದೆ. ಪರಿಸರದ ರಸ್ತೆಗಳೆಲ್ಲಾ ಹಾನಿಯಾಗಿದ್ದು ರಸ್ತೆಯಲ್ಲಿ ಕಲ್ಲಿನ ಹುಡಿಗಳು ಬಿದ್ದು ರಸ್ತೆಯಲ್ಲಿ ಜನರು ಓಡಾಡದಂತೆ ಆಗಿರುತ್ತದೆ. ಮಾತ್ರವಲ್ಲದೆ ರಸ್ತೆಯ ಧೂಳುನ್ನು ತೆಗೆಯುವರೆ ರಸ್ತೆಗೆ ನೀರು ಹಾಕುತ್ತಿದ್ದು ರಸ್ತೆಯೆಲ್ಲಾ ಕೆಸರುಮಯವಾಗಿರುತ್ತದೆ.

ಗಣಿಗಾರಿಕೆ ನಡೆಯುತ್ತಿರುವ ಕೇವಲ ೩೮೩ ಮೀಟರ್  ದೂರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡ್ನೂರು ಮರ್ಕಂಜ, ೫೦೦ ಮೀಟರ್ ದೂರದಲ್ಲಿ ಮೀನುಂಗುರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ೧೫೦ ಮೀಟರ್ ದೂರದಲ್ಲಿ ಹರಿಜನ ಕಾಲೋನಿ, ೧೫೦ ಮೀಟರ್ ದೂರದಲ್ಲಿ ಕುಡಿಯುವ ನೀರಿನ ೨ ಕೊಳವೆ ಬಾವಿಗಳು ಮತ್ತು ನೀರಿನ ಟ್ಯಾಂಕ್ ಸರಕಾರಿ ಆಸ್ಪತ್ರೆ, ೪೦೦ ಮೀಟ‌ರ್ ದೂರದಲ್ಲಿ ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಯುವಕ ಮಂಡಲದ ಕಟ್ಟಡ ಇರುತ್ತದೆ. ಒಂದು ವರ್ಷದ ಹಿಂದೆ ತೋಟೆ ಬಳಸಿ ಗಣಿಗಾರಿಕೆ ಮಾಡಿರುವುದರಿಂದ ಮೀನಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯು ಒಡೆದಿದ್ದು ಹಾನಿಗೊಂಡಿರುತ್ತದೆ. ಜನನಿಬಿಡವಾದ ಸ್ಥಳದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಿರುವುದರಿಂದ ಅಳವುಪಾರ ಪುದೇಶದ ಜನರಿಗೆ ಜೀವನ ನಡೆಸಲು ದುಸ್ತರವಾಗಿರುತ್ತದೆ. ಕಲ್ಲುಕೋರೆಯಲ್ಲಿ ಸ್ಫೋಟಿಸುವ ತೋಟೆಗಳ ಭೀಕರ ಸ್ಫೋಟಕ್ಕೆ ವಾಸ್ತವ್ಯದ ಮನೆಗಳು, ಅಂಗಡಿಗಳ ಗೋಡೆಗಳು ಹಾನಿಗೀಡಾಗಿದ್ದು ನಾಗರಿಕರು ವಾಸಿಸಲು ಭಯಭೀತರಾಗುವಂತಾಗಿರುತ್ತದೆ. ಟಿಪ್ಪರ್ ಲಾರಿಯಲ್ಲಿ ವಿಪರೀತ ಜಲ್ಲಿಕಲ್ಲುಗಳನ್ನು ತೆಗೆದುಕೊಂಡು ಹೋಗುತ್ತಿರುವುದರಿಂದ ರಸ್ತೆಯಲ್ಲಿ ಚೆಲ್ಲಿ ಜನರು ನಡೆದಾಡದಂತಾಗಿರುತ್ತದೆ. ಮಾತ್ರವಲ್ಲದೆ ರಸ್ತೆಯಲ್ಲಿ ಹರಡಿರುವ ಜಲ್ಲಿ ಕಲ್ಲಿನ ಹುಡಿಯಿಂದಾಗಿ ಶಾಲಾ ಮಕ್ಕಳ, ಪರಿಸರದ ಜನರ ಆರೋಗ್ಯಕ್ಕೆ ತೊಂದರೆಯಾಗಿರುತ್ತದೆ. ನಮ್ಮ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಗಣಿಗಾರಿಕೆಯನ್ನು ನಿಲ್ಲಿಸಿರುವುದಿಲ್ಲ. ಹಾಗಾಗಿ  ನ್ಯಾಯೋಚಿತ ಬೇಡಿಕೆ ಮತ್ತು ಒತ್ತಾಯಕ್ಕೆ ಮಣಿಯದಿದ್ದಲ್ಲಿ ಮರ್ಕಂಜ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನ‌ರ್ ಅಳವಡಿಸುವುದು ಮತ್ತು ಉಪವಾಸ ಸತ್ಯಾಗ್ರಹ, ಹೋರಾಟ ನಡೆಸುವುದೆಂದು ನಿರ್ಧಾರ ಮಾಡಿರುತ್ತೇವೆ  ಎಂದು ನೀಡಲಿರುವ ಮನವಿಯಲ್ಲಿ ಬರೆಯಲಾಗಿದೆ.

ವೆಂಕಟರಮಣ ಅಂಗಡಿಮಜಲು, ಬೋಜಪ್ಪ ಕೊಚ್ಚಿ, ನವೀನ್ ನಳಿಯಾರು, ಚರಣ್ ಗುತ್ತುಮಜಲು, ಯತೀಶ್ ಕಂಜಿಪಿಲಿ, ನವೀನ್ ದೊಡ್ಡಿ ಹಿತ್ಲು, ರಮೇಶ್ ಪಡ್ಡಂಬೈಲು, ನಾಗಮ್ಮ ನಾಯ್ಕ್ , ಧರ್ಮವತಿ ಪಡ್ಡಂಬೈಲು, ಬಿಯಾಳು, ದಿವಾಕರ ಕಾಳಮನೆ, ದಿವಾಕರ ಗುರುಂಪು ಮೊದಲಾದವರು ಇದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!