ಪಂಜದ ಸಂತ ರೀತಾ ಚರ್ಚ್, ಲಯನ್ಸ್ ಕ್ಲಬ್ ಪಂಜ ಹಾಗೂ ಜೆಸಿಐ ಪಂಜ ಪಂಚಶ್ರೀ ಘಟಕ ಮತ್ತು ಕಂಪಾನಿಯೋ
ನೆಮ್ಮದಿ ವೆಲ್‌ನೆಸ್ ಸೆಂಟರ್ ಪುತ್ತೂರು ಇದರ ಆಶ್ರಯದಲ್ಲಿ
ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ ಪಂಜ ಸಂತ ರೀತಾ ಚರ್ಚ್ ಹಾಲ್‌ನಲ್ಲಿ ಎ.7ರಂದು ನಡೆಯಿತು. ಪಂಜ ಶ್ರೀ ಪರಿವಾರ
ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಶಿಬಿರವನ್ನು ಉದ್ಘಾಟಿಸಿದರು. ಸಂತ ರೀತಾ ಚರ್ಚ್‌ನ ಧರ್ಮಗುರುಗಳಾದ ಫಾ.ಅಮಿತ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ನೆಮ್ಮದಿ ವೆಲ್‌ನೆಸ್ ಸೆಂಟರ್‌ನ ಮಾಲಕರಾದ ಕೆ.ಪ್ರಭಾಕರ ಸಾಲ್ಯಾನ್ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಸಂತ ರೀತಾ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಸೆಲಿನ್ ಡಿಸೋಜ, ಪಂಜ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ, ಪಂಜ ಪಂಚಶ್ರೀ ಜೇಸೀಸ್‌ನ ಉಪಾಧ್ಯಕ್ಷ ವಾಚಣ್ಣ ಕೆರೆಮೂಲೆ ಉಪಸ್ಥಿತರಿದ್ದರು.
ಕೆ.ಪ್ರಭಾಕರ ಸಾಲ್ಯಾನ್ ಸ್ವಾಗತಿಸಿದರು. ಸಂತ ರೀತಾ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಸೆಲಿನ್ ಡಿಸೋಜ ವಂದಿಸಿದರು.