ಸುಳ್ಯದ ಜನಪರ ಪತ್ರಿಕೆಯಾಗಿ ಕಳೆದ 13 ವರ್ಷಗಳಿಂದ
ಕಾರ್ಯನಿರ್ವಹಿಸುತ್ತಿರುವ ಅಮರ ಸುಳ್ಯ ಸುದ್ದಿ ಪತ್ರಿಕೆಯ ಮೂರನೇ ಆವೃತ್ತಿಯ ಯುಗಾದಿ ವಿಶೇಷಾಂಕವನ್ನು ಸುಳ್ಯ ತಾಲೂಕು ದಂಢಾಧಿಕಾರಿಗಳಾದ ಜಿ ಮಂಜುನಾಥ್ ಲೋಕಾರ್ಪಣೆ ಗೊಳಿಸಿದರು .
ಅಮರ ಸುದ್ದಿಯು ಪಕ್ಷ , ಜಾತಿ ಮತ ಭೇದವಿಲ್ಲದೆ ಸಮಾಜದ ಕೈ ಗನ್ನಡಿಯಾಗಿ ನಿರಂತರವಾಗಿ ಮೂಡಿ ಬರುತ್ತಿದ್ದು ಸುಳ್ಯ ತಾಲೂಕು ಕಛೇರಿಯಲ್ಲಿ ಲೋಕಾರ್ಪಣೆ ಕಾರ್ಯಕ್ರಮವನ್ನು ಪತ್ರಿಕೆಯ ಮುಖ್ಯ ಸಂಪಾದಕರಾದ ಮುರಳಿಧರ ಅಡ್ಡಾನಪಾರೆ ನೇತೃತ್ವದಲ್ಲಿ ನಡೆಸಲಾಯಿತು .ಲೋಕಾರ್ಪಣೆ ಗೈದು ಮಾತನಾಡುತ್ತಾ ಪತ್ರಿಕೆಯು ಅತ್ಯಂತ ಯಶಸ್ವಿಯಾಗಿ ಮೂಡಿ ಬರುತ್ತಿದ್ದು ನೈಜ ವರದಿಗಳನ್ನು ಸುದ್ದಿಗಳನ್ನು ಸುದ್ದಿಯ ರೀತಿಯಲ್ಲೆ ತರುತ್ತಿದ್ದು ಈ ರೀತಿಯ ಪುಸ್ತಕಗಳು ಮತ್ತು ಪತ್ರಿಕೆಯು ಇನ್ನಷ್ಟು ಜನಪರವಾಗಿ ಕೆಲಸ ನಿರ್ವಹಿಸಲಿ ಎಂದು ಲೋಕಾರ್ಪಣೆ ಗೈದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಎ ಹೆಚ್ ಒ ಅರ್ಬಣ್ಣ ಪೂಜಾರಿ , ಸೇರಿದಂತೆ ಅಮರಸುದ್ದಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಇಂದಿನಿಂದ ನಿಮ್ಮ ಹತ್ತಿರದ ಏಜೆಂಟ್ ಬಳಿಯಲ್ಲಿ ವಿಶೇಷಾಂಕ ಪುಸ್ತಕ ಲಭ್ಯವಿವೆ