
ಮಂಗಳೂರು ಲೋಕಸಭಾ ಚುನಾವಣೆ, ಬ್ಲಾಕ್ ಕಾಂಗ್ರೆಸ್ ಸುಳ್ಯ ಇದರ ಐವರ್ನಾಡು ಗ್ರಾಮ ಸಮಿತಿಯ ಪೂರ್ವಭಾವಿ ಸಭೆ ಇಂದು ಐವರ್ನಾಡಿನ ಎನ್.ಎಂ.ಬಾಲಕೃಷ್ಣ ಗೌಡ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ ಜಯರಾಂ , ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿಗಳಾದ ಶ್ರೀ ಎಂ. ವೆಂಕಪ್ಪ ಗೌಡ, ದ.ಕ ಜಿಲ್ಲಾ ಕಾಂಗ್ರೆಸ್ ನ ಕಾರ್ಯದರ್ಶಿಗಳಾದ ರಾಧಾಕೃಷ್ಣ ಬೊಳ್ಳೂರು, ಕೆಪಿಸಿಸಿ ಸದಸ್ಯರಾದ ಶ್ರೀಮತಿ ಸರಸ್ವತಿ ಕಾಮತ್, ಸುಳ್ಯ ಬ್ಲಾಕ್ ಮಹಿಳಾ ಸಂಯೋಜಕರಾದ ಶ್ರೀಮತಿ ರಾಜೀವಿ ರೈ ಬೆಳ್ಳಾರೆ, ಜಿಲ್ಲಾ ಪ್ರಚಾರ ಸಮಿತಿ ಸಹ ಸಂಚಾಲಕರಾದ ಚಂದ್ರಲಿಂಗಮ್, ಇಂಡಿಯಾ ಒಕ್ಕೂಟದ ಮೂಲಕ ಕಾಂಗ್ರೆಸ್ ಬೆಂಬಲಿಸುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಶೋಕ್ ಎಡಮಲೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಧ್ಯಮ ಸಂಯೋಜಕರಾದ ಅಶೋಕ್ ಚೂಂತಾರ್, ಅಬ್ದುಲ್ ಗಫೂರ್ ಕಲ್ಮಡ್ಕ, ದಿನೇಶ್ ಮಡ್ತಿಲ, ಹಿರಿಯ ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಜಯಪ್ರಕಾಶ್ ನೆಕ್ರಪ್ಪಾಡಿ, ಮಂಜುನಾಥ ಮೊದಲಾದ ಅರುವತ್ತಕ್ಕೂ ಹೆಚ್ಚಿನ ಮಹಿಳೆಯರು ಮತ್ತು ಉತ್ಸಾಹೀ ಕಾರ್ಯಕರ್ತರು ಭಾಗವಹಿಸಿದ್ದರು.