ಒಗ್ಗಟ್ಟಿನ ಹೋರಾಟಕ್ಕೆ ಉಭಯ ನಾಯಕರ ಕರೆ:
ಸುಳ್ಯ : ಸುಳ್ಯ ಬಿಜೆಪಿ ಮಂಡಲ ಕಛೇರಿಯಲ್ಲಿ ಎನ್ ಡಿ ಎ ಒಕ್ಕೂಟ ಮೈತ್ರಿ ಪಕ್ಷಗಳ ನಾಯಕರ ಸಭೆಯು ಸುಳ್ಯದ ಪಕ್ಷದ ಕಛೇರಿಯಲ್ಲಿ ನಡೆಯಿತು.
ಸುಳ್ಯ: ಭಾಜಪಾ ಸ್ಥಾಪನಾ ದಿನಾಚರಣೆಯಾದ ಇಂದು ಭಾರತ ಮಾತೆಗೆ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ, ದಿನದಯಾಳ್ ಉಪಾಧ್ಯಾಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆಯನ್ನು ಮಾಡಿ ಸಭೆಯನ್ನು ಆರಂಭಿಸಲಾಯಿತು.
ಸಭೆಯಲ್ಲಿ ಲೊಕಸಭಾ ಚುನಾವಣಾ ಕೆಲಸಗಳಿಗೆ ಯಾವ ರೀತಿಯಲ್ಲಿ ವೇಗವನ್ನು ಕೊಡಬೇಕು, ಒಟ್ಟಾಗಿ ಜೊತೆಯಲ್ಲಿ ಸೇರಿಕೊಂಡು ಚುನಾವಣೆಯನ್ನು ಎದುರಿಸುವುದರ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತನಾಡುತ್ತಾ ಈ ಹಿಂದೆ ಬಿಜೆಪಿ 60 ಸಾವಿರ ಮತಗಳ ಲೀಡ್ ಪಡೆಯುತ್ತಿದ್ದೆವು ಈಗ ನಾವು ಮೈತ್ರಿಯ ಮೂಲಕ 70 ಸಾವಿರ ಲೀಡ್ ಪಡೆಯಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ವೆಂಕಟ ವಳಲಂಬೆ , ಜೆಡಿಎಸ್ ಅಧ್ಯಕ್ಷರಾದ ಸುಕುಮಾರ್ ಕೊಡ್ತುಗುಳಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಜಿಲ್ಲಾ ಉಪಾಧ್ಯಕ್ಷ ರಾಕೇಶ ರೈ ಕೆಡೆಂಜಿ, ಹಿರಿಯರಾದ ಎಸ್, ಎನ್ ಮನ್ಮಥ, ಮತ್ತು ಜನತದಳದ ಪ್ರಮುಖರಾದ ರಾಜ್ಯ ವಕ್ತಾರರು ಎಂ ಬಿ ಸದಾಶಿವ, ಕಡಬ ತಾಲ್ಲೂಕು ಅಧ್ಯಕ್ಷರಾದ ಸೈಯ್ಯದ್ ಮಿರಾಸಾಹೇಬ್ ಹಾಗೂ ಭಾಜಪ ಮತ್ತು ಜನತದಳದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.