Ad Widget

ಜರ್ಮನಿಯ ಬರ್ಲಿನ್ ನಲ್ಲಿ ನಡೆಯುವ ವಿಕಿಮೀಡಿಯ ಸಮಿತ್‌ 2024ಕ್ಕೆ ಆಯ್ಕೆಯಾದ ಭರತೇಶ್ ಅಲಸಂಡೆಮಜಲು

ಜರ್ಮನಿಯ ಬರ್ಲಿನ್‌ನಲ್ಲಿ ಎ.19 ರಿಂದ 22 ರವರೆಗೆ ನಡೆಯಲಿರುವ ವಿಕಿಮೀಡಿಯ ಸಮಿತ್‌ 2024ಕ್ಕೆ ಅರೆಬಾಸೆ ಅಕಾಡೆಮಿ ಮಾಜಿ ಸದಸ್ಯ ಭರತೇಶ್ ಅಲಸಂಡೆಮಜಲು ಅಯ್ಕೆಯಾಗಿದ್ದಾರೆ. ಮಂಗಳೂರಿನ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪಿನ ಸಕ್ರೀಯ ಸದಸ್ಯರಾದ ಇವರು ತುಳು ಮತ್ತು ಕನ್ನಡ ಭಾಷೆಯ ರಾಯಭಾರಿಯಾಗಿ ಈ ಸಮ್ಮಿಳನವನ್ನು ಪ್ರತಿನಿಧಿಸಲಿದ್ದಾರೆ. ಈ ವಿಕಿಮೀಡಿಯನ್‌ ಸಮಿತ್‌ನಲ್ಲಿ 100ಕ್ಕಿಂತ ಹೆಚ್ಚು ದೇಶಗಳ 150ಕ್ಕಿಂತ ಹೆಚ್ಚು ಬಹುಭಾಷಿಕರೊಂದಿಗೆ ಭಾಗವಹಿಸಿ ವಿಕಿಮೂಮೆಂಟ್‌ 2030 ಕಾರ್ಯರೂಪ, ಪ್ರಾದೇಶಿಕ ಗುಂಪುಗಳ ಅವಲೋಕನ, ಭಾಷೆಗಳ ಸವಾಲುಗಳ ಬಗೆಗಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

. . . . .

ಇವರು ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಅಲಸಂಡೆಮಜಲು ಮನೆ ಬೋಜಪ್ಪ ಗೌಡ ಎ ಹಾಗೂ ಗಿರಿಜಾ ಎ ಬಿ. ದಂಪತಿಗಳ ಮಗ. ಪ್ರಸ್ತುತ ಬ್ಯಾಂಕ್‌ ಆಫ್ ಬರೋಡದ ಉದ್ಯೋಗಿಯಾಗಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು. ಇತ್ತಿಚೇಗೆ ವಿಕಿಮೀಡಿಯ ಪೌಂಢೇಶನ್‌ನ ಸಹಯೋಗದಲ್ಲಿ ಇವರ ನಿರ್ಮಾಪಕತ್ವದಲ್ಲಿ ತಯಾರಾದ ತುಳುವಿನ ಮೊದಲ ಸಂಶೋಧನಾ ಸಾಕ್ಷ್ಯಚಿತ್ರ ಪುರ್ಸಕಟ್ಟುನ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಇವರು ತುಳು, ಕನ್ನಡ ಬರಹಗಾರರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!