ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಬಳ್ಪ ಹಾಗೂ ಕೇನ್ಯ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆಯು 05 ರಂದು ಚಂದ್ರಶೇಖರ ಅಕ್ಕೇನಿಯವರ ತೋಟದ ಮನೆಯಲ್ಲಿ ಉಸ್ತುವಾರಿಗಳಾದ ಅಶೋಕ್ ನೆಕ್ರಾಜೆ ಅವರ ಉಸ್ತುವಾರಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಜಯಪ್ರಕಾಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಯಕ್ರಮಗಳನ್ನು ಮನೆಮನೆಗೆ ತೆರಳಿ ವಿವರಿಸಲು ಮತ್ತು ಯಾರಿಗಾದರೂ ಗ್ಯಾರೆಂಟಿ ಯೋಜನೆ ಬಾಕಿ ಆಗಿದ್ದಲ್ಲಿ ಕೂಡಲೇ ವಿತರಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಚಂದ್ರಕಾಂತ್ ಬಲ್ಯ, ಕೇನ್ಯ ರವೀಂದ್ರನಾಥ ಶೆಟ್ಟಿ, ಸಂತೋಷ್ ರೈ, ಗೋಪಾಲ್ ಎಣ್ಣೆಮಜಲು, ಚಂದ್ರಶೇಖರ ಅಕ್ಕೇನಿ, ಕುಳ ಪುಟ್ಟಣ್ಣ ಗೌಡ, ಅಚ್ಯುತ ಗೌಡ, ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಶ್ರೀಮತಿ ಶೈಲಜಾ, ಶಿವ, ಗಣೇಶ್ ಹೊಪ್ಪಾಳೆ, ಭಾಸ್ಕರ ಕೊರಪ್ಪಣೆ, ಪ್ರಶಾಂತ್ ಪೊಟ್ಟುಕೆರೆ, ಪ್ರಶಾಂತ್ ಕಾರ್ಜ, ಮಹೇಶ್ ಚೂಂತಾರು, ಶಿವಪ್ರಸಾದ್ ಕೊಠಾರಿ, ಕಿರಣ್ ಕಲ್ಲೇರಿ, ಗಂಗಾಧರ, ಮಿಥುನ್ ರಾಜ್, ಪ್ರಶಾಂತ್ ಕೋಡಿಯಡ್ಕ, ಯಶೋಧರ ಗೆಜ್ಜೆ, ಪ್ರಕಾಶ್ ಕಾಯಂಬಾಡಿ, ಪ್ರಕಾಶ್ ಗೆಜ್ಜೆ, ವೀರೇಶ್ ರೈ, ಯಶವಂತ ಚೆನ್ನಕಜೆ, ಶ್ರೀನಿವಾಸ್ ಪಲ್ಲತ್ತಡ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
- Friday
- November 22nd, 2024