Ad Widget

ಸಂಪಾಜೆ : ಅರಣ್ಯ ಇಲಾಖೆಯ ನಾಲ್ವರಿಗೆ ಭಡ್ತಿ

(ವಿನಯಕೃಷ್ಣ, ನಾಗರಾಜ್. ಎಸ್, ವಿಜೇಂದ್ರಕುಮಾರ್, ಶ್ರೀರಕ್ಷಾ, ಶೋಭಾ, ಸಂದೀಪ್. ಗೌಡ, ಕಾರ್ತಿಕ್. ಡಿ)

. . . . . . . . .

ಸಂಪಾಜೆ ವಲಯಾರಣ್ಯಾಧಿಕಾರಿಗಳ ಕಛೇರಿಯ ನಾಲ್ಕು ಮಂದಿ ಸಿಬ್ಬಂದಿಗಳಿಗೆ ಮುಂಭಡ್ತಿಯಾಗಿದ್ದು, ಹಾಗೂ ಮೂರು ಮಂದಿ ಸಿಬ್ಬಂದಿಗಳು ಹೊಸದಾಗಿ ಆಗಮಿಸಿದ್ದಾರೆ. ವಿನಯಕೃಷ್ಣ ಎಂ.ಸಿ. ಅವರು ಸಂಪಾಜೆ ವಲಯ ರಕ್ಷಣಾ ಕಾರ್ಯ ಎರಡರಿಂದ ಕಾರ್ಯ ಒಂದಕ್ಕೆ ಭಡ್ತಿಗೊಂಡಿದ್ದು, ವಿಜಯೇಂದ್ರ ಕುಮಾರ್ ಎಂ. ಅವರು ಸಂಪಾಜೆ ವಲಯದ ಸಂಪಾಜೆ ಶಾಖೆಯಿಂದ ಸಂಪಾಜೆ ವಲಯದ ಐ.ಸಿ.ಟಿ ಘಟಕಕ್ಕೆ ಭಡ್ತಿಗೊಂಡಿದ್ದಾರೆ. ಸಂದೀಪ್ ಗೌಡ ಅವರು ಕುಶಾಲನಗರದಿಂದ ಸಂಪಾಜೆ ವಲಯದ ರಕ್ಷಣಾ ಕಾರ್ಯ ಎರಡಕ್ಕೆ ವರ್ಗಾವಣೆಗೊಂಡು ಬಂದಿದ್ದು, ತಿತಿಮತಿಯ ಸರ್ಕಾರಿ ನಾಟ ಸಂಗ್ರಹಾಲಯದಿಂದ ಶ್ರೀರಕ್ಷಾ ಎಂಬವರು ಸಂಪಾಜೆ ವಲಯದ ಸಂಪಾಜೆ ಶಾಖೆಗೆ ಆಗಮಿಸಿ, ಕರ್ತವ್ಯ ವಹಿಸಿಕೊಂಡಿದ್ದಾರೆ.

. . . . . . .

ಕಾರ್ತಿಕ್ ಡಿ. ಅವರು ಸಂಪಾಜೆ ವಲಯದ ದಬ್ಬಡ್ಕ ಎರಡನೇ ಗಸ್ತುವಿನಿಂದ ಸಂಪಾಜೆ ವಲಯದ ರಕ್ಷಣಾ ಕಾರ್ಯ ನಾಲ್ಕಕ್ಕೆ ವರ್ಗಾವಣೆ ಗೊಂಡಿದ್ದಾರೆ

ಸಂಪಾಜೆ ವಲಯದ ಕುಂಬಳಚೇರಿ ಗಸ್ತುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ್ ಎಸ್. ಅವರು ಸಂಪಾಜೆ ವಲಯದ ರಕ್ಷಣಾ ಕಾರ್ಯ ಮೂರಕ್ಕೆ ವರ್ಗಾವಣೆಗೊಂಡಿದ್ದಾರೆ . ಕಾರ್ಕಳ ವಲಯದಲ್ಲಿ ಗಸ್ತುವಿನಲ್ಲಿದ್ದ ಶೋಭಾ ಎಂಬವರು ಸಂಪಾಜೆ ವಲಯದ ಐ.ಸಿ.ಟಿ. ಘಟಕಕ್ಕೆ ವರ್ಗಾವಣೆಗೊಂಡು, ಕರ್ತವ್ಯ ವಹಿಸಿಕೊಂಡಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading