
ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಉಸ್ತುವಾರಿ ಎಂ.ವೆಂಕಪ್ಪ ಗೌಡರು ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನ ಮೂವರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಿ ನೇಮಕ ಮಾಡಿದ್ದಾರೆ. ಸುಳ್ಯವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಸಹ ಸಂಚಾಲಕರಾಗಿ ಗೋಕುಲ್ ದಾಸ್ ಸುಳ್ಯ, ಪ್ರಚಾರ ಸಮಿತಿಯ ಸಾಮಾಜಿಕ ಜಾಲತಾಣದ ಸಂಯೋಜಕರಾಗಿ ಚೇತನ್ ಕಜೆಗದ್ದೆ ಹಾಗೂ ಮಾಧ್ಯಮ ಸಂಯೋಜಕರಾಗಿ ಭವಾನಿಶಂಕರ್ ಕಲ್ಮಡ್ಕರನ್ನು ನೇಮಕಗೊಳಿಸಿ, ಆದೇಶ ಮಾಡಿದ್ದಾರೆ.