
ಸುಳ್ಯ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ಕನಕಮಜಲಿನ ಮಹಿಳೆಯೊಬ್ಬರ ಮೊಬೈಲ್ ಕಳ್ಳತನವಾಗಿರುವ ಘಟನೆ ಇಂದು ನಡೆದಿದೆ.
ಕನಕಮಜಲಿನ ನಿಶ್ಮಿತಾ ಎಂಬವರು ಸುಳ್ಯಕ್ಕೆ ಬಂದು ಸುಳ್ಯ ಬಸ್ ನಿಲ್ದಾಣದಿಂದ ಪುತ್ತೂರಿಗೆ ಬಸ್ ನಲ್ಲಿ ತೆರಳಿದ್ದರು. ಬಸ್ ನಲ್ಲಿ ಕುಳಿತುಕೊಳ್ಳಲು ಸೀಟು ಇಲ್ಲದಿದ್ದುದರಿಂದ ಸೀಟ್ ನಲ್ಲಿ ಕುಳಿತಿದ್ದ ಮಹಿಳೆಯೋರ್ವರ ಜತೆ ಬ್ಯಾಗ್ ನೀಡಿದರೆನ್ನಲಾಗಿದ್ದು, ಪುತ್ತೂರಲ್ಲಿ ಬ್ಯಾಗ್ ಪಡೆದುಕೊಂಡು ಕೆಲ ಸಮಯದ ಬಳಿಕ ಮೊಬೈಲ್ ಕಳ್ಳತನವಾಗಿರುವುದು ಗೊತ್ತಾಗಿದೆ. ಮೊಬೈಲ್ ನ ಕವರ್ ನಲ್ಲಿ 4000 ಹಣ ಕೂಡ ಇತ್ತು ಎನ್ನಲಾಗಿದೆ. ಪುತ್ತೂರಿನ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.