
ಹಳದಿ ಹಾಗೂ ಎಲೆಚುಕ್ಕಿ ರೋಗದಿಂದ ನಿರಂತರ ತೊಂದರೆ ಅನುಭವಿಸುತ್ತಿರುವ ಕೃಷಿಕರು ಇದೀಗ ಕಾಡು ಪ್ರಾಣಿಗಳ ಹಾವಳಿಯಿಂದ ಸಂಕಟಪಡುವಂತಾಗಿದೆ.
ಕಳೆದ ರಾತ್ರಿ ಕಲ್ಮಕಾರು ಗ್ರಾಮದ ಇಡ್ಯಡ್ಕ ಕೆ ಆರ್ ಗೋಪಾಲಕೃಷ್ಣ ಮತ್ತು ಗಂಗಾಧರ ಕೆ ಎಸ್ ಇವರ ತೋಟಕ್ಕೆ ಆನೆ ದಾಳಿ ನಡೆಸಿ ಬಾಳೆ ಹಾಗೂ ಅಡಿಕೆ ಮರಗಳಿಗೆ ಹಾನಿ ಮಾಡಿದ್ದು ಅಪಾರ ನಷ್ಟ ಉಂಟು ಮಾಡಿದೆ.