
ಮಂಗಳೂರಿನಲ್ಲಿ ರೈಲಿನಡಿಗೆ ಬಿದ್ದು ಗುತ್ತಿಗಾರು ಗ್ರಾಮದ ಆಚಳ್ಳಿ ಯುವಕನೋರ್ವ ಮೃತಪಟ್ಟ ಘಟನೆ ಎ. 07 ರಂದು ನಡೆದಿದೆ.
ಗುತ್ತಿಗಾರು ಗ್ರಾಮದ ಆಚಳ್ಳಿ ಹಂದಿಪಾರೆ ನಿವಾಸಿ ಸುಪ್ರೀತ್ ನಾಯ್ಕ ರವರು ಮೃತಪಟ್ಟ ದುರ್ದೈವಿ. ತನ್ನ ತಾಯಿ ಹಾಗೂ ಅಕ್ಕನೊಂದಿಗೆ ಮಂಗಳೂರಿನಲ್ಲಿ ನೆಲೆಸಿರುವ ಈತ ಎ.6 ರಂದು ರಾತ್ರಿ ವೇಳೆ ಮನೆಯಿಂದ ಹೋಟೆಲ್ ಗೆಂದು ಬಂದಿದ್ದ, ಸ್ವಲ್ಪ ಹೊತ್ತಿನ ಬಳಿಕ ಮನೆಯವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಹಿತಿ ಬಂದಿದೆ. ಕಾಲು ಹಾಗೂ ಕೈ ತುಂಡಾಗಿದ್ದರಿಂದ ರಕ್ತಸ್ರಾವ ಹೆಚ್ಚಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಮೃತಪಟ್ಟರು ಎಂದು ತಿಳಿದುಬಂದಿದೆ.